Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 22:36 - ಕನ್ನಡ ಸತ್ಯವೇದವು C.L. Bible (BSI)

36 ಬಿಳಾಮನು ಬಂದ ಸಮಾಚಾರ ಬಾಲಾಕನಿಗೆ ಮುಟ್ಟಿತು. ಅವನು ಬಿಳಾಮನನ್ನು ಬರಮಾಡಿಕೊಳ್ಳಲು ತನ್ನ ನಾಡಗಡಿಯಾದ ಅರ್ನೋನ್ ಹೊಳೆಯ ತೀರದಲ್ಲಿರುವ ಮೋವಾಬ್ಯರ ಪಟ್ಟಣಕ್ಕೆ ಹೊರಟುಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಬಿಳಾಮನು ಬಂದ ವರ್ತಮಾನವನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಗಡಿಯಾದ ಅರ್ನೋನ್ ನದಿಯ ತೀರದಲ್ಲಿರುವ ಮೋವಾಬ್ಯರ ಪಟ್ಟಣಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಬಿಳಾಮನು ಬಂದ ವರ್ತಮಾನವನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವದಕ್ಕಾಗಿ ತನ್ನ ದೇಶದ ಮೇರೆಯಾದ ಅರ್ನೋನ್ ಹೊಳೆಯ ತೀರದಲ್ಲಿ ಇರುವ ಮೋವಾಬ್ಯರ ಪಟ್ಟಣಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಬಿಳಾಮನು ಬರುತ್ತಿರುವ ಸುದ್ದಿಯನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಸರಹದ್ದಿನಲ್ಲಿ ಅರ್ನೋನ್ ನದಿಯ ಬಳಿಯಲ್ಲಿರುವ ಮೋವ್ಯಾಬರ ಊರಿನಲ್ಲಿ ಅವನನ್ನು ಭೇಟಿಯಾಗಲು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಬಿಳಾಮನು ಬಂದನೆಂದು ಬಾಲಾಕನು ಕೇಳಿದಾಗ, ಅವನು ಕಡೆಯ ಮೇರೆಯಲ್ಲಿರುವ ಅರ್ನೋನ್ ಹೊಳೆಯ ತೀರದಲ್ಲಿದ್ದ ಮೋವಾಬಿನ ಪಟ್ಟಣಕ್ಕೆ ಬರಮಾಡಿಕೊಳ್ಳಲು ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 22:36
14 ತಿಳಿವುಗಳ ಹೋಲಿಕೆ  

ಅಲ್ಲಿದ್ದ ಕ್ರೈಸ್ತಭಕ್ತಾದಿಗಳು ನಾವು ಬಂದ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ‘ಅಪ್ಪಿಯಾ’ ಮಾರುಕಟ್ಟೆಗೂ ತ್ರಿಛತ್ರದ ಬಳಿಗೂ ಬಂದರು. ಅವರನ್ನು ಕಂಡದ್ದೇ ಪೌಲನಿಗೆ ಪ್ರೋತ್ಸಾಹ ಉಂಟಾಯಿತು. ಅವನು ದೇವರಿಗೆ ಸ್ತೋತ್ರ ಸಲ್ಲಿಸಿದನು.


ಮೋವಾಬು ನಾಶವಾಗಿದೆ, ಅವಮಾನಕ್ಕೆ ಈಡಾಗಿದೆ. ಗೋಳಾಡಿರಿ, ಅತ್ತು ಪ್ರಲಾಪಿಸಿರಿ ! ಮೋವಾಬು ಹಾಳಾಯಿತೆಂದು ಅರ್ವೋನಿನ ತೀರದಲ್ಲೆಲ್ಲಾ ಘೋಷಿಸಿರಿ.


ಮೋವಾಬಿನ ಮಹಿಳೆಯರು ಅರ್ನೊನ್ ನದಿಯ ಹಾಯ್ಗಡಗಳಲಿ, ಅಲೆಯುತಿಹರು ಗೂಡಿಂದ ಹೊರದೂಡಲಾದ ಹಕ್ಕಿಮರಿಗಳ ಪರಿ.


ಅನಂತರ ಅವರು ಮರುಭೂಮಿಯಲ್ಲಿ ಪ್ರಯಾಣ ಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು ಅದರ ಮೇರೆಯಾಗಿರುವ ಅರ್ನೋನ್ ನದಿಯ ಆಚೆಯಲ್ಲಿ ಇಳಿದುಕೊಂಡರು; ಮೋವಾಬ್ಯರ ಮೇರೆಯೊಳಗೆ ಕಾಲು ಇಡಲಿಲ್ಲ.


“ಆ ಕಾಲದಲ್ಲಿ ನಾವು ಅರ್ನೋನ್ ನದಿ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ ಜೋರ್ಡನ್ ನದಿಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು.


ಈಗ ನೀವು ಹೊರಟು ಅರ್ನೋನ್ ಹಳ್ಳವನ್ನು ದಾಟಿರಿ. ಅಮೋರಿಯನಾಗಿರುವ ಹೆಷ್ಬೋನಿನ ಅರಸ ಸೀಹೋನನು ನಿಮ್ಮಿಂದ ಸೋತುಹೋಗಿ ಅವನ ರಾಜ್ಯ ನಿಮಗೇ ವಶವಾಗಬೇಕೆಂದು ನಿಮಗೆ ಅನುಗ್ರಹಿಸಿದ್ದೇನೆ. ಅವನೊಡನೆ ಯುದ್ಧಮಾಡಿ ಆ ನಾಡನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿರಿ.


ಮೋಶೆ ಹೊರಗೆ ಬಂದು ತನ್ನ ಮಾವನನ್ನು ಎದುರುಗೊಂಡು, ವಂದಿಸಿ, ಮುದ್ದಿಟ್ಟನು. ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಅವರು ಡೇರೆಯೊಳಕ್ಕೆ ಹೋದರು.


ಜೋಸೆಫನು ರಥವನ್ನೇರಿ ತನ್ನ ತಂದೆ ಯಕೋಬನನ್ನು ಭೇಟಿಯಾಗಲು ಗೋಷೆನಿಗೆ ಬಂದನು. ತಂದೆಯನ್ನು ಕಂಡೊಡನೆ ಅವರ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತು ಅತ್ತನು.


ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ,


ಅಬ್ರಾಮನು ಕೆದೊರ್ಲಗೋಮರನನ್ನೂ ಅವನೊಂದಿಗಿದ್ದ ರಾಜರನ್ನೂ ಸೋಲಿಸಿ ಬಂದಾಗ ಸೊದೋಮಿನ ಅರಸನು ಅವನನ್ನು ಶಾವೆ ತಗ್ಗಿನಲ್ಲಿ (ಅದಕ್ಕೆ ಅರಸನ ತಗ್ಗು ಎಂಬ ಹೆಸರೂ ಉಂಟು) ಭೇಟಿಯಾಗಲು ಬಂದನು.


ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವುದಕ್ಕಾಗಿ ಮುಂದೆ ಹೋದನು.


ಆಗ ಸರ್ವೇಶ್ವರನ ದೂತನು, “ಆ ವ್ಯಕ್ತಿಗಳ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವುದನ್ನೇ ಹೊರತು ಬೇರೆ ಏನನ್ನೂ ಹೇಳಬೇಡ,” ಎಂದು ತಿಳಿಸಿದನು. ಬಿಳಾಮನು ಬಾಲಾಕನ ಮುಂದಾಳುಗಳ ಜೊತೆ ಹೊರಟನು.


ಅಲ್ಲಿ ಬಿಳಾಮನನ್ನು ಕಂಡು, “ತಮ್ಮನ್ನು ತುರ್ತಾಗಿ ಕರೆದುತರಲು ನಾನು ದೂತರನ್ನು ಕಳಿಸಿದೆನಲ್ಲವೆ? ತಾವೇಕೆ ಆಗಲೇ ಬರಲಿಲ್ಲ? ತಮಗೆ ಯೋಗ್ಯವಾದ ಸತ್ಕಾರ್ಯ ನೀಡಲು ನಾನು ಅಸಮರ್ಥನೇ?” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು