Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಆದಿಕಾಂಡ 1:9 - ಕನ್ನಡ ಸತ್ಯವೇದವು C.L. Bible (BSI)

9 ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ; ಒಣನೆಲವು ಕಾಣಿಸಿಕೊಳ್ಳಲಿ,” ಎಂದರು. ಹಾಗೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅನಂತರ ದೇವರು - ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣನೆಲವು ಕಾಣಿಸಲಿ ಅಂದನು; ಹಾಗೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಬಳಿಕ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಟ್ಟಿಗೆ ಸೇರಿಕೊಂಡು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆಗ ದೇವರು, “ಆಕಾಶದ ಕೆಳಗಿರುವ ನೀರು ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣ ನೆಲವು ಕಾಣಿಸಲಿ,” ಎಂದರು. ಅದು ಹಾಗೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಆದಿಕಾಂಡ 1:9
17 ತಿಳಿವುಗಳ ಹೋಲಿಕೆ  

ಆದರೆ, ಅವರು ಒಂದು ವಿಷಯವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಅದೇನೆಂದರೆ, ಪ್ರಾರಂಭದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದಿಂದಲೇ ಉಂಟಾದವು. ಜಲದಿಂದ, ಜಲದ ಮೂಲಕ ಭೂಮಿ ಉಂಟಾಯಿತು.


ಅದಕ್ಕೆ ಯೋನನು: “ನಾನು ಹಿಬ್ರಿಯನು. ಸಮುದ್ರವನ್ನೂ ಭೂಮಿಯನ್ನೂ ಸೃಷ್ಟಿಸಿದ ಪರಲೋಕ ದೇವರಾದ ಸರ್ವೇಶ್ವರನ ಭಕ್ತನು ನಾನು,” ಎಂದು ಉತ್ತರಿಸಿದನು.


ನೀವು ನನಗೆ ಅಂಜುವುದಿಲ್ಲವೋ? ನನ್ನೆದುರಿಗೆ ನಡುಗುವುದಿಲ್ಲವೊ? ಕಡಲು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದವನು ನಾನು.ತೆರೆಗಳು ಅಲ್ಲಕಲ್ಲೋಲವಾದರೂ ಅದನ್ನು ಮೀರಲಾರವು. ಭೋರ್ಗರೆದರೂ ಹಾಯಲಾರವು.


ಸಮುದ್ರವು ಆತನದೆ-ಅದ ನಿರ್ಮಿಸಿದವ ಆತನೆ I ಒಣನೆಲವು ಆತನದೆ-ಅದ ರೂಪಿಸಿದವ ಆತನೆ II


ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ, ಆದರೂ ಸಮುದ್ರವು ತುಂಬುವುದಿಲ್ಲ. ಅವು ಎಲ್ಲಿಂದ ಹರಿದು ಬರುತ್ತವೋ ಅಲ್ಲಿಗೆ ಹಿಂತಿರುಗಿ ಹೋಗುತ್ತವೆ.


ತುಂಬಿಟ್ಟಿಹನು ಜಲರಾಶಿಗಳನು ಕಡಲೆಂಬ ಕುಡಿಕೆಯಲಿ I ಕೂಡಿಟ್ಟಿಹನು ಜಲಾಶಯಗಳನು ಬುವಿಯುಗ್ರಾಣದಲಿ II


ಬೆಳಕು-ಕತ್ತಲು ಸಂಧಿಸುವ ಸ್ಥಾನದಲಿ ಮೇರೆಹಾಕಿದ್ದಾನೆ ಸಮುದ್ರದ ಸುತ್ತಲಲಿ.


ಅನಂತರ ಸ್ವರ್ಗ, ಭೂಮಿ, ಸಮುದ್ರ ಇವುಗಳನ್ನೂ ಇವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ಹಾಗು ಯುಗಯುಗಾಂತರಕ್ಕೂ ಜೀವಿಸುವ ದೇವರ ಹೆಸರಿನಲ್ಲಿ ಶಪಥಮಾಡಿ ಹೀಗೆ ಹೇಳಿದನು : “ಇನ್ನು ನಿಧಾನಿಸುವಂತಿಲ್ಲ;


ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ I ಮಾಡುವೆ ಸಂಚಾರ ಮಾರುತನ ರೆಕ್ಕೆಗಳ ಮೇಲೆ I ನಿನಗೆ ರಥವಾಹನಗಳು ಆ ಮುಗಿಲು ಮೋಡಗಳೇ II


ಉತ್ತರ ದಿಕ್ಕನ್ನು ವಿಸ್ತರಿಸಿಹನು ಶೂನ್ಯದ ಮೇಲೆ ಭೂಮಂಡಲವನ್ನು ತೂಗುಹಾಕಿಹನು ಏನೂ ಇಲ್ಲದರ ಮೇಲೆ.


ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು.


ಹೇ ಸರ್ವೇಶ್ವರಾ, ನೀವೊಬ್ಬರೇ ದೇವರು; ಉನ್ನತೋನ್ನತ ಆಕಾಶವನು, ಅದರ ಪರಿವಾರಗಳನು ಬುವಿಯನು, ಕಡಲನು, ಅದರ ಸರ್ವಜಲಚರಗಳನು ಸೃಷ್ಟಿಸಿದಾತ ನೀವು; ಸಮಸ್ತ ಪ್ರಾಣಿಗಳಿಗು ಜೀವಾಧಾರ ನೀವು; ಆರಾಧಿಸುತ್ತವೆ ನಿಮ್ಮನು ಆಕಾಶದ ಪರಿವಾರಗಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು