Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 24:20 - ಕನ್ನಡ ಸತ್ಯವೇದವು C.L. Bible (BSI)

20 ಅನಂತರ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಹೀಗೆಂದು ನುಡಿದನು: “ಅಮಾಲೇಕ್ಯರು ಶ್ರೇಷ್ಠರಲ್ಲವೆ ರಾಷ್ಟ್ರಗಳಲ್ಲಿ? ಆದರೂ ಅವರ ಗತಿ ವಿನಾಶವೇ ಸರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ತರುವಾಯ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಪ್ರವಾದಿಸಿದ್ದೇನೆಂದರೆ, “ಅಮಾಲೇಕ್ಯರು ಜನಾಂಗಗಳಲ್ಲಿ ಪ್ರಮುಖರಲ್ಲವೇ, ಆದರೂ ನಾಶನವೇ ಅವರ ಗತಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ತರುವಾಯ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ನುಡಿದದ್ದೇನಂದರೆ - ಅಮಾಲೇಕ್ಯರು ಜನಾಂಗಗಳಲ್ಲಿ ಪ್ರಮುಖರಲ್ಲವೇ; ಆದರೂ ನಾಶವೇ ಅವರ ಗತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ತರುವಾಯ ಬಿಳಾಮನು ಅಮಾಲೇಕ್ಯರನ್ನು ನೋಡಿ ಹೀಗೆಂದನು: “ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಬಲಿಷ್ಠರು; ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಮೊದಲನೆಯವರು; ಆದರೆ ಕೊನೆಯಲ್ಲಿ ಅವರು ನಾಶವಾಗುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅನಂತರ ಬಿಳಾಮನು ಅಮಾಲೇಕ್ಯರನ್ನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಜನಾಂಗಗಳಲ್ಲಿ ಮೊದಲನೆಯವನೇ ಅಮಾಲೇಕ್ಯನು, ಆದರೆ ಅವನು ಕೊನೆಗೆ ನಾಶವಾಗುವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 24:20
18 ತಿಳಿವುಗಳ ಹೋಲಿಕೆ  

ಆಗ ಸರ್ವೇಶ್ವರ, “ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಇಲ್ಲದಂತೆ ಮಾಡುವೆನು ಎಂಬ ಈ ಮಾತನ್ನು ಜ್ಞಾಪಕಾರ್ಥವಾಗಿ ಪುಸ್ತಕದಲ್ಲಿ ಬರೆ ಮತ್ತು ಯೆಹೋಶುವನಿಗೆ ಮನದಟ್ಟಾಗುವಂತೆ ಮಾಡು” ಎಂದು ಮೋಶೆಗೆ ಹೇಳಿದರು.


ಅರಸನು ಎಸ್ತೇರಳಿಗೆ ತನ್ನ ಇಚ್ಛೆಯಂತೆ ಮಾಡಲು ಅಪ್ಪಣೆಕೊಟ್ಟನು. ಕೂಡಲೆ ಇದಕ್ಕೆ ಸಂಬಂಧಪಟ್ಟ ರಾಜಾಜ್ಞೆ ಶೂಷನ್ ನಗರದಲ್ಲಿ ಪ್ರಕಟವಾಯಿತು. ಹಾಮಾನನ ಹತ್ತುಮಂದಿ ಮಕ್ಕಳ ಶವಗಳನ್ನು ಗಲ್ಲಿಗೇರಿಸಲಾಯಿತು.


ಇದಾದನಂತರ ಅರಸ ಅಹಷ್ವೇರೋಷನು ಆಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನನ್ನು ಉನ್ನತ ಪದವಿಗೇರಿಸಿ ಅವನನ್ನು ಹಿರಿಯ ಅಧಿಕಾರಿಯನ್ನಾಗಿ ಮಾಡಿ ತನ್ನ ಎಲ್ಲಾ ಪದಾಧಿಕಾರಿಗಳಲ್ಲಿ ಅವನಿಗೆ ಪ್ರಥಮಸ್ಥಾನವನ್ನು ಅನುಗ್ರಹಿಸಿದನು.


ಅಲ್ಲಿ ಅವರು, ಅಳಿದುಳಿದಿದ್ದ ಅಮಾಲೇಕ್ಯರನ್ನು ಸಂಹರಿಸಿ ತಾವೇ ಅಲ್ಲಿ ನೆಲೆಸಿದರು.


ದಾವೀದನು ಮರುದಿನ ನಸುಕಿನಲ್ಲೇ ಅವರ ಮೇಲೆ ದಾಳಿಮಾಡಿ ಸೂರ್ಯ ಅಸ್ತವಾಗುವವರೆಗೂ ಅವರನ್ನು ಸದೆಬಡಿದನು. ಒಂಟೆಗಳನ್ನು ಹತ್ತಿ ಓಡಿಹೋದ ನಾನೂರು ಮಂದಿ ಯುವಕರ ಹೊರತು ಬೇರೆ ಯಾರೂ ತಪ್ಪಿಸಿಕೊಳ್ಳಲಿಲ್ಲ.


ದಾವೀದನೂ ಅವನ ಜನರೂ ಮಾರನೆಯ ದಿನ ಚಿಕ್ಲಗ್ ಊರನ್ನು ಸೇರಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿದ್ದರು.


ಇದಲ್ಲದೆ ಅವನು ಸುಲಿಗೆ ಮಾಡುವವರಾದ ಅಮಾಲೇಕ್ಯರಿಗೆ ವಿರೋಧವಾಗಿ ದಂಡೆತ್ತಿ ಹೋಗಿ, ಅವರನ್ನು ಸದೆಬಡಿದು ಇಸ್ರಯೇಲರನ್ನು ಅವರ ಕೈಗೆ ಸಿಕ್ಕದಂತೆ ತಪ್ಪಿಸಿದನು.


ಇವರು ಮಾಡುತ್ತಿದ್ದ ಬಿತ್ತನೆಯನ್ನು ಮಿದ್ಯಾನ್ಯರು, ಅಮಾಲೇಕ್ಯರು, ಹಾಗು ಪೂರ್ವದೇಶದವರು ಇವರಿಗೆ ವಿರುದ್ಧ ದಂಡೆತ್ತಿ ಬಂದು ಹಾಳು ಮಾಡುತ್ತಿದ್ದರು.


ಅಲ್ಲದೆ, “ಸರ್ವೇಶ್ವರನ ಪತಾಕೆಯನ್ನು ಎತ್ತಿಹಿಡಿಯಿರಿ. ಅಮಾಲೇಕ್ಯರ ಮೇಲೆ ಸರ್ವೇಶ್ವರನಿಗೆ ತಲತಲಾಂತರಕ್ಕೂ ಯುದ್ಧವಿರುವುದು,” ಎಂದು ಹೇಳಿದನು.


ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಯೇಲರ ಮೇಲೆ ಯುದ್ಧಮಾಡುವುದಕ್ಕೆ ಬಂದರು.


ಏಸಾವನ ಮಗನಾದ ಈ ಎಲೀಫಜನಿಗೆ ತಿಮ್ನ ಎಂಬ ಉಪಪತ್ನಿ ಇದ್ದಳು. ಇವಳು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿ ಆದಾಳ ಮೊಮ್ಮಕ್ಕಳು.


ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಅಗಾಗ್ ರಾಜನಿಗಿಂತ ಶ್ರೇಷ್ಠ ಅವರ ಅರಸ ಅಭಿವೃದ್ಧಿಯಾಗುತ್ತಿದೆ ಅವರ ರಾಜ್ಯ.


ಹೌದು, ಇಸ್ರಯೇಲರು ಬಲವಂತರು ಯಕೋಬ್ಯರದೇ ದೊರೆತನವಾಯಿತು ನಗರಗಳಿಂದ ತಲೆತಪ್ಪಿಸಿಕೊಂಡವರೂ ನಾಶವಾದರು.”


‘ಸೈಪ್ರಸ್’ ಎಂಬ ಸ್ಥಳದಿಂದ ಹಡಗುಗಳಲ್ಲಿ ಬರುವರು ಜನರು ಸೋಲಿಸುವರವರು ಅಶ್ಯೂರ್ಯರನ್ನೂ ಏಬೆರ್ ಜರನ್ನೂ; ಅವರಿಗೂ ನಾಶವುಂಟಾಗುವುದು.”


“ಇಸ್ರಯೇಲರು ಈಜಿಪ್ಟಿನಿಂದ ಬರುತ್ತಿರುವಾಗ ದಾರಿಯಲ್ಲಿ ಅಮಾಲೇಕ್ಯರು ಅವರಿಗೆ ವಿರೋಧವಾಗಿ ನಿಂತು ತೊಂದರೆಪಡಿಸಿದರು. ಆದ್ದರಿಂದ ನಾನು ಅವರಿಗೆ ಮುಯ್ಯಿತೀರಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು