Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 24:13 - ಕನ್ನಡ ಸತ್ಯವೇದವು C.L. Bible (BSI)

13 ಇಗೋ, ನೀರಿನ ಬುಗ್ಗೆಯ ಬಳಿಯಲ್ಲೇ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಇಗೋ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇಗೋ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಾನು ಈ ನೀರಿನ ಬಾವಿಯ ಬಳಿಯಲ್ಲಿ ನಿಂತಿರುತ್ತೇನೆ; ಈ ಊರಿನ ಯುವತಿಯರು ನೀರನ್ನು ತೆಗೆದುಕೊಳ್ಳಲು ಇಲ್ಲಿಗೆ ಬರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ. ಊರಿನ ಜನರ ಪುತ್ರಿಯರು ನೀರು ಸೇದುವುದಕ್ಕೆ ಹೊರಗೆ ಬರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 24:13
10 ತಿಳಿವುಗಳ ಹೋಲಿಕೆ  

ನೀರಿಗೆ ಬರುವ ಯಾವ ಹುಡುಗಿಗೆ ‘ದಯವಿಟ್ಟು ನಿನ್ನ ಕೊಡದಿಂದ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ನನಗೆ ಕೊಡು’ ಎಂದು ನಾನು ಹೇಳುವಾಗ ಅವಳು,


ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I ಭರವಸೆಯಿಂದಿರು, ಆತನದನು ಸಾಗಿಸುವನು II


ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, “ಕುಡಿಯಲು ಕೊಂಚ ನೀರು ಕೊಡು,” ಎಂದು ಕೇಳಿದರು.


ನಿನ್ನ ನಡತೆಯಲ್ಲೆಲ್ಲಾ ನಿವೇದಿಸು ಆತನನ್ನು, ಆಗ ಸರಾಗಮಾಡುವನು ನಿನ್ನ ಮಾರ್ಗವನ್ನು.


ಅವರಿಬ್ಬರೂ ಗುಡ್ಡ ಹತ್ತಿ ದೇವಪುರುಷನಿದ್ದ ಪಟ್ಟಣವನ್ನು ಸಮೀಪಿಸಿದರು. ನೀರು ಸೇದುವುದಕ್ಕಾಗಿ ಹೊರಗೆ ಬಂದಿದ್ದ ಮಹಿಳೆಯರನ್ನು ಕಂಡು, “ದಾರ್ಶನಿಕರು ಊರಲ್ಲಿ ಇದ್ದಾರೋ?” ಎಂದು ಕೇಳಲು, ಅವರು “ಹೌದು” ಎಂದರು.


ಸೇದುವ ಬಾವಿಗಳ ಬಳಿ ಕುಳಿತು ಕೊಳ್ಳೆಹಂಚಿಕೊಳ್ಳುವವರ ಧ್ವನಿಯನಾಲಿಸು! ವರ್ಣಿಸುತಿಹರವರು ಸರ್ವೇಶ್ವರ ಸಾಧಿಸಿದ ನೀತಿಯನು, ತನ್ನ ಪ್ರಜೆ ಇಸ್ರಯೇಲ್ ಊರುಗಳಲ್ಲಾತನು ಸ್ಥಾಪಿಸಿದ ನ್ಯಾಯವನು.


ಒಂದು ದಿನ ಮೋಶೆ ಆ ನಾಡಿನ ಬಾವಿಯೊಂದರ ಬಳಿ ಕುಳಿತಿದ್ದನು. ಮಿದ್ಯಾನರ ಪೂಜಾರಿಯ ಏಳು ಮಂದಿ ಹೆಣ್ಣು ಮಕ್ಕಳು ಅಲ್ಲಿಗೆ ಬಂದರು. ತಮ್ಮ ತಂದೆಯ ಕುರಿಗಳಿಗೆ ನೀರು ಕುಡಿಸುವುದಕ್ಕಾಗಿ ನೀರು ಸೇದಿ ತೊಟ್ಟಿಗಳಲ್ಲಿ ತುಂಬುತ್ತಿದ್ದರು.


ಸಂಜೆ, ಹೆಣ್ಣುಮಕ್ಕಳು ನೀರು ಹೊರುವುದಕ್ಕೆ ಬರುವ ವೇಳೆಗೆ, ಅವನು ಊರ ಹೊರಗಡೆ ಬಾವಿಯ ಬಳಿ ಒಂಟೆಗಳನ್ನು ಮಲಗಿಸಿದನು.


ನಾನು ಯಾವ ಹುಡುಗಿ಼ಗೆ ‘ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ಕುಡಿಯುವುದಕ್ಕೆ ಕೊಡು’ ಎಂದು ಹೇಳುವಾಗ ‘ನೀನೂ ಕುಡಿ, ನಿನ್ನ ಒಂಟೆಗಳಿಗೂ ಕುಡಿಯ ಕೊಡುತ್ತೇನೆ’ ಎನ್ನುತ್ತಾಳೋ ಅವಳೇ ನಿಮ್ಮ ದಾಸ ಇಸಾಕನಿಗೆ ನೀವು ಚುನಾಯಿಸಿರುವ ಕನ್ಯೆಯಾಗಲಿ. ನನ್ನೊಡೆಯನ ಮೇಲೆ ನಿಮ್ಮ ದಯೆಯಿದೆ ಎಂದು ಇದರಿಂದ ಗೊತ್ತಾಗುವುದು,” ಎಂದುಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು