Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 10:32 - ಕನ್ನಡ ಸತ್ಯವೇದವು C.L. Bible (BSI)

32 ಸಂತತಿ - ಜನಾಂಗಗಳ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಜನಾಂಗಗಳ ಸಂತತಿಯ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಸಂತತಿ ಜನಾಂಗಗಳ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದನಂತರ ಭೂವಿುಯ ಮೇಲೆ ಹರಡಿಕೊಂಡ ಜನಾಂಗಗಳವರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ನೋಹನ ಗಂಡುಮಕ್ಕಳಿಂದ ಉಂಟಾದ ವಂಶಗಳವರ ಪಟ್ಟಿಯಿದು. ಅವರು ತಮ್ಮ ಜನಾಂಗಗಳಿಗನುಸಾರವಾಗಿ ಹರಡಿಕೊಂಡಿದ್ದರು. ಜಲಪ್ರಳಯದ ನಂತರ ಭೂಮಿಯಲ್ಲೆಲ್ಲಾ ಹರಡಿಕೊಂಡವರು ಈ ವಂಶಗಳವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರವಾಗಿ ನೋಹನ ಪುತ್ರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ಹರಡಿಕೊಂಡವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 10:32
12 ತಿಳಿವುಗಳ ಹೋಲಿಕೆ  

ಜಗದಲ್ಲೆಲ್ಲ ಹರಡಿಕೊಂಡಿರುವ ಜನರು ನೋಹನ ಈ ಮೂರು ಮಕ್ಕಳಿಂದಲೇ ಉತ್ಪತ್ತಿಯಾದುದು.


ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ.


ನೋಹನ ಮಕ್ಕಳಾದ ಶೇಮ್, ಹಾಮ್ ಮತ್ತು ಯೆಫೆತರಿಗೆ ಜಲಪ್ರಳಯ ಮುಗಿದ ಮೇಲೆ ಮಕ್ಕಳಾದರು. ಅವರ ವಂಶಾವಳಿ ಇದು :


ಎಬರನಿಗೆ ಇಬ್ಬರು ಮಕ್ಕಳು. ಒಬ್ಬನಿಗೆ ಪೆಲೆಗೆಂಬ ಹೆಸರು. ಇವನ ಕಾಲದಲ್ಲೇ ಭೂಜನದ ವಿಭಜನೆ ಆದುದು. ಅವನ ತಮ್ಮನ ಹೆಸರು ಯೊಕ್ತಾನ್.


ಕುಲ - ಭಾಷಾ - ದೇಶ - ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.


ನೀವು ಹೆಚ್ಚಿ ಅಭಿವೃದ್ಧಿಯಾಗಿರಿ, ನಿಮ್ಮ ಸಂಖ್ಯೆ ಬೆಳೆಯಲಿ ಭೂಮಿಯಲ್ಲಿ."


ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು - “ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ’; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ.


ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.


ಭೂಜನರೆಲ್ಲರಿಗೂ ಇದ್ದುದು ಒಂದೇ ಭಾಷೆ, ಒಂದೇ ನುಡಿ.


ದೇಶ - ಭಾಷಾ - ಕುಲ - ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು.


ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲ ಪರದೇಶೀಯರು ಅವರ ಮಧ್ಯೆ ಹಾದುಹೋಗುವಂತಿರಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು