Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 23:6 - ಕನ್ನಡ ಸತ್ಯವೇದವು C.L. Bible (BSI)

6 ಬಿಳಾಮನು ಬಾಲಾಕನ ಬಳಿಗೆ ಬಂದಾಗ ತಾನು ದಹನಬಲಿಯನ್ನು ಸಮರ್ಪಿಸಿದ್ದ ಪೀಠದ ಹತ್ತಿರವೆ ನಿಂತಿದ್ದನು. ಮೋವಾಬ್ಯರ ಮುಖ್ಯಸ್ಥರೆಲ್ಲರು ಅವನ ಬಳಿಯಲ್ಲೆ ಇದ್ದರು. ಆಗ ಬಿಳಾಮನು ಪದ್ಯರೂಪದಲ್ಲಿ ಹೀಗೆಂದು ನುಡಿದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಬಿಳಾಮನು ಬಾಲಾಕನ ಬಳಿಗೆ ಹಿಂತಿರುಗಿ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ್ದ ಯಜ್ಞವೇದಿಯ ಹತ್ತಿರ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನ ಬಳಿಯಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಬಿಳಾಮನು ಬಾಲಾಕನ ಬಳಿಗೆ ತಿರಿಗಿ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ್ದ ಪೀಠದ ಹತ್ತಿರ ನಿಂತಿದ್ದನು; ಮೋವಾಬ್ಯರ ಪ್ರಧಾನರೆಲ್ಲರೂ ಅವನ ಬಳಿಯಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬಿಳಾಮನು ಬಾಲಾಕನ ಬಳಿಗೆ ತಿರುಗಿಬಂದಾಗ ಬಾಲಾಕನು ಯಜ್ಞವೇದಿಕೆಯ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನೊಡನೆ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆಗ ಅವನು ಬಾಲಾಕನ ಬಳಿಗೆ ತಿರುಗಿಬಂದನು. ಬಾಲಾಕನೂ ಮೋವಾಬಿನ ಸಕಲ ಪ್ರಭುಗಳೂ ಅವನು ಮಾಡಿದ ದಹನಬಲಿಯ ಹತ್ತಿರ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 23:6
3 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಬಿಳಾಮನಿಗೆ ಹೇಳಬೇಕಾದುದನ್ನು ಹೇಳಿ, “ನೀನು ಬಾಲಾಕನ ಬಳಿಗೆ ಹಿಂದಿರುಗಿ ಹೋಗಿ ನಾನು ಹೇಳಿದ್ದನ್ನು ತಿಳಿಸು,” ಎಂದು ಆಜ್ಞಾಪಿಸಿದರು.


“ಬಾಲಾಕನು ನನ್ನನ್ನು ಕರೆಸಿದ ಅರಾಮಿನಿಂದ ಮೋವಾಬರಸ ನನ್ನ ಬರಮಾಡಿದ ಮೂಡಲಗುಡ್ಡೆಗಳಿಂದ. ‘ನನ್ನ ಪರವಾಗಿ ಯಕೋಬವಂಶಜರನ್ನು ಶಪಿಸೆಂದ’ ‘ಹಾಕು ಇಸ್ರಯೇಲರಿಗೆ ಧಿಕ್ಕಾರ’ ಎಂದು ಹೇಳಿದ.


ಲೇವಿಯ ಮಕ್ಕಳ ಹೆಸರುಗಳು ಇವು: ಗೇರ್ಷೋನ್, ಕೆಹಾತ್, ಮೆರಾರೀ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು