Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 2:8 - ಕನ್ನಡ ಸತ್ಯವೇದವು C.L. Bible (BSI)

8 ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಇದಲ್ಲದೆ ಯೆಹೋವನಾದ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಸೃಷ್ಟಿಸಿ ತಾನು ಉಂಟುಮಾಡಿದ ಮನುಷ್ಯನನ್ನು ಅದರಲ್ಲಿ ತಂಗುವಂತೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಇದಲ್ಲದೆ ಯೆಹೋವದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ದೇವರಾದ ಯೆಹೋವನು ಪೂರ್ವ ದಿಕ್ಕಿನಲ್ಲಿದ್ದ ಏದೆನ್ ಸೀಮೆಯಲ್ಲಿ ಒಂದು ತೋಟವನ್ನು ಮಾಡಿ ತಾನು ಸೃಷ್ಟಿಸಿದ ಮನುಷ್ಯನನ್ನು ಆ ತೋಟದಲ್ಲಿರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಯೆಹೋವ ದೇವರು ಪೂರ್ವದಿಕ್ಕಿಗಿರುವ ಏದೆನ್ ಸೀಮೆಯಲ್ಲಿ ತೋಟವನ್ನು ಮಾಡಿ, ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 2:8
12 ತಿಳಿವುಗಳ ಹೋಲಿಕೆ  

ನೀನಿದ್ದೆ ದೇವರ ಉದ್ಯಾನವನದ ಏದೆನಿನೊಳು ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ಬೆರುಲ್ಲ, ವೈಡೂರ್ಯ, ನೀಲ, ಕೆಂಪರಲು, ಸ್ಫಟಿಕವೆಂಬ ನವರತ್ನಗಳಿಂದ ಭೂಷಿತನಾಗಿದ್ದೆ ನೀನು. ನಿನ್ನ ಕಿವಿಯೋಲೆ ಆಭರಣಗಳು ಸುವರ್ಣಖಚಿತವಾಗಿದ್ದವು. ನಿನ್ನ ಸೃಷ್ಟಿಯ ದಿನದಂದೇ ಸಿದ್ಧವಾಗಿದ್ದವವು.


ಅದಲ್ಲದೆ, ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕಾಗಿ ಆ ವನದ ಪೂರ್ವದಿಕ್ಕಿನಲ್ಲೆ ‘ಕೆರೂಬಿ’ಯರನ್ನೂ ಪ್ರಜ್ವಲಿಸುತ್ತಾ ಎಲ್ಲ ಕಡೆ ಸುತ್ತುವ ಕತ್ತಿಯನ್ನೂ ಇರಿಸಿದರು.


ಲೋಟನು ಕಣ್ಣೆತ್ತಿ ನೋಡಿದನು. ಜೋರ್ಡನ್ ನದಿಯ ಸುತ್ತಲಿನ ಪ್ರದೇಶ ಚೋಗರೂರಿನವರೆಗೂ ಎಲ್ಲೆಲ್ಲೂ ನೀರಾವರಿ ಆಗಿರುವುದು ಕಾಣಿಸಿತು. ಸರ್ವೇಶ್ವರ, ಸೋದೋಮ್ - ಗೊಮೋರ ಪಟ್ಟಣಗಳನ್ನು ವಿನಾಶ ಮಾಡುವುದಕ್ಕೆ ಮುಂಚೆ ಈ ಪ್ರಾಂತ್ಯವು ಸರ್ವೇಶ್ವರನ ಉದ್ಯಾನ ವನದಂತೆ, ಈಜಿಪ್ಟಿನ ದೇಶದಂತೆ, ನೀರಿನ ಸೌಕರ್ಯಪಡೆದಿತ್ತು.


ಅದರ ಮುಂದೆ ಕಬಳಿಸುವ ಬೆಂಕಿ; ಅದರ ಹಿಂದೆ ಧಗಧಗಿಸುವ ಜ್ವಾಲೆ. ಅದು ಬರುವ ಮುನ್ನ ನಾಡು ಏದೆನ್ ಉದ್ಯಾನವನ; ಅದು ದಾಟಿದ ನಂತರ ಸುಡುಗಾಡು. ಅದರ ಆಪತ್ತಿನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.


ಸರ್ವೇಶ್ವರನಾದ ನಾನು ಸಂತೈಸದೆ ಬಿಡೆನು ಸಿಯೋನನ್ನು, ಉದ್ಧರಿಸುವೆನು ಆ ಹಾಳುಬಿದ್ದ ಸ್ಥಳಗಳೆಲ್ಲವನು. ಮಾರ್ಪಡಿಸುವೆನು ಕಾಡುನೆಲವನು ಏದೆನ್ ಉದ್ಯಾನದಂತೆ ಮರುಭೂಮಿಯನು, ದೇವತೆಗಳ ಉದ್ಯಾನವಾಗುವಂತೆ ಹರ್ಷೋಲ್ಲಾಸ, ಸ್ತುತಿಸ್ತೋತ್ರ, ಮಧುರಗಾನ ಅಲ್ಲಿ ನೆಲೆಸುವಂತೆ.


ನನ್ನ ತಂದೆತಾತಂದಿರು ಗೋಜಾನ್, ಖಾರನ್, ರೆಚೆಫ್ ಎಂಬ ನಗರಗಳ ಜನರನ್ನು ಮತ್ತು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನು ನಾಶಮಾಡಿದರು. ಆಗ ಅವರ ದೇವರುಗಳು ಅವರನ್ನು ರಕ್ಷಿಸಲಾಗಲಿಲ್ಲ.


ಕಾಯಿನನು ಸರ್ವೇಶ್ವರ ಸ್ವಾಮಿಯ ಸಾನ್ನಿಧ್ಯದಿಂದ ಹೊರಟುಹೋಗಿ ಏದೆನ್ ನಾಡಿಗೆ ಪೂರ್ವಕ್ಕಿರುವ “ಅಲೆನಾಡು" ಎಂಬ ನಾಡಿನಲ್ಲಿ ವಾಸಮಾಡಿದನು.


ನಾನು ಅದನ್ನು ಪ್ರೇತಗಳ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ, ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು; ಮತ್ತು ಪೂರ್ವಕಾಲದಲ್ಲಿ ಅಧೋಲೋಕದ ಪಾಲಾದ ಏದೆನಿನ ಎಲ್ಲ ಮರಗಳು, ಲೆಬನೋನಿನ ಉತ್ತಮೋತ್ತಮ ವೃಕ್ಷಗಳು, ಅಂತು ನೀರಾವರಿಯ ಸಕಲ ಸಸ್ಯಗಳೂ ಅಲ್ಲಿ ಸಂತೈಸಿಕೊಂಡವು.


ಇಂಥಾ ವೈಭವದಿಂದ ಹಾಗೂ ಮಹಿಮೆಯಿಂದ ಕೂಡಿದ ನೀನು, ಏದೆನಿನ ವೃಕ್ಷಗಳಲ್ಲಿ ಯಾವುದಕ್ಕಿಂತ ಕಡಿಮೆ? ಆದರೂ ನೀನು ಏದೆನಿನ ವೃಕ್ಷಗಳೊಂದಿಗೆ ಅಧೋಲೋಕಕ್ಕೆ ದೂಡಿದವನಾಗಿ ಸುನ್ನತಿಹೀನರ ನಡುವೆ ಖಡ್ಗಹತರ ಸಂಗಡ ಒರಗಿಹೋಗುವೆ. ಫರೋಹನೂ ಅವನ ಎಲ್ಲಾ ಪ್ರಜೆಗಳೂ ಇದೇ ಗತಿಯನ್ನು ಹೊಂದುವರು. ಇದು ಸರ್ವೇಶ್ವರನಾದ ದೇವರ ನುಡಿ.”


ಹಾರಾನ್ ಕನ್ನೆ, ಏದೆನ್ ಸ್ಥಳಗಳವರು ಹಾಗೂ ಶೆಬ, ಅಸ್ಸೀರಿಯಾ, ಕಿಲ್ಮದ್ ಪ್ರಾಂತ್ಯಗಳ ವರ್ತಕರು,


ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡಲೆಂದು ಏದೆನ್ ತೋಟದಿಂದ ಹೊರಡಿಸಿಬಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು