Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 22:17 - ಕನ್ನಡ ಸತ್ಯವೇದವು C.L. Bible (BSI)

17 ನಾನು ತಮ್ಮನ್ನು ಬಹಳವಾಗಿ ಸನ್ಮಾನಿಸುವೆನು; ತಾವು ಏನು ಹೇಳಿದರೂ ಅದರಂತೆಯೇ ಮಾಡುವೆನು; ತಾವು ಅಗತ್ಯವಾಗಿ ಬಂದು ಈ ಜನಾಂಗದವರನ್ನು ಶಪಿಸಿ ನನಗೆ ನೆರವಾಗಬೇಕು’ ಎಂದು ಹೇಳಿಕಳಿಸಿದ್ದಾರೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಏಕೆಂದರೆ ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು. ನೀನು ಏನು ಹೇಳಿದರೂ ಅದನ್ನು ಮಾಡುತ್ತೇನೆ. ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸಬೇಕು’” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು; ನೀನು ಏನು ಹೇಳಿದರೂ ಅದನ್ನು ಮಾಡುತ್ತೇನೆ; ನೀನು ಅಗತ್ಯವಾಗಿ ಬಂದು ಈ ಜನವನ್ನು ನನಗೋಸ್ಕರ ಶಪಿಸಬೇಕೆಂದು ಚಿಪ್ಪೋರನ ಮಗನಾದ ಬಾಲಾಕನು ಹೇಳುತ್ತಾನೆಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನಾನು ಹೇಳುವುದನ್ನು ನೀನು ಮಾಡಿದರೆ, ನಾನು ನಿನಗೆ ಹಣವನ್ನು ಮತ್ತು ಗೌರವವನ್ನು ಬಹಳವಾಗಿ ಕೊಡುವೆನು ಮತ್ತು ನೀನು ಹೇಳಿದ್ದೆಲ್ಲವನ್ನು ಮಾಡುವೆನು. ಬಂದು, ನನಗಾಗಿ ಈ ಜನರನ್ನು ಶಪಿಸು” ಎಂದು ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಏಕೆಂದರೆ ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು. ನೀನು ಹೇಳುವುದನ್ನೆಲ್ಲಾ ನಾನು ಮಾಡುವೆನು. ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 22:17
12 ತಿಳಿವುಗಳ ಹೋಲಿಕೆ  

ಆದುದರಿಂದ ನಿನ್ನ ಊರಿಗೆ ತೆರಳು. ನಿನ್ನನ್ನು ಬಹಳವಾಗಿಸನ್ಮಾನಿಸಬೇಕೆಂದಿದ್ದೆ. ಆದರೆ ನಿನಗೆ ಸನ್ಮಾನ ಕೂಡದೆಂದು ಸರ್ವೇಶ್ವರ ಆಜ್ಞೆಮಾಡಿದ್ದಾನೆ,” ಎಂದನು.


ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?


ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದನು.


ಇದಲ್ಲದೆ, ಅರಸನ ಸೀಮೆಯಲ್ಲಿದ್ದ ಕಂಚುಕಿಗಳಲ್ಲೊಬ್ಬನಾದ ಹರ್ಬೋನನು, “ಇಗೋ, ಅರಸನ ಪ್ರಾಣವನ್ನು ರಕ್ಷಿಸಲು ಸಮಾಚಾರವನ್ನು ತಿಳಿಸಿದ ಮೊರ್ದಕೈಯನ್ನು ಕೊಲ್ಲುವುದಕ್ಕಾಗಿ ಹಾಮಾನನು ಸಿದ್ಧಮಾಡಿಸಿದ ಇಪ್ಪತ್ತೆರಡು ಮೀಟರ್ ಎತ್ತರದ ನೇಣುಗಂಬವಿದೆಯಲ್ಲ,” ಎನ್ನಲು ಅರಸನು, “ಇವನನ್ನು ಅದಕ್ಕೆ ನೇತುಹಾಕಿರಿ,” ಎಂದು ಆಜ್ಞಾಪಿಸಿದನು.


ಅವರ ಮುಂದೆ ತನ್ನ ಸಿರಿಸಂಪತ್ತನ್ನೂ ಪುತ್ರಲಾಭಾತಿಶಯವನ್ನೂ ಅರಸನು ತನ್ನನ್ನು ಸನ್ಮಾನಿಸಿ ಎಲ್ಲಾ ಪದಾಧಿಕಾರಿಗಳಲ್ಲಿಯೂ ರಾಜಸೇವಕರಲ್ಲಿಯೂ ತನಗೆ ಶ್ರೇಷ್ಠಸ್ಥಾನವನ್ನು ಕೊಟ್ಟದ್ದನ್ನೂ ವರ್ಣಿಸಿದನು.


“ಬೆಳೆ ಕೊಯ್ಯವುದಕ್ಕೆ ಕುಡುಗೋಲು ಹಾಕುವ ಕಾಲ ಮೊದಲ್ಗೊಂಡು ಏಳು ವಾರಗಳನ್ನು ಎಣಿಸಿ,


ಅಲ್ಲಿ ಬಿಳಾಮನನ್ನು ಕಂಡು, “ತಮ್ಮನ್ನು ತುರ್ತಾಗಿ ಕರೆದುತರಲು ನಾನು ದೂತರನ್ನು ಕಳಿಸಿದೆನಲ್ಲವೆ? ತಾವೇಕೆ ಆಗಲೇ ಬರಲಿಲ್ಲ? ತಮಗೆ ಯೋಗ್ಯವಾದ ಸತ್ಕಾರ್ಯ ನೀಡಲು ನಾನು ಅಸಮರ್ಥನೇ?” ಎಂದನು.


ಆದುದರಿಂದ ತಾವು ದಯಮಾಡಿ ಬಂದು ಈ ಜನಕ್ಕೆ ಶಾಪಹಾಕಿ ನಮಗೆ ನೆರವಾಗಬೇಕು. ಆಗ ಇವರನ್ನು ಸೋಲಿಸಿ ಈ ನಾಡಿನಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ತಮ್ಮ ಆಶೀರ್ವಾದದಿಂದ ಶುಭ, ತಮ್ಮ ಶಾಪದಿಂದ ಅಶುಭವುಂಟಾಗುತ್ತದೆ ಎಂದು ನಾನು ಬಲ್ಲೆ,” ಎಂದು ಹೇಳಿಕಳಿಸಿದನು.


ಇವರು ಬಿಳಾಮನ ಬಳಿಗೆ ಬಂದು, “ಚಿಪ್ಪೋರನ ಮಗ ಬಾಲಾಕನು ತಮಗೆ ತಿಳಿಸುವುದು ಇದು: ‘ತಾವು ದಯಮಾಡಿ ನನ್ನ ಬಳಿಗೆ ಬರಲು ಅಡ್ಡಿಯನ್ನು ಒಡ್ಡಬೇಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು