Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 26:20 - ಕನ್ನಡ ಸತ್ಯವೇದವು C.L. Bible (BSI)

20 ಯೆಹೂದ ಕುಲದಲ್ಲಿ ಉಳಿದ ಕುಟು೦ಬಗಳು ಇವು - ಶೆಲಹನಿ೦ದ ಶೇಲಾನ್ಯರು, ಪೆರೆಚನಿ೦ದ ಪೆರೆಚ್ಯರು, ಹಾಗು ಜೆರಹನಿ೦ದ ಜೆರಹಿಯರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಯೆಹೂದನ ಕುಲದಲ್ಲಿ ಉಳಿದ ಕುಟುಂಬಗಳು ಯಾವುವೆಂದರೆ: ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಹನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಯೆಹೂದ ಕುಲದಲ್ಲಿ ಉಳಿದ ಕುಟುಂಬಗಳು ಯಾವವಂದರೆ - ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಚನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಕುಟುಂಬಗಳ ಪ್ರಕಾರ ಯೆಹೂದನ ಪುತ್ರರು. ಶೇಲಹನಿಂದ ಶೇಲಾನ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹಿಯರ ಕುಟುಂಬ;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 26:20
18 ತಿಳಿವುಗಳ ಹೋಲಿಕೆ  

ಮೆಷೇಜಬೇಲನ ಮಗನೂ ಜೆರಹನ ಸಂತಾನದವನೂ ಯೆಹೂದ ಕುಲದವನೂ ಆದ ಪೆತಹ್ಯನು ಪ್ರಜೆಗಳ ಎಲ್ಲ ಕಾರ್ಯಗಳ ಸಂಬಂಧದಲ್ಲಿ ರಾಜನ ಕಾರಭಾರಿಯಾಗಿದ್ದನು.


ಯೆಹೂದನ ಮಕ್ಕಳು - ಏರ್, ಓನಾನ್, ಶೆಲಾಹ, ಪೆರೆಜ್ ಮತ್ತು ಜೆರಹ (ಇವರಲ್ಲಿ ಏರ್ ಹಾಗೂ ಓನಾನ್ ಕಾನಾನ್ ನಾಡಿನಲ್ಲೇ ಕಾಲವಾಗಿದ್ದರು). ಪೆರೆಚನ ಮಕ್ಕಳು - ಹೆಚ್ರೋನ್ ಮತ್ತು ಹಾಮೂಲ್.


ನಹಸ್ಸೋನ್ ಅಮ್ಮಿನದಾಬನಿಗೆ, ಅಮ್ಮಿನಾದಾಬನು ಅದ್ಮಿನನಿಗೆ, ಅದ್ಮಿನ್ ಆರ್ನೈಯನಿಗೆ, ಆರ್ನೈಯ ಹೆಸ್ರೋನನಿಗೆ, ಹೆಸ್ರೋನ್ ಪೆರೆಸನಿಗೆ, ಪೆರೆಸ್ ಯೂದನಿಗೆ ಹುಟ್ಟಿದರು.


ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು.


ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಪೆರೆಚ್ ಸಂತಾನದ ರಣವೀರರು ನಾನೂರ ಅರವತ್ತೆಂಟು ಮಂದಿ


ಶೇಲನು ಯೆಹೂದನ ಮಕ್ಕಳಲ್ಲಿ ಒಬ್ಬನು. ಅವನ ವಂಶೀಯರಲ್ಲಿ ಕೆಲವರ ಹೆಸರುಗಳು ಇಂತಿವೆ: ಲೇಕಾಹ್ಯರ ಪಟ್ಟಣದ ಸ್ಥಾಪಕ ಏರ್; ಮರೇಷತ್‍ನ ಸ್ಥಾಪಕ ಲದ್ದ; ಬೇತೆಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳು;


ಆಗ ಆಕೆ, ‘ಶೇಲಹನು ಪ್ರಾಯಸ್ಥನಾಗಿದ್ದರೂ ನನ್ನನ್ನು ಅವನಿಗೆ ಮದುವೆ ಮಾಡಿಕೊಡಲಿಲ್ಲವಲ್ಲಾ’ ಎಂದುಕೊಂಡು ತನ್ನ ವಿಧವೆ ವಸ್ತ್ರಗಳನ್ನು ತೆಗೆದಿಟ್ಟಳು. ಮುಸುಕನ್ನು ಹಾಕಿಕೊಂಡು ತನ್ನನ್ನೇ ಮರೆಸಿಕೊಂಡಳು. ತಿಮ್ನಾ ಊರಿನ ದಾರಿಯಲ್ಲಿ ಇರುವ ಏನಯಿಮ್ ಊರಿನ ಬಾಗಿಲ ಬಳಿಯಲ್ಲೆ ಕುಳಿತುಕೊಂಡಳು.


ಅನಂತರ ಯೆಹೂದನು, ಬಹುಶಃ ಶೇಲಹನು ಕೂಡ ತನ್ನ ಅಣ್ಣಂದಿರಂತೆ ಸತ್ತಾನೆಂದು ಆಲೋಚಿಸಿ, ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿ ತೌರುಮನೆಯಲ್ಲಿರು,” ಎಂದು ನೆವಹೇಳಿದನು. ಅಂತೆಯೇ ಅವಳು ತೌರುಮನೆಗೆ ಹೋಗಿ ಅಲ್ಲೇ ವಾಸಮಾಡಿದಳು.


ಮತ್ತೊಮ್ಮೆ ಆಕೆ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಅದಕ್ಕೆ ‘ಶೇಲಹ’ ಎಂದು ಹೆಸರಿಟ್ಟಳು. ಆಕೆ ಈ ಮಗುವನ್ನು ಹೆರುವಾಗ ಯೆಹೂದನು ಕೆಜೀಬ್ ಊರಿನಲ್ಲಿದ್ದನು.


ಯೂದನ ಕುಲದಿಂದ ಹನ್ನೆರಡು ಸಾವಿರ ರೂಬೇನನ ಕುಲದಿಂದ ಹನ್ನೆರಡು ಸಾವಿರ ಗಾದನ ಕುಲದಿಂದ ಹನ್ನೆರಡು ಸಾವಿರ


ಯೆಹೂದನೇ, ವಂದಿಸುವರು ನಿನ್ನನು ಸಹೋದರರು ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು.


ಪೆರಚನಿ೦ದ ಬೆಳೆದ ಕುಟು೦ಬಗಳು - ಹೆಚ್ರೋನನಿ೦ದ ಹೆಚ್ರೋನ್ಯರು ಮತ್ತು ಹಾಮೂಲನಿ೦ದ ಹಾಮೂಲ್ಯರು ಎ೦ಬ ವ೦ಶಸ್ಥರು.


ಜೆರುಸಲೇಮಿನಲ್ಲಿ ಯೆಹೂದನ ಗೋತ್ರದ ಆರುನೂರ ತೊಂಬತ್ತು ಕುಟುಂಬಗಳು ನೆಲಸಿದವು. ಯೆಹೂದನ ಮಗ ಪೆರೆಚನ ಸಂತತಿಯವರಿಗೆ ಅಮ್ಮೀಹೂದನ ಮಗನೂ ಒಮ್ರಿಯ ಮೊಮ್ಮಗನೂ ಆದ ಊತೈ ನಾಯಕನಾಗಿದ್ದನು. ಇಮ್ರಿ ಮತ್ತು ಬಾನಿ ಎಂಬವರು ಅವನ ಪೂರ್ವಜರಲ್ಲಿ ಇಬ್ಬರು. ಯೆಹೂದನ ಮಗ ಶೇಲಾಹನ ಸಂತಾನದವರಿಗೆ ಆಸಾಯನು ನಾಯಕ ಹಾಗೂ ಗೋತ್ರದ ಮುಖ್ಯಸ್ಥನಾಗಿದ್ದನು. ಯೆಹೂದನ ಮಗ ಜೆರಹನ ಸಂತತಿಯವರಿಗೆ ಯೆಯೂವೇಲ್ ನಾಯಕನಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು