Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 24:59 - ಕನ್ನಡ ಸತ್ಯವೇದವು C.L. Bible (BSI)

59 ಆಗ ಅವರು ತಂಗಿ ರೆಬೆಕ್ಕಳನ್ನೂ ಆಕೆಯ ದಾದಿಯನ್ನೂ ಅಬ್ರಹಾಮನ ಸೇವಕನ ಮತ್ತು ಅವನ ಸಂಗಡಿಗರ ಜೊತೆಗೆ ಸಾಗಕಳುಹಿಸಿದರು, ಅಲ್ಲದೆ ರೆಬೆಕ್ಕಳನ್ನು ಹೀಗೆಂದು ಹರಸಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

59 ಆಗ ಅವರು ತಮ್ಮ ತಂಗಿಯಾದ ರೆಬೆಕ್ಕಳನ್ನೂ, ಅವಳ ದಾಸಿಯರನ್ನು, ಸಂಗಡ ಬಂದ ಅಬ್ರಹಾಮನ ಮನುಷ್ಯರ ಸಂಗಡ ಕಳುಹಿಸಿ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

59 ಆಕೆ - ಹೋಗುತ್ತೇನೆ ಅನ್ನಲು ಅವರು ತಮ್ಮ ತಂಗಿಯಾದ ರೆಬೆಕ್ಕಳನ್ನೂ ಆಕೆಯ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಸಂಗಡ ಬಂದ ಮನುಷ್ಯರನ್ನೂ ಸಾಗಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

59 ಆದ್ದರಿಂದ ಅವರು ರೆಬೆಕ್ಕಳನ್ನು ಅಬ್ರಹಾಮನ ಸೇವಕನೊಂದಿಗೂ ಅವನ ಸಂಗಡಿಗರೊಂದಿಗೂ ಕಳುಹಿಸಿಕೊಟ್ಟರು. ರೆಬೆಕ್ಕಳ ಸೇವಕಿ ಸಹ ಅವರೊಂದಿಗೆ ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

59 ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಸಾಗಕಳುಹಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 24:59
8 ತಿಳಿವುಗಳ ಹೋಲಿಕೆ  

ಅಲ್ಲಿರುವಾಗ ರೆಬೆಕ್ಕಳ ದಾದಿ ದೆಬೋರಳು ಸತ್ತುಹೋದಳು. ಆಕೆಯನ್ನು ಬೇತೇಲಿನ ಕಣಿವೆಯಲ್ಲಿರುವ ಮತ್ತೊಂದು ಓಕ್ ಮರದ ಬುಡದಲ್ಲಿ ಸಮಾಧಿಮಾಡಿ ಅದಕ್ಕೆ ‘ಅಲ್ಲೋನ್ ಬಾಕೂತ್’ ಎಂದು ಹೆಸರಿಟ್ಟರು.


ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಗಾಗಿ ಮಾತನಾಡುವವರಲ್ಲ, ಧನದಾಶೆಯನ್ನು ಮರೆಮಾಚುವ ವೇಷಧಾರಿಗಳೂ ಅಲ್ಲ. ಇದಕ್ಕೆ ದೇವರೇ ಸಾಕ್ಷಿ.


ನಿಮ್ಮ ದಯೆಗೆ ನಾನು ಅಯೋಗ್ಯನಾದೆನೇ? ‘ಮೊಲೆ ಕೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳತೆಕ್ಕೆಯಲ್ಲಿರಿಸಿ, ಅವರ ಪೂರ್ವಜರಿಗೆ ನಾನು ಪ್ರಮಾಣಮಾಡಿದ ನಾಡಿಗೆ ಒಯ್ಯಿ’ ಎಂದು ಹೇಳುತ್ತೀರಲ್ಲವೆ? ನಾನು ಇವರಿಗೆ ಹೆತ್ತ ತಾಯಿಯೋ?


“ಸಾವಿರ, ಹತ್ತು ಸಾವಿರ, ಸಂತತಿಯಾಗಲಿ, ಎಲೆ ತಂಗಿ ನಿನಗೆ; ವೈರಿಗಳ ನಗರಗಳು ಸ್ವಾಧೀನವಾಗಲಿ ನಿನ್ನ ಸಂತತಿಗೆ!”


ಬಳಿಕ ತಾನು ತಂದಿದ್ದ ಬೆಳ್ಳಿಬಂಗಾರದ ಒಡವೆಗಳನ್ನು ಹಾಗು ವಸ್ತ್ರಗಳನ್ನು ತೆಗೆದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಅಣ್ಣನಿಗೂ ತಾಯಿಗೂ ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟನು.


ಅದಕ್ಕೆ ಲಾಬಾನನು ಮತ್ತು ಬೆತೂವೇಲನು, ” ಇದು ಸರ್ವೇಶ್ವರ ಸ್ವಾಮಿಯಿಂದಲೇ ಬಂದ ಸೂಚನೆ, ಇದಕ್ಕೆ ನಾವು ನಿನಗೆ 'ಹೌದು - ಇಲ್ಲ’ ಎಂದು ಹೇಳಲಾಗದು.


ಅವನು ಮತ್ತು ಅವನ ಸಂಗಡ ಬಂದಿದ್ದವರು ಊಟ ಉಪಚಾರಗಳನ್ನು ಮುಗಿಸಿಕೊಂಡು ರಾತ್ರಿಯನ್ನು ಅಲ್ಲೇ ಕಳೆದರು. ಬೆಳಿಗ್ಗೆ ಎದ್ದು, “ನನ್ನೊಡೆಯನ ಬಳಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದ ಆ ಸೇವಕ.


“ಈ ಮನುಷ್ಯನ ಜೊತೆಯಲ್ಲಿ ಹೋಗುತ್ತೀಯಾ?” ಎಂದು ಕೇಳಿದರು. ಆಕೆ, “ಹೋಗುತ್ತೇನೆ,” ಎಂದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು