Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 31:13 - ಕನ್ನಡ ಸತ್ಯವೇದವು C.L. Bible (BSI)

13 ಮೋಶೆ, ಮಹಾಯಾಜಕ ಎಲ್ಲಾಜಾರನು ಮತ್ತು ಸಮಾಜದ ಮುಖಂಡರು ಪಾಳೆಯದ ಹೊರಗೆ ಬಂದು ಯುದ್ಧವೀರರನ್ನು ಎದುರುಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಮೋಶೆಯೂ, ಮಹಾಯಾಜಕನಾದ ಎಲ್ಲಾಜಾರನೂ, ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಹೋಗಿ ಅವರನ್ನು ಎದುರುಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಮೋಶೆಯೂ ಮಹಾಯಾಜಕನಾದ ಎಲ್ಲಾಜಾರನೂ ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಹೋಗಿ ಅವರನ್ನು ಎದುರುಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಮೋಶೆಯೂ ಯಾಜಕನಾದ ಎಲ್ಲಾಜಾರನೂ ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಬಂದು ಸೈನಿಕರನ್ನು ಎದುರುಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಮೋಶೆಯೂ, ಯಾಜಕನಾದ ಎಲಿಯಾಜರನೂ, ಸಮೂಹದ ಪ್ರಧಾನರೆಲ್ಲರೂ ಅವರಿಗೆ ಎದುರಾಗಿ ಪಾಳೆಯದ ಹೊರಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 31:13
9 ತಿಳಿವುಗಳ ಹೋಲಿಕೆ  

ಅನಂತರ ದಾವೀದನು ಮೊದಲು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಉಳಿದಿದ್ದ ಇನ್ನೂರು ಜನರ ಬಳಿಗೆ ಹೋದನು. ಅವನನ್ನೂ ಅವನೊಂದಿಗಿದ್ದ ಜನರನ್ನೂ ಎದುರುಗೊಳ್ಳಲು ಆ ಜನರು ಬಂದರು. ದಾವೀದನು ಅವರನ್ನು ಸಂಧಿಸಿ ಕ್ಷೇಮಸಮಾಚಾರವನ್ನು ವಿಚಾರಿಸಿದನು.


ಬೆಳಿಗ್ಗೆ ಎದ್ದು ಸೌಲನನ್ನು ಕರ್ಮೆಲಿಗೆ ಹೋಗಿ ಅಲ್ಲಿ ತನಗಾಗಿ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ, ಅಲ್ಲಿಂದ ದಿಬ್ಬ ಇಳಿದು ಗಿಲ್ಗಾಲಿಗೆ ಹೋದನು ಎಂಬ ಸಮಾಚಾರ ಸಿಕ್ಕಿತು.


ಹೀಗೆ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಆಸ್ತಿಪಾಸ್ತಿಯನ್ನೂ ತೆಗೆದುಕೊಂಡು ಜೆರಿಕೋ ಪಟ್ಟಣದ ಎದುರಿಗಿರುವ ಜೋರ್ಡನ್ ನದಿಯ ತೀರಕ್ಕೆ ಬಂದರು. ಅಲ್ಲಿ ಮೋವಾಬ್ಯರ ಮೈದಾನದ ಪಾಳೆಯದಲ್ಲಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್ ಹಾಗು ಇಸ್ರಯೇಲರ ಸರ್ವಸಮಾಜದವರ ಬಳಿಗೆ ಬಂದರು.


“ಮನುಷ್ಯನ ಶವವನ್ನು ಸೋಂಕಿದವನು ಏಳು ದಿನಗಳವರೆಗೆ ಮಡಿಗೆಟ್ಟವನಾಗಿರಬೇಕು.


“ಕುಷ್ಠರೋಗಿಗಳಂಥ ಎಲ್ಲ ಅಂಟುರೋಗಿಗಳನ್ನು ಮೇಹಸ್ರಾವವುಳ್ಳವರನ್ನು ಹಾಗೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಯೇಲರಿಗೆ ಆಜ್ಞಾಪಿಸು.


ಅಬ್ರಾಮನು ಕೆದೊರ್ಲಗೋಮರನನ್ನೂ ಅವನೊಂದಿಗಿದ್ದ ರಾಜರನ್ನೂ ಸೋಲಿಸಿ ಬಂದಾಗ ಸೊದೋಮಿನ ಅರಸನು ಅವನನ್ನು ಶಾವೆ ತಗ್ಗಿನಲ್ಲಿ (ಅದಕ್ಕೆ ಅರಸನ ತಗ್ಗು ಎಂಬ ಹೆಸರೂ ಉಂಟು) ಭೇಟಿಯಾಗಲು ಬಂದನು.


“ಮುಖ್ಯಾಧಿಕಾರಿಯೊಬ್ಬನು ತನ್ನ ದೇವರಾದ ಸರ್ವೇಶ್ವರನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ತಿಳಿಯದೆ ಮಾಡಿ ದೋಷಿಯಾದರೆ


ಯುದ್ಧಭೂಮಿಯಿಂದ ಬಂದಿದ್ದ ಆ ಸೈನ್ಯದ ಸಹಸ್ರಾಧಿಪತಿಗಳನ್ನು ಹಾಗು ಶತಾಧಿಪತಿಗಳನ್ನು ಕಂಡು ಮೋಶೆ ಕೋಪಗೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು