Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 28:7 - ಕನ್ನಡ ಸತ್ಯವೇದವು C.L. Bible (BSI)

7 ಆ ಕುರಿಯೊಂದಿಗೆ ಪಾನದ್ರವ್ಯಾರ್ಪಣೆಗಾಗಿ ಒಂದುವರೆ ಸೇರು ಮದ್ಯವನ್ನು ಪವಿತ್ರಸ್ಥಾನದಲ್ಲಿ ಪೀಠದ ಮೇಲೆ ಸುರಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದುವರೆ ಸೇರು ಅಮಲೇರುವ ದ್ರಾಕ್ಷಾರಸದ ಪಾನದ್ರವ್ಯ ಅರ್ಪಣೆಗಾಗಿ, ಯೆಹೋವನಿಗೋಸ್ಕರ ಹೊಯ್ದುಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆ ಕುರಿಯೊಂದಿಗೆ ಪಾನದ್ರವ್ಯಾರ್ಪಣೆಗಾಗಿ ಒಂದುವರೆ ಸೇರು ಮದ್ಯವನ್ನು ದೇವಸ್ಥಾನದಲ್ಲಿ ಯೆಹೋವನಿಗೋಸ್ಕರ ಹೊಯ್ದುಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಪ್ರತಿಯೊಂದು ಕುರಿಮರಿಯೊಂದಿಗೆ ಒಂದೂವರೆ ಸೇರು ದ್ರಾಕ್ಷಾರಸವನ್ನು ಪಾನದ್ರವ್ಯದ ಕಾಣಿಕೆಯಾಗಿ ಅರ್ಪಿಸಬೇಕು. ಯೆಹೋವನಿಗೆ ಪಾನದ್ರವ್ಯವಾಗಿ ಅರ್ಪಿಸತಕ್ಕ ದ್ರಾಕ್ಷಾರಸವನ್ನು ಪವಿತ್ರಸ್ಥಳದಲ್ಲಿ ಸುರಿಯಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದು ಲೀಟರ್ ಹುದುಗಿದ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಯೆಹೋವ ದೇವರಿಗೋಸ್ಕರ ಸುರಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 28:7
17 ತಿಳಿವುಗಳ ಹೋಲಿಕೆ  

ನೀವು ಮತ್ತು ನಿಮ್ಮ ಸಂತತಿಯವರು ಪ್ರತಿನಿತ್ಯವೂ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನ ಎದುರಿನಲ್ಲಿ ಈ ದಹನಬಲಿಯನ್ನು ಅರ್ಪಿಸಬೇಕು.


ನಿಮ್ಮ ವಿಶ್ವಾಸವೆಂಬ ಬಲಿಕಾಣಿಕೆಯ ಮೇಲೆ ನನ್ನ ರಕ್ತವನ್ನು ಧಾರೆಯಾಗಿ ಹರಿಸಬೇಕಾಗಿಬಂದರೂ ನನಗೆ ಸಂತೋಷವೇ; ನಿಮ್ಮೆಲ್ಲರೊಡನೆ ಸೇರಿ ಸಂತೋಷಿಸುತ್ತೇನೆ.


ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು.


ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ.


ಸರ್ವೇಶ್ವರಸ್ವಾಮಿಯ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ. ಆ ಸ್ವಾಮಿಯ ಪರಿಚಾರಕರಾದ ಯಾಜಕರು ದುಃಖತಪ್ತರಾಗಿದ್ದಾರೆ.


ಎಲೈ ದುಷ್ಟ ಸಂತಾನವೇ, ಹೊಳೆಯ ನುಣುಪುಗಲ್ಲುಗಳೆಂದರೆ ನಿನಗೆ ಅತಿಪ್ರಿಯ. ಹೌದು, ಅವೇ ನಿನ್ನ ಪಾಲಿನ ಭಾಗ್ಯ. ಅವುಗಳಿಗೆ ಪಾನದ್ರವ್ಯವನ್ನು ನೈವೇದ್ಯವಾಗಿ ಸುರಿದಿರುವೆ, ದವಸ ಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿರುವೆ. ಇದನ್ನೆಲ್ಲ ನೋಡಿ ಕೋಪವನ್ನು ನಾನು ಅಡಗಿಸಿಕೊಳ್ಳಲಾದೀತೆ?


ಈ ಪ್ರಾಣಿಗಳೆಲ್ಲಾ ಕಳಂಕರಹಿತವಾಗಿರಬೇಕು. ದೈನಿಕ ದಹನಬಲಿ ಮತ್ತು ಅದಕ್ಕೆ ಸೇರಿದ ಧಾನ್ಯನೈವೇದ್ಯ ಇವುಗಳ ಜೊತೆಗೆ ಮೇಲೆ ಹೇಳಿದ ಬಲಿಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನಾರ್ಪಣೆಗಳನ್ನೂ ಸೇರಿಸಿ ಸಮರ್ಪಿಸಬೇಕು.


ಇವುಗಳಿಗೆ ತಕ್ಕ ಪಾನಾರ್ಪಣೆ ಯಾವುವೆಂದರೆ - ಒಂದೊಂದು ಹೋರಿಯೊಡನೆ ಮೂರು ಸೇರು, ಟಗರಿನೊಡನೆ ಎರಡು ಸೇರು, ಕುರಿಯೊಡನೆ ಒಂದು ಸೇರು ದ್ರಾಕ್ಷಾರಸ. ವರ್ಷದ ಪ್ರತಿ ಅಮಾವಾಸ್ಯೆಯಲ್ಲಿ ಹೀಗೆ ದಹನಬಲಿಯನ್ನು ಕೊಡಬೇಕು.


ಮತ್ತು ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನು ತಂದು ಸಮರ್ಪಿಸಬೇಕು. ಇದು ಸರ್ವೇಶ್ವರನಾದ ನನಗೆ ಪ್ರಿಯವಾದ ಸುಗಂಧ ದಹನಬಲಿಯಾಗುವುದು.


ಮತ್ತು ಪಾನದ್ರವ್ಯಕ್ಕಾಗಿ ಎರಡು ಸೇರು ದ್ರಾಕ್ಷಾರಸವನ್ನು ಸಮರ್ಪಿಸಬೇಕು.


ಮತ್ತು ಪಾನದ್ರವ್ಯಕ್ಕಾಗಿ ಒಂದೂವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ದಹನಬಲಿದಾನವಾಗಿ ಇಲ್ಲವೆ ಸಮಾಧಾನ ಬಲಿಯಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನು ಸಮರ್ಪಿಸಬೇಕು.


ಅದರ ಸಮೇತ ಎಣ್ಣೆಬೆರೆತ ಎರಡು ಕಿಲೋಗ್ರಾಂ ಹಿಟ್ಟನ್ನು ಧಾನ್ಯನೈವೇದ್ಯವಾಗಿ ಅರ್ಪಿಸಬೇಕು. ಸರ್ವೇಶ್ವರನಿಗೆ ಪ್ರಿಯವಾದ ಸುವಾಸನೆಯುಂಟುಮಾಡುವುದಕ್ಕೆ ಅದನ್ನು ಬೆಂಕಿಯಲ್ಲಿ ಹೋಮಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯ ಒಂದು ಲೀಟರ್ ದ್ರಾಕ್ಷಾರಸ.


ಆ ವೇದಿಕೆಯ ಮೇಲೆ ಬೇರೆ ಯಾವ ಅಪವಿತ್ರ ಧೂಪವನ್ನೂ ಹಾಕಕೂಡದು. ಅದರ ಮೇಲೆ ದಹನಬಲಿಯನ್ನಾಗಲಿ, ಅನ್ನಪಾನ ದ್ರವ್ಯಗಳನ್ನಾಗಲಿ ಅರ್ಪಿಸಕೂಡದು.


ಒಂದು ಲೀಟರು ಶ್ರೇಷ್ಠವಾದ ಓಲಿವ್ ಎಣ್ಣೆಯನ್ನು ಒಂದು ಕಿಲೋಗ್ರಾಂ ಗೋದಿಹಿಟ್ಟಿಗೆ ಬೆರೆಸಿ ಧಾನ್ಯಾರ್ಪಣೆಗಾಗಿ ಆ ಮೊದಲನೆಯ ಕುರಿಯ ಸಮೇತ ಹೋಮಮಾಡಬೇಕು.


ನೀವು ಪ್ರತಿನಿತ್ಯವು ಸರ್ವೇಶ್ವರನಿಗೆ ಸುಗಂಧಕರವಾದ ಈ ದಹನಬಲಿಯನ್ನು ಮಾಡಬೇಕೆಂದು ಸೀನಾಯಿ ಬೆಟ್ಟದಲ್ಲೇ ನೇಮಕವಾಯಿತು.


ಸಂಜೆ ಎರಡನೇ ಕುರಿಯನ್ನು ದಹನಬಲಿ ಕೊಡುವಾಗ ಬೆಳಿಗ್ಗೆ ಮಾಡಿದಂತೆಯೇ ಅದರೊಂದಿಗೆ ಧಾನ್ಯ ಹಾಗು ಪಾನದ್ರವ್ಯಗಳನ್ನು ಸಮರ್ಪಿಸಬೇಕು.


ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದ ನಂತರ ಯಾಜಕನು ಅದನ್ನು ಪೂರ್ತಿಯಾಗಿ ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ದಹನಬಲಿ. ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು