Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 32:1 - ಕನ್ನಡ ಸತ್ಯವೇದವು C.L. Bible (BSI)

1 ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಾಗಿದ್ದವು. ಯಗ್ಜೇರ್ ಹಾಗು ಗಿಲ್ಯಾದ್ ಪ್ರದೇಶಗಳನ್ನು ದನಕುರಿಗಳ ಮೇವಿಗೆ ತಕ್ಕ ಸ್ಥಳ ಎಂದು ಅವರು ನೋಡಿ ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ರೂಬೇನ್ ಕುಲದವರಿಗೂ, ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಯಗ್ಜೇರ್, ಗಿಲ್ಯಾದ್ ಎಂಬ ಪ್ರದೇಶವನ್ನು ನೋಡಿದಾಗ ಅವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್, ಗಿಲ್ಯಾದ್ ಎಂಬ ಪ್ರದೇಶಗಳನ್ನು ನೋಡಿದಾಗ ಅವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್ ಮತ್ತು ಗಿಲ್ಯಾದ್ ಪ್ರದೇಶಗಳನ್ನು ನೋಡಿದಾಗ ಅವು ಅವರ ಪಶುಗಳ ಮೇವಿಗೆ ಒಳ್ಳೆಯ ಸ್ಥಳವೆಂದು ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಅಧಿಕ ಸಂಖೆಯಲ್ಲಿ ಪಶುಗಳು ಇದ್ದವು. ಅವರು ಯಜ್ಜೇರ್, ಗಿಲ್ಯಾದ್ ಎಂಬ ದೇಶಗಳನ್ನು ನೋಡಿದಾಗ, ಅದು ಪಶುಗಳಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 32:1
30 ತಿಳಿವುಗಳ ಹೋಲಿಕೆ  

ಬಳಿಕ ಮೋಶೆ ಯಗ್ಜೇರನ್ನು ನೋಡಿ ಬರಲು ಗೂಢಚಾರರನ್ನು ಕಳಿಸಿದನು. ಇದಾದ ಬಳಿಕ ಇಸ್ರಯೇಲರು ಅದರ ಗ್ರಾಮಗಳನ್ನು ವಶಪಡಿಸಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.


ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮಾ,


ಸರ್ವೇಶ್ವರ ಸ್ವಾಮಿ ಇಸ್ರಯೇಲರಿಗೆ ಅಧೀನಪಡಿಸಿರುವ ಈ ಪ್ರದೇಶ, ಅಂದರೆ ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬಿಯೋನ್ ಎಂಬ ಪಟ್ಟಣಗಳನ್ನು ಒಳಗೊಂಡ ಈ ಪ್ರದೇಶ ದನಕುರಿಗಳ ಮೇವಿಗೆ ಹುಲುಸಾದ ಪ್ರದೇಶ.


ಲೋಕಸಂಬಂಧವಾದ ದೈಹಿಕ ದುರಿಚ್ಛೆ, ಕಣ್ಣಿನ ಕಾಮುಕತೆ, ಐಶ್ವರ್ಯದ ಅಹಂಭಾವ - ಇಂಥವು ಪಿತನಿಂದ ಬಂದುವಲ್ಲ, ಲೋಕದಿಂದಲೇ ಬಂದುವು.


ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ.


ಇಸ್ರಯೇಲೆಂಬ ಮಂದೆಯನ್ನು ಮರಳಿ ಅದರ ಹುಲ್ಲುಗಾವಲಿಗೆ ಸೇರಿಸುವೆನು. ಅದು ಕರ್ಮೆಲಿನಲ್ಲೂ ಭಾಷಾನಿನಲ್ಲೂ ಮೇಯುವುದು. ಎಫ್ರಯಿಮಿನ ಮತ್ತು ಗಿಲ್ಯಾದಿನ ಗುಡ್ಡಗಳಲ್ಲಿ ಹೊಟ್ಟೆತುಂಬ ತಿನ್ನುವುದು.


ಅವರು ಜೋರ್ಡನ್ ನದಿಯನ್ನು ದಾಟಿ ಗಾದ್ ತಗ್ಗಿನಲ್ಲಿರುವ ಪಟ್ಟಣದ ಬಲಪಾರ್ಶ್ವದಲ್ಲಿರುವ ಅರೋಯೇರಿನಿಂದ ತೊಡಗಿ,


ಹೆಷ್ಬೋನಿನ ಅರಸ ಸೀಹೋನನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಗಿಲ್ಯಾದಿನ ಎಲ್ಲ ನಗರಗಳು, ರಬ್ಬಾ ಊರಿನ ಪೂರ್ವದಲ್ಲಿ ಇರುವ ಅರೋಯೇರ್ ನಗರದವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧರಾಜ್ಯ,


ನಮ್ಮ ಮಡದಿ ಮಕ್ಕಳೂ ದನಕುರಿಗಳೂ ಇಲ್ಲೇ ಗಿಲ್ಯಾದ್ ನಾಡಿನ ಊರುಗಳಲ್ಲಿರಲಿ.


ಅವರೊಂದಿಗೆ ಬಹುಮಂದಿ ಅನ್ಯದೇಶೀಯರೂ ಹೊರಟು ಬಂದಿದ್ದರು. ಕುರಿ, ದನ ಮುಂತಾದ ಪಶುಪ್ರಾಣಿಗಳು ಬಹಳವಿದ್ದವು.


ಕಾನಾನ್ ನಾಡಿನಲ್ಲಿ ಬರವು ಘೋರವಾದ್ದರಿಂದ ನಿಮ್ಮ ಸೇವಕರ ದನಕುರಿಗಳಿಗೆ ಮೇವು ಸಿಕ್ಕಲಿಲ್ಲ. ಆದ್ದರಿಂದ ಈ ದೇಶದಲ್ಲಿ ಸ್ವಲ್ಪಕಾಲ ಇರಬೇಕೆಂದು ಬಂದಿದ್ದೇವೆ. ಸೇವಕರು ಗೋಷೆನ್ ಪ್ರಾಂತ್ಯದಲ್ಲಿ ವಾಸಮಾಡುವಂತೆ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದರು.


ಲೇಯಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. “ಸರ್ವೇಶ್ವರ ನನ್ನ ದೀನ ಸ್ಥಿತಿಯನ್ನು ನೋಡಿದ್ದಾರೆ, ಇನ್ನು ಮುಂದೆ ಗಂಡ ನನ್ನನ್ನು ಪ್ರೀತಿಸುತ್ತಾನೆ,” ಎಂದುಕೊಂಡು ಆ ಮಗುವಿಗೆ ‘ರೂಬೇನ್’ ಎಂದು ಹೆಸರಿಟ್ಟಳು.


ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೆ ಕುರಿಮಂದೆಗಳೂ ದನಕರುಗಳೂ ಗುಡಾರಬಿಡಾರಗಳೂ ಇದ್ದವು.


ಈಗ ಅವನಿಗೆ ಪಶುಪ್ರಾಣಿಗಳಿದ್ದವು. ಬೆಳ್ಳಿಬಂಗಾರವಿತ್ತು. ಅವನೀಗ ಘನಧನವಂತನಾಗಿದ್ದನು.


ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರ್ ಇವರ ಬಳಿಗೂ ಸಮಾಜದ ಮುಖಂಡರ ಬಳಿಗೂ ಅವರು ಬಂದು,


ತನಗೆಂದು ತೆಗೆದುಕೊಂಡನು ನಾಡಿನ ಮೊದಲಭಾಗವನು ದೊರಕಿತಲ್ಲಿ ಅವನಿಗೆ ಮುಖ್ಯಸ್ಥನಿಗಾಗುವ ಸ್ವಾಸ್ತ್ಯವು. ಜನಾಧಿಪತಿಗಳ ಜೊತೆಬಂದು ನೆರವೇರಿಸಿದನು ಸರ್ವೇಶ್ವರನ ಆಣತಿಯನು; ಇಸ್ರಯೇಲನೊಡನೆ ಸ್ಥಾಪಿಸಿದನು ಸರ್ವೇಶ್ವರನ ನ್ಯಾಯನೀತಿಯನು.”


ಆಗ ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಕುಲದ ಅರ್ಧಜನರು ಕಾನಾನ್ ನಾಡಿನ ಶಿಲೋವಿನಲ್ಲಿದ್ದ ಇಸ್ರಯೇಲರನ್ನು ಬಿಟ್ಟು ಸರ್ವೇಶ್ವರನ ಆಜ್ಞೆಗನುಸಾರ ಮೋಶೆಯಿಂದ ತಮಗೆ ದೊರಕಿದ ಸೊತ್ತಾದ ಗಿಲ್ಯಾದ್ ನಾಡಿಗೆ ಹೋದರು.


ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು: ರೂಬೇನ್ಯರೇ, ನೀವೇಕೆ ಕೂತಿರಿ ಕುರಿಹಟ್ಟಿಗಳಲಿ? ಮಂದೆಗಳ ಮಧ್ಯೆಯಲಿ ಕೇಳಬೇಕೆಂದೋ ಅಪಾಯದ ಸಿಳ್ಳು ಸದ್ದನು? ಹೌದು ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು.


ಹೌದು, ಜುದೇಯದ ಅರಸನ ಮನೆತನವನ್ನು ಕುರಿತು ಸರ್ವೇಶ್ವರ ಹೀಗೆನ್ನುತ್ತಾರೆ : “ನನ್ನ ದೃಷ್ಟಿಗೆ ನೀನಿರುವೆ ಗಿಲ್ಯಾದಿನಂತೆ, ಲೆಬನೋನಿನ ಶಿಖರದಂತೆ ಆದರೆ ನಿನ್ನನ್ನು ಮರುಭೂಮಿಯಂತೆ , ನಿರ್ಜನಪ್ರದೇಶದಂತೆ ಮಾಡುವೆನೆಂಬುದು ನಿಶ್ಚಯ.


ಅದಕ್ಕೆ ಮೊದಲು ಗಿಲ್ಯಾದಿನಲ್ಲಿರುವ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಕುಲದ ಅರ್ಧಜನರ ಬಳಿಗೆ ಯಾಜಕ ಎಲ್ಲಾಜಾರನ ಮಗ ಫೀನೆಹಾಸನನ್ನು


ಯಗ್ಜೇರಿಗೂ ಅಲ್ಲಿಂದ ಗಿಲ್ಯಾದ್ ಪ್ರಾಂತ್ಯ, ತಖ್ತೀಮ್ ಹೊಜೀಪ್ರದೇಶ ಇವುಗಳ ಮೇಲೆ ಯಾನಿನ ದಾನ್ ಎಂಬಲ್ಲಿಗೂ ಬಂದರು.


ಯೆಹೂದದ ಅರಸ ಹಿಜ್ಕೀಯನ ಕಾಲದಲ್ಲಿ ಮೇಲೆ ನಮೂದಿಸಿದ ಪುರುಷರು ಅಲ್ಲಿ ವಾಸಿಸುತ್ತಿದ್ದ ಹಾಮ್ಯರನ್ನೂ ಮೆಗೂನ್ಯರನ್ನೂ ಜಯಿಸಿ ಎಲ್ಲರನ್ನೂ ನಿರ್ನಾಮ ಮಾಡಿದರು. ತಮ್ಮ ಆಡುಕುರಿಗಳಿಗಾಗಿ ಧಾರಾಳವಾಗಿ ಹುಲ್ಲುಗಾವಲುಗಳಿದ್ದುದರಿಂದ ಅಲ್ಲಿಯೇ ಸ್ಥಿರವಾಗಿ ನೆಲೆಸಿದರು.


ಗಿಲ್ಯಾದಿನಲ್ಲಿ ಔಷಧವಿಲ್ಲವೆ? ಅಲ್ಲಿ ವೈದ್ಯನು ಸಿಕ್ಕನೆ? ಮತ್ತೇಕೆ ಗುಣವಾಗಲಿಲ್ಲ ನನ್ನ ಜನತೆಗೆ?


‘ಸಿಬ್ಮ’ದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ದುಃಖಿಸುವುದಕ್ಕಿಂತಲು ನಿನ್ನನ್ನು ಕಂಡು ಹೆಚ್ಚಾಗಿ ದುಃಖಿಸುತ್ತೇನೆ. ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿವೆ. ಈಗ ನಿನ್ನ ಹಣ್ಣುಹಂಪಲುಗಳ ಮೇಲೆ ಹಾಗು ದ್ರಾಕ್ಷೆಯ ಸುಗ್ಗಿಯ ಮೇಲೆ ಸೂರೆಗಾರ ಬಂದೆರಗಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು