ಆದಿಕಾಂಡ 24:31 - ಕನ್ನಡ ಸತ್ಯವೇದವು C.L. Bible (BSI)31 “ಸರ್ವೇಶ್ವರ ಸ್ವಾಮಿಯಿಂದ ಆಶೀರ್ವಾದ ಪಡೆದವನೇ, ಮನೆಗೆ ಬಾ; ಇಲ್ಲಿ ಹೊರಗೇಕೆ ನಿಂತಿರುವೆ? ನಿನಗೆ ಮನೆ ಸಿದ್ಧವಾಗಿದೆ; ಒಂಟೆಗಳಿಗೆ ಬೇಕಾದ ಸ್ಥಳವಿದೆ,” ಎಂದು ಕರೆದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಅವನಿಗೆ, “ಯೆಹೋವನ ಆಶೀರ್ವಾದವನ್ನು ಹೊಂದಿದವನೇ, ಒಳಗೆ ಬಾ; ಯಾಕೆ ಹೊರಗೆ ನಿಂತಿರುತ್ತೀ? ನಿನಗೋಸ್ಕರ ನನ್ನ ಮನೆಯಲ್ಲಿ ಒಂಟೆಗಳಿಗೆ ಬೇಕಾದ ಸ್ಥಳವನ್ನೂ ಸಿದ್ಧಮಾಡಿದ್ದೇನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ಬಂದಾಗ ಅವನಿಗೆ - ಯೆಹೋವನ ದಯೆಯನ್ನು ಹೊಂದಿದವನೇ, ಒಳಕ್ಕೆ ಬಾ; ಯಾಕೆ ಹೊರಗೆ ನಿಂತಿರುತ್ತೀ? ನಿನಗೋಸ್ಕರ ನನ್ನ ಮನೆಯನ್ನೂ ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ಲಾಬಾನನು ಅವನಿಗೆ, “ಯೆಹೋವನ ಆಶೀರ್ವಾದ ಹೊಂದಿದವನೇ, ಒಳಗೆ ಬಾ. ನೀನು ಹೊರಗಡೆ ನಿಂತುಕೊಳ್ಳಬೇಕಾಗಿಲ್ಲ. ನೀನು ಇಳಿದುಕೊಳ್ಳುವುದಕ್ಕಾಗಿ ಕೋಣೆಯನ್ನೂ ನಿನ್ನ ಒಂಟೆಗಳಿಗಾಗಿ ಸ್ಥಳವನ್ನೂ ಸಿದ್ಧಪಡಿಸಿದ್ದೇನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ಲಾಬಾನನು ಅವನಿಗೆ, “ಯೆಹೋವ ದೇವರಿಂದ ಆಶೀರ್ವಾದ ಪಡೆದವನೇ, ಒಳಗೆ ಬಾ, ಏಕೆ ಹೊರಗೆ ನಿಂತಿರುವೆ? ನಾನು ಮನೆಯನ್ನೂ, ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ,” ಎಂದನು. ಅಧ್ಯಾಯವನ್ನು ನೋಡಿ |