Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 30:12 - ಕನ್ನಡ ಸತ್ಯವೇದವು C.L. Bible (BSI)

12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುತ್ತವೆ. ಗಂಡನು ರದ್ದುಮಾಡಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುವವು. ಗಂಡನು ಕ್ಷಮಿಸಿ ಬೇಡವೆಂದು ಹೇಳಿದ್ದರಿಂದ ಅಂಥವಳು ಯೆಹೋವನಿಗೆ ಹರಕೆ ಮಾಡಿದರೂ, ದೋಷಿಯೆಂದು ಎಣಿಸಲ್ಪಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುವವು. ಗಂಡನು ರದ್ದುಮಾಡಿದ್ದರಿಂದ ಅಂಥವಳು ಯೆಹೋವನಿಂದ ದೋಷಿಯೆಂದು ಎಣಿಸಲ್ಪಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ರದ್ದುಗೊಳಿಸಿದರೆ, ಅವಳ ಎಲ್ಲ ಹರಕೆಗಳಿಗೆ ಮತ್ತು ಆಣೆಗಳಿಗೆ ಬೆಲೆಯಿರುವುದಿಲ್ಲ. ಯಾಕೆಂದರೆ ಗಂಡನು ಅವುಗಳನ್ನು ರದ್ದುಪಡಿಸಿದನು. ಆದ್ದರಿಂದ ಯೆಹೋವನು ಆಕೆಯನ್ನು ಕ್ಷಮಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕ ಮಾಡಿದ ಪಕ್ಷದಲ್ಲಿ ಅವಳ ಹರಕೆಗಳಿಗೋಸ್ಕರವೂ ಅವಳು ಕೈಗೊಂಡ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವುದಾಗಲಿ ನಿಲ್ಲದು. ಅವಳ ಗಂಡನು ಅವುಗಳನ್ನು ನಿರರ್ಥಕ ಮಾಡಿದ್ದಾನೆ. ಯೆಹೋವ ದೇವರು ಅವಳಿಗೆ ಕ್ಷಮಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 30:12
10 ತಿಳಿವುಗಳ ಹೋಲಿಕೆ  

ಆದರೆ ಗಂಡನು, ಕೇಳಿದಾಗಲೆ ಬೇಡವೆಂದು ಆಜ್ಞೆ ಮಾಡಿದರೆ ಆ ಹರಕೆ ಇಲ್ಲವೆ ಆ ಅವಿಚಾರ ಪ್ರತಿಜ್ಞೆ ನಿರರ್ಥಕವಾಗುತ್ತವೆ. ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.


ಒಂದು ವಿಷಯ ನಿಮಗೆ ತಿಳಿದಿರಲಿ. ಪ್ರತಿಯೊಬ್ಬ ವ್ಯಕ್ತಿಗೂ ಕ್ರಿಸ್ತಯೇಸುವೇ ಶಿರಸ್ಸು. ಪ್ರತಿಯೊಬ್ಬ ಸ್ತ್ರೀಗೂ ಪುರುಷನೇ ಶಿರಸ್ಸು. ಕ್ರಿಸ್ತೇಸುವಿಗೆ ದೇವರೇ ಶಿರಸ್ಸು.


ಆದರೆ ಅವಳ ತಂದೆ ಆ ಸಂಗತಿಯನ್ನು ತಿಳಿದು ಹಾಗೆ ಮಾಡಬಾರದೆಂದು ಆಜ್ಞೆ ಮಾಡಿದರೆ ಅವಳು ಮಾಡಿದ ಹರಕೆ ಹಾಗೂ ಪ್ರತಿಜ್ಞೆಗಳು ವ್ಯರ್ಥವಾಗುತ್ತವೆ. ತಂದೆ ಬೇಡವೆಂದು ಹೇಳಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.


ತಿಳಿಯದೆ ತಪ್ಪುಮಾಡಿದ ಅಂಥವನ ಪರವಾಗಿ ಯಾಜಕನು ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರಕ ವಿಧಿಯನ್ನು ನೆರವೇರಿಸಿದರೆ ಅವನಿಗೆ ಕ್ಷಮೆ ದೊರಕುವುದು.


ಹೀಗೆ ಯಾಜಕನು ಇಸ್ರಯೇಲರ ಸರ್ವಸಮೂಹದವರ ಪರವಾಗಿ ದೋಷಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆ ದೊರಕುವುದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ ಮತ್ತು ಅವರು ಅದರ ಪರಿಹಾರಕ್ಕಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿಯನ್ನೂ ದೋಷಪರಿಹಾರಕಬಲಿಯನ್ನೂ ಅರ್ಪಿಸಿದ್ದರಿಂದ ಕ್ಷಮೆ ಲಭಿಸುವುದು.


ಅವಳ ಗಂಡ ಅದನ್ನು ತಿಳಿದೂ ಅಡ್ಡಿಮಾಡದೆ ಸುಮ್ಮನಿದ್ದರೆ ಆ ಹರಕೆಗಳೂ ಪ್ರತಿಜ್ಞೆಗಳೂ ನಿಲ್ಲುತ್ತವೆ.


ಹೆಂಡತಿ ಮಾಡಿದ ಹರಕೆಯನ್ನು ಹಾಗು ಉಪವಾಸವಿರುವೆನೆಂದು ಅವಳು ಮಾಡಿದ ಪ್ರಮಾಣವನ್ನು ದೃಢೀಕರಿಸುವುದಕ್ಕಾಗಲಿ, ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಹಕ್ಕಿದೆ.


ನಾವು, ನಮ್ಮ ಪೂರ್ವಜರು, ನಮ್ಮ ಅರಸರು, ಅಧಿಕಾರಿಗಳು ಜುದೇಯದ ಊರುಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಮಾಡಿದಂತೆ ಗಗನದೊಡತಿಯಾದ ದೇವತೆಗೆ ಧೂಪಾರತಿ ಎತ್ತುತ್ತೇವೆ. ಪಾನನೈವೇದ್ಯವನ್ನು ಸುರಿಯುತ್ತೇವೆ. ನಾವು ಬಾಯಿಬಿಟ್ಟು ಹೇಳಿದ ಈ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುತ್ತೇವೆ. ಏಕೆಂದರೆ ಹಾಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬ ಉಂಡು ಸುಖಪಡುತ್ತಿದ್ದೆವು.


ಗಂಡನಾದ ಎಲ್ಕಾನನು, “ಹಾಗೆಯೇ ಆಗಲಿ; ನಿನಗೆ ಸರಿತೋರಿದಂತೆ ಮಾಡು. ಮಗು ಮೊಲೆಬಿಡುವವರೆಗೆ ಮನೆಯಲ್ಲೇ ಇರು. ಸರ್ವೇಶ್ವರ ನಿನ್ನ ಮಾತನ್ನು ದೃಢವಾಗಿಸಲಿ,” ಎಂದನು. ಮಗು ಮೊಲೆಬಿಡುವ ತನಕ ಹನ್ನಳು ಮನೆಯಲ್ಲೇ ಇದ್ದು ಅವನನ್ನು ಆರೈಕೆ ಮಾಡಿದಳು.


ಮಹಿಳೆಯರು, “ಗಗನದೊಡತಿಗೆ ಧೂಪಾರತಿ ಎತ್ತಿ, ಪಾನನೈವೇದ್ಯವನ್ನು ಸುರಿಯುತ್ತಿದ್ದಾಗ ನಾವು ಆಕೆಯ ಪೂಜೆಗಾಗಿ ಆಕೆಯ ಆಕಾರದಂಥ ಹೋಳಿಗೆಗಳನ್ನು ಮಾಡಿ ಪಾನದ್ರವ್ಶವನ್ನು ಅರ್ಪಿಸುತ್ತಿದ್ದುದು ನಮ್ಮ ಗಂಡಂದಿರಿಗೆ ಒಪ್ಪಿಗೆಯಾಗಿರಲಿಲ್ಲವೆ?” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು