Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 14:6 - ಕನ್ನಡ ಸತ್ಯವೇದವು C.L. Bible (BSI)

6 ಇದಲ್ಲದೆ ಎದೋಮ್ ಗುಡ್ಡ ಪ್ರಾಂತ್ಯದಲ್ಲಿ ವಾಸವಾಗಿದ್ದ ಹೋರಿಯರನ್ನು ಅಲ್ಲೇ ಸೋಲಿಸಿ, ಮರಳುಗಾಡಿಗೆ ಹತ್ತಿರವಿರುವ ಏಲ್ಪಾರಾನಿನವರೆಗೂ ಹಿಂದಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಇದಲ್ಲದೆ ಸೇಯೀರೆಂಬ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಹೋರಿಯರನ್ನು, ಅಲ್ಲೇ ಸೋಲಿಸಿ ಮರಳುಗಾಡಿನ ಹತ್ತಿರವಿರುವ ಎಲ್ಪಾರಾನಿನ ವರೆಗೂ ಹಿಂದಟ್ಟಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಇದಲ್ಲದೆ ಸೇಯೀರೆಂಬ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಹೋರಿಯರನ್ನು ಅಲ್ಲೇ ಸೋಲಿಸಿ ಮರಳುಕಾಡಿನ ಹತ್ತಿರವಿರುವ ಏಲ್ಪಾರಾನಿನವರೆಗೂ ಹಿಂದಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಇದಲ್ಲದೆ ಅವರು ಹೋರಿಯರನ್ನು ಬೆಟ್ಟದ ಸೀಮೆಯಿಂದ ಮರುಭೂಮಿಯ ಸಮೀಪದಲ್ಲಿರುವ ಎಲ್ಪಾರಾನಿನವರೆಗೂ ಹಿಂದಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವರ ಬೆಟ್ಟವಾದ ಸೇಯೀರನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸಮೀಪವಾದ ಏಲ್ಪಾರಾನಿನವರೆಗೂ ಅವರನ್ನು ಸೋಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 14:6
13 ತಿಳಿವುಗಳ ಹೋಲಿಕೆ  

ಆದರೆ ಹೇಗೆ ಸರ್ವೇಶ್ವರ ಸೇಯೀರಿನಲ್ಲಿರುವ ಏಸಾವ್ಯರ ಪರವಾಗಿ ಹೋರಿಯರನ್ನು ಹೊರದೂಡಿದಾಗ ಏಸಾವ್ಯರು ಆ ನಾಡನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ,


ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಯೇಲರು ತಮಗೆ ಸರ್ವೇಶ್ವರ ಕೊಟ್ಟ ನಾಡನ್ನು ಹೇಗೆ ಸ್ವಾಧೀನಮಾಡಿಕೊಂಡರೋ ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ ಅವರ ನಾಡಿನಲ್ಲಿ ವಾಸಮಾಡಿದರು.)


ಪಾರಾನಿನ ಅರಣ್ಯ ಅವನ ವಾಸಸ್ಥಳವಾಯಿತು. ಅವನ ತಾಯಿ ಈಜಿಪ್ಟಿನಿಂದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು.


ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಮರುಭೂಮಿಯಿಂದ ಇಸ್ರಯೇಲರ ಮುಖ್ಯಸ್ಥರನ್ನು ಕಳಿಸಿದನು.


ಅನಂತರ ಅವರು ಹಚೆರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡರು.


ಬರುತಿಹನು ದೇವನು ಎದೋಮಿನಿಂದ ಆ ಪರಮಪಾವನಸ್ವಾಮಿ ಪಾರಾನ್ ಪರ್ವತದಿಂದ. ಆವರಿಸುವುದು ಆತನ ಪ್ರಭಾವ ಆಕಾಶಮಂಡಲವನು ತುಂಬಿಹುದು ಆತನ ಮಹಿಮೆ ಭೂಮಂಡಲವನು.


ಆದ್ದರಿಂದ ಇಸ್ರಯೇಲರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣ ಮಾಡಿದರು. ಬಳಿಕ ಆ ಮೇಘ ಪಾರಾನ್ ಮರುಭೂಮಿಯಲ್ಲಿ ನಿಂತಿತು.


ಈ ಕಾರಣ ಏದೋಮನೆಂಬ ಏಸಾವನು ಸೇಯೀರ್ ಮಲೆನಾಡಿಗೆ ಹೋಗಿ ಅಲ್ಲೇ ವಾಸವಾಗಿದ್ದನು.


ಮರಳುಗಾಡಿನಲ್ಲಿ ಶೂರಿಗೆ ಹೋಗುವ ಹಾದಿಪಕ್ಕದಲ್ಲಿದ್ದ ಒಂದು ಒರತೆಯ ಬಳಿ ಸ್ವಾಮಿಯ ದೂತನು ಅವಳನ್ನು ಕಂಡನು.


ಬಳಿಕ ಯಕೋಬನು ಎದೋಮ್ಯರ ನಾಡಿನ ‘ಸೇಯೀರ್’ ಎಂಬಲ್ಲಿ ವಾಸವಾಗಿದ್ದ ತನ್ನ ಅಣ್ಣ ಏಸಾವನ ಬಳಿಗೆ ಮುಂದಾಳುಗಳನ್ನು ಕಳಿಸಿದನು.


ಅವರು ಮೊದಲು ಮಿದ್ಯಾನಿಗೂ ಆಮೇಲೆ ಪಾರಾನಿಗೂ ಬಂದರು. ಅಲ್ಲಿಂದ ಕೆಲವುಮಂದಿ ಪಾರಾನಿನ ಜನರನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಈಜಿಪ್ಟಿನ ಅರಸ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಆಹಾರವನ್ನು, ಮನೆಯನ್ನು ಹಾಗು ಭೂಮಿಯನ್ನು ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು