Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 9:6 - ಕನ್ನಡ ಸತ್ಯವೇದವು C.L. Bible (BSI)

6 ಆದರೆ ಕೆಲವರು ನರಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿದ್ದರು. ಆದ್ದರಿಂದ ಪಾಸ್ಕಹಬ್ಬವನ್ನು ನಿಯಮಿತ ದಿನದಂದು ಆಚರಿಸಲಾಗಲಿಲ್ಲ. ಅವರು ಮೋಶೆ - ಆರೋನರ ಬಳಿಗೆ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದರೆ ಕೆಲವು ಜನರಿಗೆ ಮನುಷ್ಯನ ಶವಸೋಂಕು ಇದ್ದುದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗದೆ ಮೋಶೆ ಮತ್ತು ಆರೋನರ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆದರೆ ಕೆಲವು ಜನರು ಮನುಷ್ಯ ಶವ ಸೋಂಕಿದದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾರದೆ ಮೋಶೆ ಆರೋನರ ಬಳಿಗೆ ಬಂದು ಮೋಶೆಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದರೆ ಕೆಲವು ಜನರು ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ. ಆದ್ದರಿಂದ ಅವರು ಆ ದಿನ ಮೋಶೆ ಆರೋನರ ಬಳಿಗೆ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆದರೆ ಕೆಲವು ಜನರು ಮನುಷ್ಯನ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿವಸದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ ಅದಕ್ಕೆ ಅದೇ ದಿನ ಅವರು ಮೋಶೆ ಮತ್ತು ಆರೋನರ ಬಳಿಗೆ ಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 9:6
16 ತಿಳಿವುಗಳ ಹೋಲಿಕೆ  

ಇವರು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್, ಕುಲಾಧಿಪತಿಗಳು ಹಾಗು ಸರ್ವಸಮೂಹದವರ ಮುಂದೆ ಬಂದು ತಮ್ಮ ಒಂದು ವಿಜ್ಞಾಪನೆಯನ್ನು ಮುಂದಿಟ್ಟರು:


ಅದಕ್ಕೆ ಮೋಶೆ, “ದೇವರ ತೀರ್ಪನ್ನು ತಿಳಿದುಕೊಳ್ಳುವುದಕ್ಕಾಗಿ ಜನರು ನನ್ನ ಹತ್ತಿರ ಬರುತ್ತಾರೆ;


ಹೊರಗೆ ಬಯಲಿನಲ್ಲಿರುವ ಯಾವನಿಗಾದರೂ ಶಸ್ತ್ರಹತನ ಶವವಾಗಲಿ, ಬೇರೆ ಯಾವ ಮಾನುಷ್ಯ ಶವವಾಗಲಿ, ಮನುಷ್ಯನ ಎಲುಬಾಗಲಿ ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಮಡಿಗೆಟ್ಟವನಾಗಿರಬೇಕು.


“ಮನುಷ್ಯನ ಶವವನ್ನು ಸೋಂಕಿದವನು ಏಳು ದಿನಗಳವರೆಗೆ ಮಡಿಗೆಟ್ಟವನಾಗಿರಬೇಕು.


“ಕುಷ್ಠರೋಗಿಗಳಂಥ ಎಲ್ಲ ಅಂಟುರೋಗಿಗಳನ್ನು ಮೇಹಸ್ರಾವವುಳ್ಳವರನ್ನು ಹಾಗೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಯೇಲರಿಗೆ ಆಜ್ಞಾಪಿಸು.


ಆಮೇಲೆ ಅವರು ಯೇಸುವನ್ನು ಕಾಯಫನ ಮನೆಯಿಂದ ರಾಜ್ಯಪಾಲನ ನಿವಾಸಕ್ಕೆ ಕೊಂಡೊಯ್ದರು. ಆಗ ಮುಂಜಾನೆ, ಅರಮನೆಯೊಳಗೆ ಹೋದರೆ ಮಡಿಗೆಟ್ಟು ಹಬ್ಬದೂಟಕ್ಕೆ ಅಡ್ಡಿಯಾದೀತೆಂದು ಅವರೆಲ್ಲರು ಹೊರಗೇ ನಿಂತರು.


ಬಳಿಕ ಮೈಲಿಗೆಯಾಗದವನೊಬ್ಬನು ಆ ನೀರನ್ನು ಹಿಸ್ಸೋಪ್ ಗಿಡದ ಗೊಂಚಲಿನಿಂದ ಸಾವಾದ, ಆ ಡೇರೆಯ ಮೇಲೂ ಅದರಲ್ಲಿರುವ ಸಲಕರಣೆಗಳ ಮೇಲೂ ವ್ಯಕ್ತಿಗಳ ಮೇಲೂ ಚಿಮುಕಿಸಬೇಕು. ಹಾಗೆಯೇ ಎಲುಬಾಗಲಿ, ಹತನಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯಾಗಲಿ ಯಾರಿಗೆ ಸೋಂಕಿತೋ ಅವರ ಮೇಲೆಯೂ ಚಿಮುಕಿಸಬೇಕು.


ಇವರು ಸದಾ ಜನರಿಗೆ ನ್ಯಾಯತೀರಿಸುವವರಾದರು. ಜಟಿಲವಾದ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸುಲಭವಾದುವುಗಳನ್ನು ಅವರೇ ತೀರಿಸುತ್ತಾ ಬಂದರು.


ಆದ್ದರಿಂದ ನನ್ನ ಮಾತನ್ನು ಕೇಳು; ನಾನು ಕೊಡುವ ಸಲಹೆಯನ್ನು ಗಮನಿಸು, ದೇವರು ನಿನ್ನೊಡನೆ ಇರುವರು. ನೀನು ಜನರಿಗೂ ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಮುಂದೆ ತರುವುದೇನೋ ಸರಿ.


ಮೋಶೆ ಅವರ ವಿಜ್ಞಾಪನೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ವಿಚಾರಿಸಿದನು. ಅವರು ಆತನಿಗೆ ಹೀಗೆಂದು ವಿಧಿಸಿದರು:


ಅವನನ್ನು ಮೋಶೆ, ಆರೋನ್ ಹಾಗೂ ಸರ್ವಸಮುದಾಯದ ಬಳಿಗೆ ಹಿಡಿದುಕೊಂಡು ಬಂದರು.


ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. ಆ ವ್ಯಕ್ತಿಯ ತಾಯಿ ದಾನ್ ಕುಲದ ದಿಬ್ರೀಯ ಮಗಳು ‘ಶೆಲೋಮೀತ್’ ಎಂದು ಅವಳ ಹೆಸರು.


ಅವನು ಶವವಿರುವ ಯಾವ ಸ್ಥಳಕ್ಕೂ ಹೋಗಬಾರದು. ತಂದೆ ತಾಯಿಗಳ ಮರಣದ ನಿಮಿತ್ತ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು.


“ನರಶವದ ಸೋಂಕಿನಿಂದ ನಾವು ಅಶುದ್ಧರಾದೆವು. ನಿಯಮಿತ ಕಾಲದಲ್ಲಿ ಮಿಕ್ಕ ಇಸ್ರಯೇಲರೊಡನೆ ಸರ್ವೇಶ್ವರನಿಗೆ ಬಲಿಯನ್ನು ಸಮರ್ಪಿಸಲು ನಮಗೆ ಅಪ್ಪಣೆಯಿಲ್ಲವೆ?” ಎಂದು ವಿಚಾರಿಸಿದರು.


“ಮೈಲಿಗೆ ನಿಯಮವಿದು: ಯಾರಾದರೂ ಡೇರೆಯೊಳಗೆ ಸತ್ತ ಸಂದರ್ಭದಲ್ಲಿ ಆ ಡೇರೆಯೊಳಗಿರುವವರೆಲ್ಲರು ಹಾಗು ಅದರೊಳಗೆ ಬರುವವರು ಕೂಡ ಮೈಲಿಗೆಯಾಗಿರುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು