ಅರಣ್ಯಕಾಂಡ 26:62 - ಕನ್ನಡ ಸತ್ಯವೇದವು C.L. Bible (BSI)62 ಬೇರೆ ಇಸ್ರಯೇಲರಿಗೆ ಸೊತ್ತು ದೊರಕಿದಂತೆ ಲೇವಿಯರಿಗೆ ದೊರಕದೆ ಹೋದುದರಿಂದ ಅವರು ಇಸ್ರಯೇಲರ ಸಮೇತ ಎಣಿಕೆ ಆಗಲಿಲ್ಲ. ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನು ಲೆಕ್ಕ ಹಾಕಿದಾಗ ಅವರ ಸಂಖ್ಯೆ : 23,000 ಇತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201962 ಬೇರೆ ಇಸ್ರಾಯೇಲರಿಗೆ ಸ್ವತ್ತು ದೊರಕಿದಂತೆ ಲೇವಿಯರಿಗೆ ಸ್ವತ್ತು ದೊರೆಯದೆ ಹೋದುದರಿಂದ ಅವರು ಇಸ್ರಾಯೇಲರೊಡನೆ ಲೆಕ್ಕಿಸಲ್ಪಡಲಿಲ್ಲ ಲೇವಿಯರೊಳಗೆ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಗಂಡಸರನ್ನು ಲೆಕ್ಕಿಸಲಾಗಿ ಅವರ ಸಂಖ್ಯೆ - 23,000 ಮಂದಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)62 ಬೇರೆ ಇಸ್ರಾಯೇಲ್ಯರಿಗೆ ಸ್ವಾಸ್ತ್ಯದೊರಕಿದಂತೆ ಲೇವಿಯರಿಗೆ ಸ್ವಾಸ್ತ್ಯದೊರೆಯದೆ ಹೋದದರಿಂದ ಅವರು ಇಸ್ರಾಯೇಲ್ಯರೊಡನೆ ಲೆಕ್ಕಿಸಲ್ಪಡಲಿಲ್ಲ. ಲೇವಿಯರೊಳಗೆ ಒಂದು ತಿಂಗಳು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ ಗಂಡಸರನ್ನು ಲೆಕ್ಕಿಸಲಾಗಿ ಅವರ ಸಂಖ್ಯೆ 23,000. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್62 ಲೇವಿ ಕುಟುಂಬಗಳಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸಾದ ಪುರುಷರ ಒಟ್ಟು ಸಂಖ್ಯೆ 23,000. ಆದರೆ ಈ ಜನರು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ. ಯೆಹೋವನು ಬೇರೆ ಇಸ್ರೇಲರಿಗೆ ಕೊಟ್ಟ ಸ್ವಾಸ್ತ್ಯದಲ್ಲಿ ಅವರಿಗೆ ಪಾಲು ಸಿಕ್ಕಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ62 ಇವರಲ್ಲಿ ಲೆಕ್ಕಿತರಾದವರು ಒಂದು ತಿಂಗಳೂ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 23,000 ಆಗಿತ್ತು. ಇವರಿಗೆ ಇಸ್ರಾಯೇಲರಲ್ಲಿ ಸೊತ್ತು ದೊರೆಯದ ಕಾರಣ ಅವರು ಇಸ್ರಾಯೇಲರೊಳಗೆ ಲೆಕ್ಕಿತರಾಗಲಿಲ್ಲ. ಅಧ್ಯಾಯವನ್ನು ನೋಡಿ |