Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 7:84 - ಕನ್ನಡ ಸತ್ಯವೇದವು C.L. Bible (BSI)

84 ಬಲಿಪೀಠವನ್ನು ಅಭಿಷೇಕಿಸಲಾದ ದಿನದಂದು ಇಸ್ರಯೇಲರ ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಸಮರ್ಪಿಸಿದ ಕಾಣಿಕೆಗಳು ಒಟ್ಟು: 12 ಬೆಳ್ಳಿಯ ಹರಿವಾಣಗಳು; 12 ಬೆಳ್ಳಿಯ ಬಟ್ಟಲುಗಳು; 12 ಚಿನ್ನದ ಧೂಪಾರತಿಗಳು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

84 ಯಜ್ಞವೇದಿ ಅಭಿಷೇಕಿಸಲ್ಪಟ್ಟ ದಿನದಲ್ಲಿ ಇಸ್ರಾಯೇಲರ ಕುಲಾಧಿಪತಿಗಳು, ಅದರ ಪ್ರತಿಷ್ಠೆಗಾಗಿ ಕೊಟ್ಟ ಕಾಣಿಕೆಗಳು ಒಟ್ಟಾಗಿ 12 ಬೆಳ್ಳಿಯ ತಟ್ಟೆಗಳು, 12 ಬೆಳ್ಳಿಯ ಬಟ್ಟಲುಗಳು, 12 ಚಿನ್ನದ ಧೂಪಾರತಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

84 ಯಜ್ಞವೇದಿಯು ಅಭಿಷೇಕಿಸಲ್ಪಟ್ಟ ದಿನದಲ್ಲಿ ಇಸ್ರಾಯೇಲ್ಯರ ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಕೊಟ್ಟ ಕಾಣಿಕೆಗಳು ಒಟ್ಟಾಗಿ 12 ಬೆಳ್ಳಿಯ ಹರಿವಾಣಗಳು,12 ಬೆಳ್ಳಿಯ ಬಟ್ಟಲುಗಳು,12 ಚಿನ್ನದ ಧೂಪಾರತಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

84 ಇವೆಲ್ಲವೂ ಇಸ್ರೇಲರ ಪ್ರಧಾನರು ತಂದ ಕಾಣಿಕೆಗಳು. ಯಜ್ಞವೇದಿಕೆಯನ್ನು ಅಭಿಷೇಕಿಸಿ ಪ್ರತಿಷ್ಠಿಸಿದಾಗ ಯಜ್ಞವೇದಿಕೆಗೋಸ್ಕರ ಅವರು ಕೊಟ್ಟ ಕಾಣಿಕೆಗಳು ಇವುಗಳೇ. ಅವರು ಹನ್ನೆರಡು ಬೆಳ್ಳಿಯ ತಟ್ಟೆಗಳನ್ನೂ ಹನ್ನೆರಡು ಬೆಳ್ಳಿಯ ಬಟ್ಟಲುಗಳನ್ನೂ ಹನ್ನೆರಡು ಚಿನ್ನದ ಧೂಪಾರತಿಗಳನ್ನೂ ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

84 ಇದು ಬಲಿಪೀಠದ ಪ್ರತಿಷ್ಠೆಗಾಗಿ ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು: ಬೆಳ್ಳಿಯ 12 ತಟ್ಟೆಗಳೂ, ಬೆಳ್ಳಿಯ 12 ಬಟ್ಟಲುಗಳೂ, ಬಂಗಾರದ 12 ಚಮಚಗಳೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 7:84
11 ತಿಳಿವುಗಳ ಹೋಲಿಕೆ  

ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಕಾಣಿಕೆಗಳನ್ನು ತಂದು ಅದರ ಮುಂದೆ ಇಟ್ಟರು.


ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.


ನಮಗೊಂದು ಬಲಿಪೀಠವಿದೆ; ಅಲ್ಲಿ ಅರ್ಪಿಸಲಾಗುವ ಬಲಿಯನ್ನು ಭುಜಿಸಲು ಯೆಹೂದ್ಯ ಗುಡಾರಗಳಲ್ಲಿ ಸೇವೆಸಲ್ಲಿಸುವ ಯಾಜಕರಿಗೆ ಹಕ್ಕಿಲ್ಲ.


ಮೋಶೆ ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ಮೇಲೆ ಅದನ್ನೂ ಅದರ ಸಾಮಾನುಗಳನ್ನೂ ಹಾಗೂ ಬಲಿಪೀಠವನ್ನು ಅದರ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು.


ಮೇಜಿನ ಮೇಲಿಡಬೇಕಾದ ತಟ್ಟೆಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು, ಪಾನಾರ್ಪಣೆಗೆ ಬೇಕಾದ ಬಟ್ಟಲುಗಳನ್ನು ಅಪ್ಪಟ ಬಂಗಾರದಿಂದಲೇ ಮಾಡಿಸಬೇಕು.


ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಏನಾನನ ಮಗ ಅಹೀರನು ಸಮರ್ಪಿಸಿದ ಕಾಣಿಕೆಗಳು.


ಒಂದೊಂದು ಬೆಳ್ಳಿಯ ಹರಿವಾಣ 130 ಶೆಕೆಲ್ ತೂಕವುಳ್ಳದ್ದಾಗಿತ್ತು; ಒಂದೊಂದು ಬೆಳ್ಳಿಯ ಬಟ್ಟಲು 70 ಶೆಕೆಲ್ ತೂಕವುಳ್ಳದ್ದಾಗಿತ್ತು; ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವಸ್ಥಾನದ ನಾಣ್ಯದ ತೂಕದ ಮೇರೆಗೆ 2400 ಶೆಕೆಲ್ ತೂಕ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು