Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 32:13 - ಕನ್ನಡ ಸತ್ಯವೇದವು C.L. Bible (BSI)

13 ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ತಮ್ಮ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳವರಾಗಿದ್ದ ಆ ಪೀಳಿಗೆಯವರೆಲ್ಲರು ನಾಶವಾಗುವ ತನಕ, ಅಂದರೆ ನಾಲ್ವತ್ತುವರ್ಷ ಕಾಲ, ಇಸ್ರಯೇಲರನ್ನು ಮರುಭೂಮಿಯಲ್ಲೆ ಅಲೆಯುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೆಹೋವನು ಇಸ್ರಾಯೇಲರ ಮೇಲೆ ಕೋಪಗೊಂಡವನಾಗಿ ತನ್ನ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳ ಆ ಸಂತತಿಯವರೆಲ್ಲರೂ ನಾಶವಾಗುವ ತನಕ ನಲ್ವತ್ತು ವರ್ಷ, ಇಸ್ರಾಯೇಲರನ್ನು ಮರುಭೂಮಿಯಲ್ಲೇ ತಿರುಗಾಡುವಂತೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಯೆಹೋವನು ಇಸ್ರಾಯೇಲ್ಯರ ಮೇಲೆ ಕೋಪಗೊಂಡವನಾಗಿ ತನ್ನ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳ ಆ ಸಂತತಿಯವರೆಲ್ಲರೂ ನಾಶವಾಗುವ ತನಕ, ಅಂದರೆ ನಾಲ್ವತ್ತು ವರುಷಕಾಲ, ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ತಿರುಗಾಡ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 “ಆದ್ದರಿಂದ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, ತನ್ನನ್ನು ಬೇಸರಗೊಳಿಸಿದ್ದ ಇಡೀ ತಲೆಮಾರು ಸಾಯುವತನಕ ಇಸ್ರೇಲರನ್ನು ಮರುಭೂಮಿಯಲ್ಲಿ ನಲವತ್ತು ವರ್ಷಗಳ ಕಾಲ ಅಲೆದಾಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪೋದ್ರೇಕಗೊಂಡದ್ದರಿಂದ, ಅವರ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಂತತಿಯು ದಹಿಸುವವರೆಗೆ ಅವರನ್ನು ಮರುಭೂಮಿಯಲ್ಲಿ ನಲವತ್ತು ವರ್ಷ ಅಲೆದಾಡುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 32:13
15 ತಿಳಿವುಗಳ ಹೋಲಿಕೆ  

ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲೆ ಮಡಿದು ಮಣ್ಣುಪಾಲಾದರು.


ಆರಿಸಿದನು ಊದಿ ಅವರ ಬಾಳ ಹಣತೆಯನು I ಬರಮಾಡಿದನು ಅವರಿಗೆ ಭೀಕರ ಮರಣವನು II


ನೀವಾದರೋ ಈ ಮರುಭೂಮಿಯಲ್ಲೇ ಬೀಳುವ ತನಕ


“ನೀವು ಕೈಹಾಕಿದ ಎಲ್ಲ ಕೆಲಸಗಳನ್ನೂ ನಿಮ್ಮ ದೇವರಾದ ಸರ್ವೇಶ್ವರ ಸಫಲಪಡಿಸಿದ್ದಾರೆ. ಈ ದೊಡ್ಡ ಮರುಭೂಮಿಯಲ್ಲಿ ನೀವು ಸಂಚರಿಸುತ್ತಿರುವಾಗಲೆಲ್ಲ ಅವರು ನಿಮ್ಮನ್ನು ಪರಾಂಬರಿಸುತ್ತಾ ಬಂದರು. ಈ ನಲವತ್ತು ವರ್ಷ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮೊಂದಿಗೆ ಇದ್ದುದರಿಂದಲೆ ನಿಮಗೆ ಏನೂ ಕಡಿಮೆಯಾಗಲಿಲ್ಲ,” ಎಂದು ಹೇಳಿದನು.


ಅಲೆದರು ಮರುಳುಗಾಡಿನಲಿ ದಾರಿಕಾಣದೆ I ಬಳಲಿದರು ಜನರಿರುವ ಊರು ಸಿಗದೆ II


ಇಸ್ರಯೇಲರು ಜನವಾಸವಿರುವ ಪ್ರದೇಶಕ್ಕೆ ಬರುವ ತನಕ ಅಂದರೆ ಕಾನಾನ್ ನಾಡಿನ ಮೇರೆಯನ್ನು ಸೇರುವ ತನಕ ನಾಲ್ವತ್ತು ವರ್ಷ ಮನ್ನವನ್ನೇ ಊಟ ಮಾಡುತ್ತಿದ್ದರು.


ಆದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆಹೊಡೆಯುವವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿಬಿಟ್ಟರು. ಆ ಶತ್ರುಗಳ ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು.


ಆದ್ದರಿಂದ ಸರ್ವೇಶ್ವರನ ಕೋಪ ಇಸ್ರಯೇಲರ ಮೇಲೆ ಉರಿಯುತ್ತಲೇ ಇತ್ತು; “ಈ ಜನರ ಪೂರ್ವಜರಿಗೆ ನಾನು ಕೊಟ್ಟ ನಿಬಂಧನೆಯನ್ನು ಇವರು ಪಾಲಿಸಲಿಲ್ಲ, ನನ್ನ ಮಾತಿಗೆ ಕಿವಿಗೊಡಲಿಲ್ಲ.


ನಲವತ್ತು ವರುಷ ಆ ಪೀಳಿಗೆಯ ಬಗ್ಗೆ ನಾ ಬೇಸರಗೊಂಡೆ I ‘ತಪ್ಪುಮನಸ್ಕರು ಇವರು, ನನ್ನ ಮಾರ್ಗವನು ಮೆಚ್ಚರಿವರು’ ಎಂದುಕೊಂಡೆ II


“ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲಮಾಡುವೆನು.


ಈಜಿಪ್ಟಿನಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ಕಾಲ ಅರಣ್ಯದ ಮಾರ್ಗವಾಗಿ ನಿಮ್ಮನ್ನು ನಡೆಸಿ ಕರೆತಂದು, ಅಮೋರ್ಯದವರ ನಾಡನ್ನು ನಿಮಗೆ ದೊರಕಿಸಿಕೊಟ್ಟವನು ನಾನೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು