Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 12:9 - ಕನ್ನಡ ಸತ್ಯವೇದವು C.L. Bible (BSI)

9 ತರುವಾಯ ಅಲ್ಲಿಂದ ಮುಂದ ಮುಂದಕ್ಕೆ ಸಾಗುತ್ತಾ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್‍ದೇಶದ ದಕ್ಷಿಣಸೀಮೆಗೆ ಮುಂದೆ ಮುಂದೆ ಹೋಗುತ್ತಾ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ತರುವಾಯ ಅವನು ಮತ್ತೆ ಪ್ರಯಾಣವನ್ನು ಮುಂದುವರಿಸಿ ನೆಗೆವ್ ಸ್ಥಳದ ಕಡೆಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅಬ್ರಾಮನು ಪ್ರಯಾಣಮಾಡಿ, ನೆಗೆವ ಕಡೆಗೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 12:9
10 ತಿಳಿವುಗಳ ಹೋಲಿಕೆ  

ಅಲ್ಲಿಂದ ಮುಂದೆ ಪ್ರಯಾಣ ಮಾಡುತ್ತಾ


ಇತ್ತ ಇಸಾಕನು ‘ಲಹೈರೋಯಿ’ ಎಂಬಲ್ಲಿಗೆ ಹೋಗಿ ಬಂದು ಕಾನಾನ್ ನಾಡಿನ ದಕ್ಷಿಣ ಪ್ರಾಂತದಲ್ಲಿ ವಾಸಮಾಡುತ್ತಿದ್ದನು.


ಅಬ್ರಾಮನು ತನ್ನದುದನ್ನೆಲ್ಲಾ ತೆಗೆದುಕೊಂಡು ಹೆಂಡತಿ ಮತ್ತು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.


ಅಬ್ರಹಾಮನು ಅಲ್ಲಿಂದ ಕಾನಾನ್ ನಾಡಿನ ದಕ್ಷಿಣ ಪ್ರಾಂತಕ್ಕೆ ಪ್ರಯಾಣ ಮಾಡುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸಮಾಡಿದನು. ಕೆಲವು ಕಾಲ ಗೆರಾರಿನಲ್ಲೂ ಇದ್ದನು.


ಕಾನಾನ್ ನಾಡನ್ನು ಸಂಚರಿಸಿ ನೋಡಿ ಬರುವುದಕ್ಕೆ ಅವರನ್ನು ಕಳಿಸುವಾಗ ಮೋಶೆ ಹೀಗೆಂದು ಸಂಬೋಧಿಸಿದನು: “ನೀವು ನೆಗೆಬಾ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ.


ಈಗ ಹಿಂದಿರುಗಿ ಅಮೋರಿಯರು ಇರುವ ಮಲೆನಾಡಿಗೂ ಅದರ ಸುತ್ತಮುತ್ತಲಿನ ಪ್ರದೇಶಕ್ಕೂ ಪ್ರಯಾಣಮಾಡಿರಿ. ಅಲ್ಲಿನ ಕಣಿವೆ, ತಪ್ಪಲು, ಇಳಕಲು ಪ್ರದೇಶಗಳಿಗೂ ದಕ್ಷಿಣಸೀಮೆ, ಸಮುದ್ರತೀರ ಎಂಬ ನಾಡುಗಳಿಗೂ ಕಾನಾನ್ಯರ ನಾಡು, ಲೆಬನೋನ್ ಪರ್ವತ ಮತ್ತು ಯೂಫ್ರೆಟಿಸ್ ಮಹಾನದಿಯವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶಗಳಿಗೂ ತೆರಳಿರಿ.


ನೆಗೇಬಿನ ಮೃಗಗಳನ್ನು ಕುರಿತ ದೈವವಾಣಿ : ಸಿಂಹಸಿಂಹಿಣಿಗಳಿಂದಲೂ ವಿಷಸರ್ಪ - ಘಟಸರ್ಪಗಳಿಂದಲೂ ಕೂಡಿದ ಭಯಂಕರ ಹಾಗೂ ಸಂಕಟಕರವಾದ ಆ ನಾಡಿನ ಮಾರ್ಗವಾಗಿ ತಮ್ಮ ಧನಕನಕಗಳನ್ನು ಕತ್ತೆಗಳ ಮೇಲೂ ಆಸ್ತಿಪಾಸ್ತಿಗಳನ್ನು ಒಂಟೆಗಳ ಮೇಲೂ ಹೊರಿಸಿಕೊಂಡು ನಿಷ್ಪ್ರಯೋಜಕವಾದ ಆ ರಾಷ್ಟ್ರಕ್ಕೆ ಹೋಗುತ್ತಾರೆ.


ನಾನು ದೇವರ ಸಂಕಲ್ಪಕ್ಕೆ ತಲೆಬಾಗಿ, ತಂದೆಯ ಮನೆಯನ್ನು ಬಿಟ್ಟು, ದೇಶಾಂತರ ಹೋಗಲು ಹೊರಟಾಗ ಈಕೆಗೆ, ‘ನಿನ್ನಿಂದ ನನಗೊಂದು ಉಪಕಾರವಾಗಬೇಕು; ಅದೇನೆಂದರೆ, ನಾವು ಹೋದಕಡೆಯೆಲ್ಲಾ ನಾನು ನಿನಗೆ ಅಣ್ಣನಾಗಬೇಕೆಂದು ಹೇಳು,’ ಎಂದು ತಿಳಿಸಿದೆ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು