Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 22:3 - ಕನ್ನಡ ಸತ್ಯವೇದವು C.L. Bible (BSI)

3 ಇಸ್ರಯೇಲರು ಬಹುಮಂದಿ ಇದ್ದುದರಿಂದ ಮೋವಾಬ್ಯರು ಬಹಳವಾಗಿ ದಿಗಿಲುಪಟ್ಟರು; ಇಸ್ರಯೇಲರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇಸ್ರಾಯೇಲರು ಬಹಳ ಜನವಾಗಿರುವುದರಿಂದ ಮೋವಾಬ್ಯರು ಬಹಳ ಭಯಪಟ್ಟು ಹೆದರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಇಸ್ರಾಯೇಲ್ಯರು ಬಹು ಮಂದಿಯಾದದರಿಂದ ಮೋವಾಬ್ಯರು ಬಲು ದಿಗಿಲುಪಟ್ಟರು. ಅವರು ಇಸ್ರಾಯೇಲ್ಯರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾಗಿ ವಿುದ್ಯಾನ್ಯರ ಹಿರಿಯರಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಮೋವಾಬ್ಯರು ನಿಜವಾಗಿಯೂ ಬಹಳ ಭಯಗೊಂಡಿದ್ದರು. ಯಾಕೆಂದರೆ ಇಸ್ರೇಲರು ಬಹುಸಂಖ್ಯಾತರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಇದಲ್ಲದೆ ಮೋವಾಬಿನವರು, ಇಸ್ರಾಯೇಲರು ಬಹಳ ಜನರಾಗಿರುವುದರಿಂದ ಅವರಿಗೆ ಬಹಳವಾಗಿ ಅಂಜಿದರು. ಮೋವಾಬಿನವರು ಇಸ್ರಾಯೇಲರಿಗೆ ದಿಗಿಲುಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 22:3
10 ತಿಳಿವುಗಳ ಹೋಲಿಕೆ  

ಕಳವಳಗೊಂಡರು ಎದೋಮ್ಯರ ಕುಲನಾಯಕರು ಗಡಗಡನೆ ನಡುಗುತ್ತಿಹರು ಮೋವಾಬ್ಯರ ಮುಖಂಡರು. ಕರಗಿ ನೀರಾಗಿ ಹೋದರು ಕಾನಾನ್ ನಾಡಿನವರು.


ಟೈರಿನ ದುರ್ಗತಿಯ ಸುದ್ದಿಯನ್ನು ಕೇಳಿದ ಈಜಿಪ್ಟಿನವರು ಸಹ ಕಳವಳಪಡುವರು.


ದಿಗ್ಭ್ರಾಂತರಾಗುವರಿದೋ ಹಿಂದೆಂದು ಇಲ್ಲದಂತೆ ದುರುಳರು I ದೇವರಿಂದ ತಿರಸ್ಕೃತವಾದ ಅವರು ಪರಾಜಿತರಾಗುವರು I ದಿಕ್ಕುಪಾಲಾಗುವುವು ನಿಮ್ಮ ಮೇಲೆ ಬಿದ್ದವರ ಮೂಳೆಗಳು II


ಅವರು ಯೆಹೋಶುವನಿಗೆ, “ನಿಮ್ಮ ದೇವರಾದ ಸರ್ವೇಶ್ವರ ತಮ್ಮ ದಾಸ ಮೋಶೆಗೆ, ‘ನಾನು ನಿಮಗೆ ಈ ದೇಶವನ್ನೆಲ್ಲ ಕೊಡುವಾಗ ನೀವು ಇದರ ನಿವಾಸಿಗಳನ್ನೆಲ್ಲಾ ಸಂಹರಿಸಬೇಕು’ ಎಂದು ಆಜ್ಞಾಪಿಸಿದ್ದಾರೆಂದು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು.


ಇದಲ್ಲದೆ, ಅವರು ಯೆಹೋಶುವನಿಗೆ, “ಸರ್ವೇಶ್ವರಸ್ವಾಮಿ ನಿಜವಾಗಿ ಈ ನಾಡನ್ನೆಲ್ಲಾ ನಮಗೆ ಕೊಟ್ಟಿದ್ದಾರೆ. ಅದರ ನಿವಾಸಿಗಳೆಲ್ಲ ನಮ್ಮನ್ನು ಕಂಡು ನಡುಗುತ್ತ ಇದ್ದಾರೆ,” ಎಂದು ತಿಳಿಸಿದರು.


ಲೋಕದಲ್ಲಿರುವ ಎಲ್ಲ ಜನಗಳಿಗೂ ಇಂದಿನಿಂದ ನಿಮ್ಮ ಬಗ್ಗೆ ದಿಗಿಲೂ ಹೆದರಿಕೆಯೂ ಉಂಟಾಗುವಂತೆ ಮಾಡುತ್ತೇನೆ. ಅವರು ನಿಮ್ಮ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ಗಡಗಡನೆ ನಡುಗಿ ಸಂಕಟಪಡುವರು,’ ಎಂದು ಹೇಳಿದರು.


ಏಕೆಂದರೆ ಅವರು ಇಸ್ರಯೇಲರನ್ನು ಅನ್ನಪಾನಗಳೊಡನೆ ಎದುರುಗೊಳ್ಳಲಿಲ್ಲ; ಅವರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಅವನನ್ನು ಕರೆಸಿದ್ದರು. ನಮ್ಮ ದೇವರಾದರೋ ಅವನಿಂದ ಶಾಪವನ್ನಲ್ಲ, ಆಶೀರ್ವಾದವನ್ನೇ ಹೇಳಿಸಿದರು ಎಂಬ ಮಾತು ಬರೆದಿರುವುದಾಗಿ ಗೊತ್ತಾಯಿತು.


ಈಜಿಪ್ಟರು ಅವರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ ಅಷ್ಟೂ ಹೆಚ್ಚಿ ಹರಡಿಕೊಳ್ಳುತ್ತಿದ್ದರು.


ನೀವು ಹೋಗುವ ಎಲ್ಲ ಕಡೆಯಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿ, ಕಳವಳವನ್ನು ಉಂಟುಮಾಡಿ, ನಿಮ್ಮನ್ನು ವಿರೋಧಿಸುವವರು ಓಡಿಹೋಗುವಂತೆ ಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು