Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 22:7 - ಕನ್ನಡ ಸತ್ಯವೇದವು C.L. Bible (BSI)

7 ಮೋವಾಬ್ಯರ ಹಾಗೂ ಮಿದ್ಯಾನ್ಯರ ಮುಖ್ಯಸ್ಥರು ಭವಿಷ್ಯವಾಣಿ ಕೇಳಲು ಸಲ್ಲಿಸಬೇಕಾದ ಕಾಣಿಕೆಯನ್ನು ತೆಗೆದುಕೊಂಡು ಬಿಳಾಮನ ಹತ್ತಿರಕ್ಕೆ ಬಂದರು. ಬಾಲಾಕನು ಹೇಳಿಕಳಿಸಿದ್ದ ಮಾತುಗಳನ್ನು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಮೋವಾಬ್ಯರ ಹಿರಿಯರೂ, ಮಿದ್ಯಾನ್ಯರ ಹಿರಿಯರೂ ಶಕುನದ ಕಾಣಿಕೆಯನ್ನು ಕೈಯಲ್ಲಿ ತೆಗೆದುಕೊಂಡು ಬಿಳಾಮನ ಹತ್ತಿರಕ್ಕೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಮೋವಾಬ್ಯರ ಹಿರಿಯರೂ ವಿುದ್ಯಾನ್ಯರ ಹಿರಿಯರೂ ಶಕುನದ ಕಾಣಿಕೆಯನ್ನು ಕೈಯಲ್ಲಿ ತೆಗೆದುಕೊಂಡು ಬಿಳಾಮನ ಹತ್ತಿರಕ್ಕೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದಾಗ ಅವನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಮೋವಾಬ್ಯರ ಹಿರಿಯರು ಮತ್ತು ಮಿದ್ಯಾನ್ಯರ ಹಿರಿಯರು ಬಿಳಾಮನ ಸೇವೆಗೋಸ್ಕರ ಹಣ ಕೊಡಲು ಹಣವನ್ನು ತೆಗೆದುಕೊಂಡು ಹೊರಟು ಅವನ ಬಳಿಗೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆಗ ಮೋವಾಬಿನ ಹಿರಿಯರೂ ಮಿದ್ಯಾನಿನ ಹಿರಿಯರೂ ಭವಿಷ್ಯವಾಣಿ ಕೇಳಲು ಸಲ್ಲಿಸಬೇಕಾದ ಕಾಣಿಕೆಗಳನ್ನು ತೆಗೆದುಕೊಂಡು ಹೋದರು. ಅವರು ಬಿಳಾಮನ ಬಳಿಗೆ ಬಂದು, ಅವನಿಗೆ ಬಾಲಾಕನ ಮಾತುಗಳನ್ನು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 22:7
15 ತಿಳಿವುಗಳ ಹೋಲಿಕೆ  

ನಿಮ್ಮ ಮುಖಂಡರು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ. ನಿಮ್ಮ ಯಾಜಕರು ಸಂಬಳಕ್ಕಾಗಿ ಉಪದೇಶಮಾಡುತ್ತಾರೆ. ಆದರೂ ಸರ್ವೆಶ್ವರಸ್ವಾಮಿಯ ಮೇಲೆ ಭಾರಹಾಕಿದವರಂತೆ, “ಸ್ವಾಮಿ ನಮ್ಮೊಡನೆ ಇಲ್ಲವೆ? ನಮಗೆ ಕೇಡು ಸಂಭವಿಸುವುದಾದರೂ ಹೇಗೆ?” ಎಂದುಕೊಳ್ಳುತ್ತಾರೆ.


ಇವರ ದುರ್ಗತಿ ಭಯಂಕರವಾದುದು! ಇವರು ಕಾಯಿನನ ಮಾರ್ಗವನ್ನು ಹಿಡಿದಿದ್ದಾರೆ; ಲಾಭಕೋರರಾಗಿ ಬಿಳಾಮನ ಭ್ರಾಂತಿಯಲ್ಲಿ ಬೀಳಹೋಗುತ್ತಾರೆ; ಕೋರಹನಂತೆ ದಂಗೆ ಎದ್ದು ವಿನಾಶವಾಗುತ್ತಿದ್ದಾರೆ.


ಇವರು ಹಾದಿತಪ್ಪಿದವರು, ಸನ್ಮಾರ್ಗವನ್ನು ತ್ಯಜಿಸಿದವರು; ಬೆಯೋರನ ಮಗ ಬಿಳಾಮನ ದಾರಿಯನ್ನು ಹಿಡಿದವರು.


ಇವರ ಬಾಯಿ ಮುಚ್ಚಿಸಬೇಕಾಗಿದೆ. ಏಕೆಂದರೆ, ಇವರು ಹಣಸಂಪಾದನೆಯ ದುರುದ್ದೇಶದಿಂದ ಮಾಡಬಾರದ ಬೋಧನೆಯನ್ನು ಮಾಡಿ ಅನೇಕ ಕುಟುಂಬಗಳನ್ನು ಹಾಳುಮಾಡುತ್ತಿದ್ದಾರೆ.


ಅಂಥವರು ಮಾಡುವುದು ತಮ್ಮ ಉದರಸೇವೆಯನ್ನೇ ಹೊರತು ಪ್ರಭುವಿನ ಸೇವೆಯನ್ನಲ್ಲ, ತಮ್ಮ ನಯನಾಜೂಕಿನ ನುಡಿಗಳಿಂದಲೂ ಮುಖಸ್ತುತಿಯ ಮಾತುಗಳಿಂದಲೂ ನಿಷ್ಕಪಟ ಮನಸ್ಕರನ್ನು ಮರುಳುಗೊಳಿಸುತ್ತಾರೆ.


ನೀವು ಹಿಡಿಯುವಷ್ಟೆ ಜವೆಗೋಧಿಗೆ, ಚೂರುಪಾರು ರೊಟ್ಟಿಗೆ ಆಸೆಪಟ್ಟು, ಸುಳ್ಳುಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.”


ಹೊಟ್ಟೆಬಾಕ ಕುನ್ನಿಗಳು; ಎಂದಿಗೂ ತೃಪ್ತಿ ಪಡೆಯದ ಶುನಕಗಳು. ಇಂಥವರು ಕುರಿಗಳನ್ನು ಕಾಯಲು ಯೋಗ್ಯರೋ? ಇವರು ಬುದ್ಧಿಹೀನರು. ಇವರಲ್ಲಿ ಪ್ರತಿಯೊಬ್ಬನು ಕೊಳ್ಳೆಹೊಡೆಯಬೇಕೆಂದು ತನ್ನದೇ ಆದ ಮಾರ್ಗವನ್ನು ಹಿಡಿದಿದ್ದಾನೆ.


ಇಸ್ರಯೇಲರಿಗೆ ಶುಭವಾಗಬೇಕು ಎಂಬುದೇ ಸರ್ವೇಶ್ವರನ ಚಿತ್ತ ಎಂದು ಅರಿತ ಬಿಳಾಮನು ಮೊದಲಿನಂತೆ ಶಕುನ ನೋಡಲು ಹೋಗಲಿಲ್ಲ. ಬದಲಿಗೆ ಮರುಭೂಮಿಯ ಕಡೆ ಮುಖ ತಿರುಗಿಸಿಕೊಂಡು ಕಣ್ಣೆತ್ತಿ ನೋಡಿದನು.


ಯಕೋಬ್ಯರಿಗೆ ವಿರುದ್ಧವಾದ ಶಕುನವಿಲ್ಲ ಇಸ್ರಯೇಲರಿಗೆ ವಿರುದ್ಧವಾದ ತಂತ್ರಮಂತ್ರವಿಲ್ಲ. ತಾನು ಮಾಡುವುದನ್ನು ತತ್ಕಾಲದಲ್ಲೇ ದೇವ ತಿಳಿಸುತ್ತಾನೆ ಯಕೋಬ್ಯರಿಗೆ ಅದನ್ನು ಸೂಚಿಸುತ್ತಾನೆ ಸಮಯೋಚಿತವಾಗಿ ಆ ಇಸ್ರಯೇಲರಿಗೆ.


ಆಗ ಬಿಳಾಮನು, “ಈ ರಾತ್ರಿ ನೀವು ಇಲ್ಲೇ ತಂಗಿರಿ. ಸರ್ವೇಶ್ವರ ನನಗೆ ಕೊಡುವ ಉತ್ತರವನ್ನು ಬೆಳಿಗ್ಗೆ ತಿಳಿಸುವೆನು,” ಎಂದನು. ಅಂತೆಯೇ, ಮೋವಾಬ್ಯರ ಮುಖಂಡರು ಬಿಳಾಮನ ಬಳಿಯಲ್ಲಿ ಉಳಿದುಕೊಂಡರು.


ಇಸ್ರಯೇಲರು ಕತ್ತಿಗೆ ತುತ್ತಾಗಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಸೇರಿದ್ದನು.


ಮಾರ್ಗ ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಪ್ರಾರಂಭದಲ್ಲಿ ಬಾಬಿಲೋನಿನ ಅರಸ ಶಕುನ ನೋಡಲು ನಿಂತಿರುವನು. ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆ ಕೇಳಿ, ಹಸ್ತರೇಖೆಯನ್ನು ಪರೀಕ್ಷಿಸಿದ್ದಾನೆ.


ನಿನ್ನ ಅಧಿಪತಿಗಳೇ ದ್ರೋಹಿಗಳಾಗಿದ್ದಾರೆ, ಕಳ್ಳರ ಗೆಳೆಯರಾಗಿದ್ದಾರೆ. ಎಲ್ಲರೂ ಲಂಚಕೋರರಾಗಿದ್ದಾರೆ. ಕಪ್ಪಕಾಣಿಕೆಗಳಿಗೆ ಕೈಯೊಡ್ಡುತ್ತಾರೆ. ಆದರೆ ಅನಾಥರ ಪರವಾಗಿ ವಾದಿಸುವುದಿಲ್ಲ. ವಿಧವೆಯರ ವ್ಯಾಜ್ಯವನ್ನು ತೀರಿಸುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು