Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 4:4 - ಕನ್ನಡ ಸತ್ಯವೇದವು C.L. Bible (BSI)

4 “ಕೆಹಾತ್ಯರು ಕೈಗೊಳ್ಳಬೇಕಾದ ಕರ್ತವ್ಯಗಳು ಇವು: ದೇವದರ್ಶನದ ಗುಡಾರದಲ್ಲಿ ಪರಮ ಪವಿತ್ರವಾದ ವಸ್ತುಗಳನ್ನು ಅವರು ನೋಡಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ದೇವದರ್ಶನ ಗುಡಾರದ ವಿಷಯದಲ್ಲಿ ಕೆಹಾತ್ಯರು ಮಾಡಬೇಕಾದ ಕೆಲಸ ಯಾವುದೆಂದರೆ; ಅವರು ಮಹಾಪರಿಶುದ್ಧ ವಸ್ತುಗಳನ್ನು ನೋಡಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ದೇವದರ್ಶನದ ಗುಡಾರದ ವಿಷಯದಲ್ಲಿ ಕೆಹಾತ್ಯರು ಮಾಡಬೇಕಾದ ಕೆಲಸ ಯಾವದಂದರೆ - ಅವರು ಮಹಾಪರಿಶುದ್ಧ ವಸ್ತುಗಳನ್ನು ನೋಡಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅವರು ದೇವದರ್ಶನಗುಡಾರದಲ್ಲಿರುವ ಮಹಾ ಪರಿಶುದ್ಧವಸ್ತುಗಳನ್ನು ನೋಡಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 “ದೇವದರ್ಶನದ ಗುಡಾರದಲ್ಲಿ ಕೊಹಾತ್ಯರು ಮಾಡುವ ಸೇವೆ ಯಾವುದೆಂದರೆ, ದೇವದರ್ಶನ ಗುಡಾರದ ಅತಿಪರಿಶುದ್ಧವಾದ ವಸ್ತುಗಳನ್ನು ಕಾಪಾಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 4:4
11 ತಿಳಿವುಗಳ ಹೋಲಿಕೆ  

ಪರಮ ಪವಿತ್ರವಾದ ವಸ್ತುಗಳ ಹತ್ತಿರಕ್ಕೆ ಬರುವಾಗ ಅವರು ಸಾಯದಂತೆ ಎಚ್ಚರಿಕೆ ವಹಿಸಿರಿ. ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಅವರವರ ಕೆಲಸಗಳನ್ನು ಹೊರಬೇಕಾದ ಹೊರೆಗಳನ್ನು ಗೊತ್ತುಮಾಡಬೇಕು.


ಪ್ರವಾಸಕ್ಕೆಂದು ಯಜಮಾನನೊಬ್ಬನು ಮನೆಬಿಟ್ಟು ಹೋಗುವಾಗ ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜವಾಬ್ದಾರಿಕೆಯನ್ನು ವಹಿಸಿ, ದ್ವಾರಪಾಲಕನಿಗೆ ‘ನೀನು ಎಚ್ಚರವಾಗಿರಬೇಕು,’ ಎಂದು ಅಪ್ಪಣೆಕೊಡುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ;


ದೇವದರ್ಶನದ ಗುಡಾರದ ಸೇವೆಮಾಡಲು ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಕೆಮಾಡು.


“ಪರಿಚರ್ಯ ಮಾಡುವುದರಲ್ಲೂ ಹೊರೆಗಳನ್ನು ಹೊರುವುದರಲ್ಲೂ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇವು:


ಆರೋನನು ಮತ್ತು ಅವನ ಮಕ್ಕಳು ದಂಡು ಹೊರಡುವ ಕಾಲದಲ್ಲಿ ದೇವಸ್ಥಾನದ ಎಲ್ಲ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು. ಮುಟ್ಟಿದರೆ ಬದುಕಲಾರರು. ಕೆಹಾತ್ಯರು ದೇವದರ್ಶನದ ಗುಡಾರದ ಸಲಕರಣೆಗಳಲ್ಲಿ ಹೊರಬೇಕಾದವುಗಳು ಇವೇ.


ದಂಡು ಹೊರಡುವಾಗ ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಗರ್ಭಗುಡಿಯನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಬೇಕು.


ಅವರ ಹಿಂದೆ ಕೆಹಾತ್ಯರು ದೇವಸ್ಥಾನದ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಮಿಕ್ಕ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.


ಕೆಹಾತ್ಯರಿಗೆ ಮಾತ್ರ ಏನನ್ನೂ ಕೊಡಲಿಲ್ಲ. ಏಕೆಂದರೆ ದೇವದರ್ಶನದ ಗುಡಾರದ ಸಾಮಾನುಗಳನ್ನು ಸಾಗಿಸುವುದೇ ಅವರಿಗೆ ನೇಮಕವಾದ ಕೆಲಸವಾಗಿತ್ತು. ಅವರು ಅವುಗಳನ್ನು ಹೆಗಲ ಮೇಲೆ ಹೊರಬೇಕಾಗಿತ್ತು.


ಇದಲ್ಲದೆ, ಆ ಲೇವಿಯರನ್ನು ಗೇರ್ಷೋನ್ಯರು,ಮಕೆಹಾತ್ಯರು, ಮೆರಾರೀಯರು ಎಂಬ ಮೂರು ವರ್ಗಗಳಾಗಿ ವಿಂಗಡಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು