Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 12:12 - ಕನ್ನಡ ಸತ್ಯವೇದವು C.L. Bible (BSI)

12 ಈಜಿಪ್ಟಿನವರು ನಿನ್ನನ್ನು ನೋಡಿ, ನೀನು ನನ್ನ ಹೆಂಡತಿಯಾಗಿರಬಹುದೆಂದು ಊಹಿಸಿ, ನನ್ನನ್ನು ಕೊಂದು ನಿನ್ನನ್ನು ಜೀವದಿಂದ ಉಳಿಸಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಐಗುಪ್ತ ದೇಶದವರು ನಿನ್ನನ್ನು ಕಂಡು, ಈಕೆಯು ಇವನ ಹೆಂಡತಿ ಎಂದು ತಿಳಿದು ನನ್ನನ್ನು ಕೊಂದು ನಿನ್ನನ್ನು ಉಳಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ; ಐಗುಪ್ತದೇಶದವರು ನಿನ್ನನ್ನು ಕಂಡು - ಈಕೆಯು ಇವನ ಹೆಂಡತಿ ಎಂದು ನನ್ನನ್ನು ಕೊಂದು ನಿನ್ನನ್ನು ಉಳಿಸಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಈಜಿಪ್ಟಿನ ಗಂಡಸರು ನಿನ್ನನ್ನು ನೋಡಿ, ‘ಈಕೆ ಇವನ ಹೆಂಡತಿ’ ಎಂದು ತಿಳಿದು ನಿನ್ನನ್ನು ಪಡೆದುಕೊಳ್ಳುವುದಕ್ಕಾಗಿ ನನ್ನನ್ನು ಕೊಂದು ನಿನ್ನನ್ನು ಜೀವಂತವಾಗಿ ಉಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಹೀಗಿರುವುದರಿಂದ ಈಜಿಪ್ಟಿನವರು ನಿನ್ನನ್ನು ಕಂಡು, ‘ಈಕೆಯು ಅವನ ಹೆಂಡತಿ’ ಎಂದು ಹೇಳಿ, ನನ್ನನ್ನು ಕೊಂದುಹಾಕಿ, ನಿನ್ನನ್ನು ಉಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 12:12
6 ತಿಳಿವುಗಳ ಹೋಲಿಕೆ  

ಅದಕ್ಕೆ ಅಬ್ರಹಾಮನು, “ಇಲ್ಲಿಯ ಜನರಿಗೆ ದೇವರಲ್ಲಿ ಭಯಭಕ್ತಿಯಿಲ್ಲವೆಂದೂ ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರು ಎಂದೂ ಭಾವಿಸಿದೆ.


ಅಲ್ಲಿಯ ಜನರು ಅವನ ಹೆಂಡತಿಯ ವಿಷಯವಾಗಿ ವಿಚಾರಿಸಿದರು. “ಅವಳು ನನ್ನ ತಂಗಿ”, ಎಂದು ಇಸಾಕನು ಹೇಳಿದನು. ರೆಬೆಕ್ಕಳು ಬಲು ಚೆಲುವೆಯಾಗಿದ್ದರಿಂದ ಆಕೆಯ ನಿಮಿತ್ತ ತನ್ನನ್ನು ಕೊಂದಾರು ಎಂದು ಹೆದರಿ ಹಾಗೆ ಹೇಳಿದನು.


ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ.


ಮಾನವರಿಗೆ ಹೆದರಿ ನಡೆವವನು ಬಲೆಗೆ ಸಿಕ್ಕಿಬೀಳುವನು; ಸರ್ವೇಶ್ವರನಲ್ಲಿ ನಂಬಿಕೆಯಿಟ್ಟವನು ಸಂರಕ್ಷಣೆ ಹೊಂದುವನು.


ದಾವೀದನು ತನ್ನ ಮನಸ್ಸಿನಲ್ಲೇ, “ನಾನು ಇಲ್ಲಿದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಮಡಿಯಲೇ ಬೇಕು. ಆದುದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವುದೇ ಉತ್ತಮ. ಆಮೇಲೆ ಸೌಲನು ಇಸ್ರಯೇಲ್ ಪ್ರಾಂತ್ಯಗಳಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟುಬಿಡುವನು. ನಾನು ಅವನ ಕೈಯಿಂದ ತಪ್ಪಿಸಿಕೊಂಡು ಸುರಕ್ಷಿತನಾಗಿರುವೆನು,” ಎಂದುಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು