Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 21:27 - ಕನ್ನಡ ಸತ್ಯವೇದವು C.L. Bible (BSI)

27 ಆಗ ಅಬ್ರಹಾಮನು ಅಬೀಮೆಲೆಕನಿಗೆ ದನಕುರಿಗಳನ್ನು ದಾನಮಾಡಿದನು. ಹೀಗೆ ಅವರಿಬ್ಬರು ಒಂದು ಒಪ್ಪಂದ ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆ ನಂತರ ಅಬ್ರಹಾಮನು ಕುರಿದನಗಳನ್ನು ಅಬೀಮೆಲೆಕನಿಗೆ ದಾನ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆಗ ಅಬ್ರಹಾಮನು ಅಬೀಮೆಲೆಕನಿಗೆ ಕುರಿದನಗಳನ್ನು ದಾನಮಾಡಿದನು. ಹೀಗೆ ಅವರಿಬ್ಬರೂ ಒಡಂಬಡಿಕೆಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆಗ ಅಬ್ರಹಾಮನು ಮತ್ತು ಅಬೀಮೆಲೆಕನು ಒಂದು ಒಪ್ಪಂದವನ್ನು ಮಾಡಿಕೊಂಡರು. ಅಬ್ರಹಾಮನು ಅವನಿಗೆ ಕೆಲವು ದನಕುರಿಗಳನ್ನು ಒಪ್ಪಂದದ ಗುರುತಾಗಿ ಕೊಟ್ಟನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಆಗ ಅಬ್ರಹಾಮನು ಕುರಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು. ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 21:27
15 ತಿಳಿವುಗಳ ಹೋಲಿಕೆ  

ಪ್ರಿಯ ಸಹೋದರರೇ, ದೈನಂದಿನ ಜೀವನದಿಂದ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ: ಒಬ್ಬನು ಮತ್ತೊಬ್ಬನೊಡನೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾನೆ. ಕ್ರಮಬದ್ಧವಾಗಿ ಅದನ್ನು ಮಾಡಿ ಮುಗಿಸಿದ ಮೇಲೆ ಯಾರೂ ಅದನ್ನು ರದ್ದುಮಾಡುವಂತಿಲ್ಲ, ಬದಲಾಯಿಸುವಂತಿಲ್ಲ.


ಮಾತ್ರವಲ್ಲ, ಅವರು ಅವಿವೇಕಿಗಳು, ಅಪ್ರಾಮಾಣಿಕರು, ನಿಷ್ಕರುಣಿಗಳು ಮತ್ತು ನಿರ್ದಯಿಗಳು.


ಮತ್ತು ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಪ್ಪಂದಮಾಡಿ ಅವನಿಂದ ಆಣೆಯಿಡಿಸಿದ.


ಆದರೆ ಧರ್ಮವಂತನು ಮಹತ್ಕಾರ್ಯಗಳಲ್ಲಿಯೇ ನಿರತನಾಗಿರುತ್ತಾನೆ.


ಗುಟ್ಟಾಗಿ ಬಹುಮಾನ ಕೊಟ್ಟು ಸಿಟ್ಟನ್ನು ಅಡಗಿಸುತ್ತಾರೆ; ಮಡಿಲಲ್ಲಿ ಲಂಚವನ್ನು ಮುಚ್ಚಿಟ್ಟು ಕೋಪವನ್ನು ಆರಿಸುತ್ತಾರೆ.


ಗೆಳೆಯರಂತೆ ನಟಿಸಿ ನಾಶಗೊಳಿಸುವವರು ಅನೇಕರುಂಟು; ಸಹೋದರನಿಗಿಂತ ಪ್ರಿಯನಾದ ಸ್ನೇಹಿತನೂ ಉಂಟು.


ಕಾಣಿಕೆ ತರುವವನಿಗೆ ಬಾಗಿಲು ತೆರೆಯುತ್ತದೆ; ಶ್ರೀಮಂತನ ಸಾನ್ನಿಧ್ಯಕ್ಕೂ ಅದು ನಡೆಸುತ್ತದೆ.


ಕೊಡುವವನ ಕಣ್ಣಿಗೆ ಲಂಚವು ಚಿಂತಾಮಣಿಯಂತೆ; ಎತ್ತ ತಿರುಗಿದರತ್ತ ಅದರಿಂದ ಜಯವಂತೆ!


ಯೋನಾತಾನನು ದಾವೀದನನ್ನು ತನ್ನ ಪ್ರಾಣಸ್ನೇಹಿತನನ್ನಾಗಿ ಪ್ರೀತಿಸುತ್ತಿದ್ದುದರಿಂದ ಅವನೊಂದಿಗೆ ಒಂದು ಒಪ್ಪಂದಮಾಡಿಕೊಂಡನು.


ಬಾ, ನಾನೂ ನೀನೂ ಒಂದು ಒಪ್ಪಂದ ಮಾಡಿಕೊಳ್ಳೋಣ; ಅದು ನನಗೂ ನಿನಗೂ ಸಾಕ್ಷಿಯಾಗಿರಲಿ,” ಎಂದು ಹೇಳಿದನು.


ತಪ್ಪಿಸಿಕೊಂಡು ಓಡಿಹೋದವರಲ್ಲಿ ಒಬ್ಬ ವ್ಯಕ್ತಿ ಹಿಬ್ರಿಯನಾದ ಅಬ್ರಾಮನ ಬಳಿಗೆ ಬಂದು ನಡೆದುದನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿ ವಾಸವಾಗಿದ್ದನು. ಮಮ್ರೆಯನಿಗೆ ಎಷ್ಕೋಲ ಮತ್ತು ಆನೇರ ಎಂಬ ಸಹೋದರರಿದ್ದರು. ಇವರಿಗೂ ಅಬ್ರಾಮನಿಗೂ ಒಪ್ಪಂದವಿತ್ತು.


ಅಬೀಮೆಲೆಕನು, “ಈ ಕೃತ್ಯವನ್ನು ಮಾಡಿದವರು ಯಾರೆಂದು ನಾನರಿಯೆ; ನೀನೂ ನನಗೆ ತಿಳಿಸಲಿಲ್ಲ; ಇಲ್ಲಿಯವರೆಗೆ ನಾನು ಈ ಸಂಗತಿಯನ್ನು ಕೇಳಿಯೂ ಇಲ್ಲ,” ಎಂದನು.


ಆದರೆ ಅಬ್ರಹಾಮನು ಹಿಂಡಿನ ಏಳು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು