ಅರಣ್ಯಕಾಂಡ 24:8 - ಕನ್ನಡ ಸತ್ಯವೇದವು C.L. Bible (BSI)8 ಅವರನ್ನು ದೇವರೇ ಕರೆದು ತಂದರು ಈಜಿಪ್ಟಿನಿಂದ ಅವರಿಗಿದೆ ಕಾಡುಕೋಣದಂಥ ಶಕ್ತಿಸಾಮರ್ಥ್ಯ. ನಿರ್ಮೂಲ ಮಾಡುವರವರು ಶತ್ರುಗಳನ್ನು ಮುರಿದು ಹಾಕುವರು ವೈರಿಗಳ ಎಲುಬುಗಳನ್ನು; ನುಚ್ಚುನೂರು ಮಾಡುವರು ಅವರ ಬಿಲ್ಲುಬಾಣಗಳನ್ನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ದೇವರು ಅವನನ್ನು ಐಗುಪ್ತ ದೇಶದಿಂದ ಕರೆದುಕೊಂಡು ಬಂದನು. ಅವರು ಕಾಡುಕೋಣದಷ್ಟು ಬಲವುಳ್ಳವರು. ಅವರು ಶತ್ರುಜನರನ್ನು ನಿರ್ಮೂಲಮಾಡುವರು. ವೈರಿಗಳ ಎಲುಬುಗಳನ್ನು ಮುರಿದುಹಾಕುವರು. ಅವರನ್ನು ಬಾಣಗಳಿಂದ ಗಾಯಪಡಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅವರನ್ನು ಐಗುಪ್ತದೇಶದಿಂದ ಕರಕೊಂಡು ಬಂದವನು ದೇವರೇ; ಅವರು ಕಾಡಕೋಣದಷ್ಟು ಬಲವುಳ್ಳವರು. ಅವರು ಶತ್ರುಜನಗಳನ್ನು ನಿರ್ಮೂಲಮಾಡುವರು; ವೈರಿಗಳ ಎಲುಬನ್ನು ಮುರಿದುಹಾಕುವರು; ಅವರನ್ನು ಬಾಣಗಳಿಂದ ಗಾಯಪಡಿಸುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 “ದೇವರು ಆ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವರು ಕಾಡುಕೋಣದಂತೆ ಬಲಿಷ್ಠರಾಗಿದ್ದಾರೆ. ಅವರು ತಮ್ಮೆಲ್ಲಾ ಶತ್ರುಗಳನ್ನು ಸೋಲಿಸುವರು. ಅವರು ತಮ್ಮ ವೈರಿಗಳ ಮೂಳೆಗಳನ್ನು ಮುರಿದುಹಾಕುವರು. ಅವರ ಬಾಣಗಳು ಅವರ ವೈರಿಗಳನ್ನು ಕೊಲ್ಲುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 “ದೇವರು ಅವರನ್ನು ಈಜಿಪ್ಟಿನಿಂದ ಹೊರಗೆ ತಂದನು. ಈ ಕಾಡುಕೋಣದಂತೆ ಬಲ ಅವರಿಗೆ ಉಂಟು. ಅವರು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು, ಅವರ ಎಲುಬುಗಳನ್ನು ಚೂರುಮಾಡಿ, ತಮ್ಮ ಬಾಣಗಳಿಂದ ಗಾಯಮಾಡುವನು. ಅಧ್ಯಾಯವನ್ನು ನೋಡಿ |