Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 22:20 - ಕನ್ನಡ ಸತ್ಯವೇದವು C.L. Bible (BSI)

20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಆ ಜನರು ನಿನ್ನನ್ನು ಕರೆಯುವುದಕ್ಕೆ ಬಂದಿರುವುದರಿಂದ ಎದ್ದು ಅವರ ಜೊತೆಯಲ್ಲಿ ಹೋಗು; ಆದರೆ ನಾನು ಆಜ್ಞಾಪಿಸುವ ಪ್ರಕಾರವೇ ಮಾಡಬೇಕು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಆ ಮನುಷ್ಯರು ನಿನ್ನನ್ನು ಕರೆಯುವುದಕ್ಕೆ ಬಂದಿರುವುದರಿಂದ ಎದ್ದು ಅವರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಆಜ್ಞಾಪಿಸುವ ಪ್ರಕಾರವೇ ನೀನು ಮಾಡಬೇಕು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು - ಆ ಮನುಷ್ಯರು ನಿನ್ನನ್ನು ಕರೆಯುವದಕ್ಕೆ ಬಂದಿರುವದರಿಂದ ಎದ್ದು ಅವರ ಜೊತೆಯಲ್ಲಿ ಹೋಗು; ಆದರೆ ನಾನು ನಿನಗೆ ಆಜ್ಞಾಪಿಸುವ ಪ್ರಕಾರವೇ ನೀನು ಮಾಡಬೇಕು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಈ ಜನರು ನಿನ್ನನ್ನು ತಮ್ಮೊಡನೆ ಬರಬೇಕೆಂದು ಆಹ್ವಾನಿಸಲು ಬಂದಿದ್ದಾರೆ. ಆದ್ದರಿಂದ ನೀನು ಅವರೊಂದಿಗೆ ಹೋಗಬಹುದು. ಆದರೆ ನಾನು ಹೇಳುವುದನ್ನು ಮಾತ್ರ ಮಾಡು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ, “ಈ ಮನುಷ್ಯರು ನಿನ್ನನ್ನು ಕರೆಯುವುದಕ್ಕೆ ಬಂದಿದ್ದರೆ, ನೀನು ಎದ್ದು ಅವರ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವ ಮಾತಿನಂತೆಯೇ ನೀನು ಮಾಡಬೇಕು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 22:20
18 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮಾಡುವೆನೆಂದು ನೀನು ನನ್ನ ಬಳಿಗೆ ಕಳಿಸಿದ ದೂತರಿಗೆ ನಾನು ಹೇಳಲಿಲ್ಲವೆ?


ಅದಕ್ಕೆ ಬಿಳಾಮನು, “ಸರ್ವೇಶ್ವರ ಆಜ್ಞಾಪಿಸಿದ್ದನ್ನೇ ನಾನು ಮಾಡಬೇಕೆಂದು ನಿನಗೆ ಹೇಳಲಿಲ್ಲವೆ?” ಎಂದನು.


ಅದಕ್ಕೆ ಬಿಳಾಮನು, “ಸರ್ವೇಶ್ವರ ನುಡಿಸುವುದನ್ನೇ ನಾನು ನುಡಿಯಬೇಕಾಗಿದೆಯಲ್ಲವೆ?” ಎಂದುಬಿಟ್ಟನು.


ಆಗ ಸರ್ವೇಶ್ವರನ ದೂತನು, “ಆ ವ್ಯಕ್ತಿಗಳ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವುದನ್ನೇ ಹೊರತು ಬೇರೆ ಏನನ್ನೂ ಹೇಳಬೇಡ,” ಎಂದು ತಿಳಿಸಿದನು. ಬಿಳಾಮನು ಬಾಲಾಕನ ಮುಂದಾಳುಗಳ ಜೊತೆ ಹೊರಟನು.


ಇಷ್ಟವಿಲ್ಲದೆ ಸಿಟ್ಟಿನಿಂದ ನಿನಗೆ ರಾಜನನ್ನು ಕೊಟ್ಟೆ. ಈಗ ಕಡುಕೋಪದಿಂದ ಆ ರಾಜರನ್ನು ತೆಗೆದುಬಿಡುತ್ತೇನೆ.


ನನ್ನ ವಿರುದ್ಧ, ನಿನಗಿರುವ ಕ್ರೋಧ, ಗರ್ವ ತಿಳಿದಿದೆ ನನಗೆ, ಎಂದೇ ಹಾಕುವೆ ಮೂಗಿಗೆ ದಾರ, ಬಾಯಿಗೆ ಕಡಿವಾಣ. ನೀ ಬಂದ ದಾರಿಯಿಂದಲೇ ಅಟ್ಟುವೆ ನಿನ್ನನ್ನು ಹಿಂದಕ್ಕೆ’.”


“ಎಂತಲೇ ಕೈಬಿಟ್ಟೆ ಅವರನು ಹಟಮಾರಿಗಳೆಂದು I ತಮಗಿಷ್ಟಬಂದಂತೆಯೆ ನಡೆದುಕೊಳ್ಳಲಿಯೆಂದು, II


ಸರ್ವೇಶ್ವರ ಬಿಳಾಮನಿಗೆ ದರ್ಶನಕೊಟ್ಟು ಅವನು ಹೇಳಬೇಕಾದುದನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂದಿರುಗಿ ನಾನು ಹೇಳಿದಂತೆಯೇ ತಿಳಿಸು,” ಎಂದರು.


ಸರ್ವೇಶ್ವರ ಬಿಳಾಮನಿಗೆ ಹೇಳಬೇಕಾದುದನ್ನು ಹೇಳಿ, “ನೀನು ಬಾಲಾಕನ ಬಳಿಗೆ ಹಿಂದಿರುಗಿ ಹೋಗಿ ನಾನು ಹೇಳಿದ್ದನ್ನು ತಿಳಿಸು,” ಎಂದು ಆಜ್ಞಾಪಿಸಿದರು.


ನೀವು ಕೂಡ ಈ ರಾತ್ರಿ ಇಲ್ಲೇ ತಂಗಿರಿ, ಸರ್ವೇಶ್ವರ ಏನು ಹೇಳುತ್ತಾರೋ ಅದನ್ನು ತಿಳಿದುಕೊಳ್ಳುತ್ತೇನೆ,” ಎಂದು ಬಾಲಾಕನು ದೂತರಿಗೆ ಉತ್ತರಕೊಟ್ಟನು.


ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವ್ಯಕ್ತಿಯ ವಾಣಿ.


ಆಗ ಸರ್ವೇಶ್ವರ ನನಗೆ, “ನಾನೊಬ್ಬ ತರುಣ ಎನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳಿಸುತ್ತೇನೋ, ಅವರೆಲ್ಲರ ಬಳಿಗೆ ನೀನು ಹೋಗಲೇಬೇಕು; ನಾನು ಆಜ್ಞಾಪಿಸುವುದನ್ನೆಲ್ಲ ನುಡಿಯಲೇ ಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು