Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 20:9 - ಕನ್ನಡ ಸತ್ಯವೇದವು C.L. Bible (BSI)

9 ಅನಂತರ ಅವನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಮಾಡಿದ್ದೇನು? ಯಾವ ತಪ್ಪಿಗಾಗಿ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಈ ಮಹಾ ಪಾತಕಕ್ಕೆ ಒಳಪಡಿಸಿದೆ? ಮಾಡಬಾರದ ಕಾರ್ಯವನ್ನು ನೀನು ಮಾಡಿದೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅಬೀಮೆಲೆಕನು ಅಬ್ರಹಾಮನನ್ನು ಕರೆದು, “ನೀನು ನಮಗೆ ಮಾಡಿದ್ದೇನು? ನಾನು ಯಾವ ಪಾಪ ಮಾಡಿದ್ದರಿಂದ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಮಹಾಪಾತಕಕ್ಕೆ ಒಳಪಡಿಸಿದಿ? ನೀನು ಮಾಡಬಾರದ ಕಾರ್ಯಗಳನ್ನು ಮಾಡಲು ನಾನು ನಿನಗೇನು ಮಾಡಿದೆ” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆಮೇಲೆ ಅವನು ಅಬ್ರಹಾಮನನ್ನು ಕರಿಸಿ - ನೀನು ನಮಗೆ ಮಾಡಿದ್ದೇನು? ನಾನು ಯಾವ ತಪ್ಪು ಮಾಡಿದ್ದರಿಂದ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಮಹಾಪಾತಕಕ್ಕೆ ಒಳಪಡಿಸಿದಿ? ಮಾಡಬಾರದ ಕಾರ್ಯಗಳನ್ನು ನನಗೆ ಮಾಡಿದೆ ಎಂದು ಹೇಳಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆಮೇಲೆ ಅಬೀಮೆಲೆಕನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಹೀಗೇಕೆ ಮಾಡಿದೆ? ನಿನಗೆ ವಿರೋಧವಾಗಿ ನಾನೇನು ಮಾಡಿದೆ? ಆಕೆ ತಂಗಿಯಾಗಬೇಕೆಂದು ನೀನೇಕೆ ಸುಳ್ಳು ಹೇಳಿದೆ? ನೀನು ನನ್ನ ರಾಜ್ಯಕ್ಕೆ ಕೇಡನ್ನು ಬರಮಾಡಿರುವೆ. ನೀನು ಹೀಗೆ ಮಾಡಬಾರದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅಬೀಮೆಲೆಕನು ಅಬ್ರಹಾಮನನ್ನು ಕರೆದು ಅವನಿಗೆ, “ನೀನು ನಮಗೆ ಮಾಡಿದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಿನಗೆ ನಾನು ಏನು ಅಪರಾಧ ಮಾಡಿದ್ದೇನೆ? ನೀನು ನನಗೆ ಮಾಡಬಾರದ ಕೆಲಸಗಳನ್ನು ಮಾಡಿದ್ದೀಯೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 20:9
20 ತಿಳಿವುಗಳ ಹೋಲಿಕೆ  

ಆಗ ಫರೋಹನು ಅಬ್ರಾಮನನ್ನು ಕರೆಸಿ, “ನೀನು ಮಾಡಿರುವುದೇನು?


ಈ ಮನೆಯಲ್ಲಿ ನನಗಿಂತ ಹೆಚ್ಚಿನ ಅಧಿಕಾರ ಪಡೆದವರು ಒಬ್ಬರೂ ಇಲ್ಲ; ನಿಮ್ಮನ್ನು ಬಿಟ್ಟು ಮಿಕ್ಕ ಎಲ್ಲವನ್ನು ನನಗೆ ಅಧೀನಮಾಡಿದ್ದಾರೆ. ನೀವು ಅವರ ಧರ್ಮಪತ್ನಿ ಅಲ್ಲವೆ? ಹೀಗಿರುವಲ್ಲಿ, ನಾನು ಇಂತಹ ಮಹಾದುಷ್ಕೃತ್ಯವೆಸಗಿ ದೇವರಿಗೆ ವಿರುದ್ಧ ಹೇಗೆ ಪಾಪಮಾಡಲಿ?” ಎಂದು ಆಕೆಗೆ ಉತ್ತರಕೊಟ್ಟ.


ಅದಕ್ಕೆ ಅಬೀಮೆಲೆಕನು, “ನೀನು ನಮಗೆ ಹೀಗೆ ಮಾಡಬಹುದೆ? ನಮ್ಮಲ್ಲಿ ಯಾರಾದರೊಬ್ಬನು ನಿನ್ನ ಹೆಂಡತಿಯನ್ನು ಕೂಡಿರಬಹುದಿತ್ತಲ್ಲವೆ? ಆಗ ನಿನ್ನಿಂದ ನನಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲವೆ?” ಎಂದು ಹೇಳಿದನು.


ವಿವಾಹಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.


ಇವರ ಬಾಯಿ ಮುಚ್ಚಿಸಬೇಕಾಗಿದೆ. ಏಕೆಂದರೆ, ಇವರು ಹಣಸಂಪಾದನೆಯ ದುರುದ್ದೇಶದಿಂದ ಮಾಡಬಾರದ ಬೋಧನೆಯನ್ನು ಮಾಡಿ ಅನೇಕ ಕುಟುಂಬಗಳನ್ನು ಹಾಳುಮಾಡುತ್ತಿದ್ದಾರೆ.


ನೆಟ್ಟಗೆ ನಡೆವವರನ್ನು ಕೆಟ್ಟದಾರಿಗೆ ಎಳೆಯುವವನು ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ನಿರ್ದೋಷಿಗಳು ಸುಖಸಂತೋಷಕ್ಕೆ ಬಾಧ್ಯಸ್ಥರು.


ಆಕೆ, “ಅಣ್ಣಾ, ಬೇಡ; ನನ್ನನ್ನು ಕೆಡಿಸಬೇಡ; ಇಸ್ರಯೇಲರಲ್ಲಿ ಇಂಥದು ನಡೆಯಬಾರದು.


ಇದನ್ನು ಕೇಳಿದ್ದೇ ದಾವೀದನು ಆ ವ್ಯಕ್ತಿಯ ಮೇಲೆ ಕಡುಕೋಪಗೊಂಡು ನಾತಾನನಿಗೆ, “ಸರ್ವೇಶ್ವರನಾಣೆ, ಆ ವ್ಯಕ್ತಿ ಸಾಯಲೇ ಬೇಕು.


ಯೆಹೋಶುವನು ಆಕಾನನಿಗೆ, “ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈ ದಿನ ಸರ್ವೇಶ್ವರ ನಿನ್ನ ಮೇಲೆ ಆಪತ್ತು ಬರಮಾಡುವರು,” ಎಂದ ಕೂಡಲೆ ಇಸ್ರಯೇಲರೆಲ್ಲರೂ ಅವನನ್ನು ಕಲ್ಲೆಸೆದು ಕೊಂದರು. ಕಲ್ಲೆಸೆದದ್ದು ಮಾತ್ರವಲ್ಲ, ಅವನಿಗೆ ಇದ್ದುದೆಲ್ಲವನ್ನೂ ಬೆಂಕಿಯಿಂದ ಸುಟ್ಟರು.


“ಯಾವನಾದರು ಪರಪತ್ನಿಯೊಡನೆ ವ್ಯಭಿಚಾರ ಮಾಡಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು.


ಇಸ್ರಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿದ್ದರಿಂದ ಸರ್ವೇಶ್ವರ ಅವರನ್ನು ದಂಡಿಸಿದರು.


ಅಲ್ಲದೆ, ಆರೋನನನ್ನು ಉದ್ದೇಶಿಸಿ, “ನೀನು ಈ ಜನರಿಂದ ಮಹಾಪಾಪವನ್ನು ಮಾಡಿಸಿರುವೆ. ಹೀಗೆ ಮಾಡಿಸಲು ಇವರು ನಿನಗೇನು ಮಾಡಿದರು,” ಎಂದು ವಿಚಾರಿಸಿದನು. ಅದಕ್ಕೆ ಆರೋನನು,


ಸುಮಾರು ಮೂರು ತಿಂಗಳಾದ ಬಳಿಕ, ಯೆಹೂದನಿಗೆ ತನ್ನ ಸೊಸೆ ತಾಮಾರಳು ವ್ಯಭಿಚಾರದಿಂದ ಗರ್ಭವತಿಯಾಗಿದ್ದಾಳೆಂಬ ಸಮಾಚಾರ ಬಂದಿತು. ಅವನು, “ಅವಳನ್ನು ಎಳೆದು ತನ್ನಿ; ಸುಟ್ಟುಹಾಕಬೇಕು,” ಎಂದನು.


ಇತ್ತ ಯಕೋಬನ ಗಂಡು ಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದರು. ಶೆಕೆಮನು ತಮ್ಮ ತಂಗಿಯನ್ನು ಬಲಾತ್ಕಾರದಿಂದ ಕೂಡಿ, ಮಾಡಬಾರದನ್ನು ಮಾಡಿ, ಇಸ್ರಯೇಲರಿಗೆ ಘನ ಅವಮಾನವನ್ನು ಮಾಡಿದ್ದರಿಂದ ಅವರು ತಳಮಳಗೊಂಡು ಕಡುಕೋಪದಿಂದ ಇದ್ದರು.


ಅಬೀಮೆಲೆಕನು ಬೆಳಿಗ್ಗೆ ಬೇಗನೆ ಎದ್ದು ತನ್ನ ಪರಿವಾರವನ್ನೆಲ್ಲಾ ಕೂಡಿಸಿದನು. ನಡೆದ ಸಂಗತಿಗಳನ್ನೆಲ್ಲ ತಿಳಿಸಿದಾಗ ಅವರಿಗೆ ಬಹಳ ಭಯವುಂಟಾಯಿತು.


ಅಲ್ಲದೆ, “ನೀನು ಯಾವ ಉದ್ದೇಶದಿಂದ ಹೀಗೆ ಮಾಡಿದೆ?” ಎಂದು ವಿಚಾರಿಸಿದನು.


ಆ ಹೆಣ್ಣು ಲೇಯಳೆಂದು ಯಕೋಬನಿಗೆ ಬೆಳಿಗ್ಗೆ ತಿಳಿಯಿತು. ಅವನು ಲಾಬಾನನಿಗೆ, “ನೀವು ನನಗೇಕೆ ಹೀಗೆ ಮಾಡಿದಿರಿ? ರಾಖೇಲಳಿಗಾಗಿ ಅಲ್ಲವೆ ನಾನು ನಿಮಗೆ ಸೇವೆಮಾಡಿದ್ದು? ನನಗೆ ಮೋಸಮಾಡಿದ್ದೇಕೆ?” ಎಂದು ಕೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು