Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 20:2 - ಕನ್ನಡ ಸತ್ಯವೇದವು C.L. Bible (BSI)

2 ಜನರಿಗೆ ನೀರು ಇಲ್ಲದೆಹೋಯಿತು. ಅವರು ಮೋಶೆ ಮತ್ತು ಆರೋನರ ವಿರುದ್ಧ ಸಭೆಸೇರಿ ಮೋಶೆಯ ಸಂಗಡ ವಾದಿಸತೊಡಗಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಸಮೂಹದವರಿಗೆ ನೀರು ಇಲ್ಲದ ಕಾರಣ ಅವರು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಕೂಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಸಮೂಹದವರಿಗೆ ನೀರು ಇಲ್ಲದ ಕಾರಣ ಅವರು ಮೋಶೆ ಆರೋನರಿಗೆ ವಿರೋಧವಾಗಿ ಕೂಡಿಕೊಂಡು ಮೋಶೆಯ ಸಂಗಡ ವಿವಾದಿಸುವವರಾಗಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಜನರಿಗೆ ನೀರು ಇಲ್ಲದೆ ಇರಲಾಗಿ ಅವರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 20:2
14 ತಿಳಿವುಗಳ ಹೋಲಿಕೆ  

ಬಳಿಕ ಕೋರಹನು ಸಮುದಾಯದವರೆಲ್ಲರನ್ನು ತಮಗೆದುರಾಗಿ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿದನು. ಆಗ ಸರ್ವೇಶ್ವರನ ತೇಜಸ್ಸು ಸಮುದಾಯದವರೆಲ್ಲರಿಗೆ ಹೊಳೆಯಿತು.


ಸಮುದಾಯದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರ ವಿರುದ್ಧ ಪ್ರತಿಭಟಿಸಲು ಸಭೆ ಸೇರಿದರು. ಅವರು ದೇವದರ್ಶನದ ಗುಡಾರದತ್ತ ನೋಡಿದಾಗ, ಮೇಘವೊಂದು ಅದನ್ನು ಆವರಿಸಿತು ಮತ್ತು ಸರ್ವೇಶ್ವರನ ತೇಜಸ್ಸು ಹೊಳೆಯಿತು.


ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು.


ಇವರೆಲ್ಲರೂ ಜೊತೆಗೂಡಿ ಮೋಶೆ ಮತ್ತು ಆರೋನರ ಬಳಿಗೆ ಬಂದು, “ನಿಮ್ಮ ವರ್ತನೆ ಅಧಿಕವಾಯಿತು. ಈ ಸಮುದಾಯದಲ್ಲಿ ಪ್ರತಿಯೊಬ್ಬನೂ ಪ್ರತಿಷ್ಠಿತನೇ. ಸರ್ವೇಶ್ವರ ಇವರೆಲ್ಲರಲ್ಲಿ ವಾಸವಾಗಿದ್ದಾರಲ್ಲವೇ? ಹೀಗಿರಲಾಗಿ ಸರ್ವೇಶ್ವರನ ಸಮುದಾಯದವರಿಗಿಂತ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದೇಕೆ?” ಎಂದು ವಾದಿಸಿದರು.


ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ, ‘ಸಂಜೆ ಮಾಂಸವನ್ನೂ ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು’ ಎಂದು ಹೇಳು,” ಎಂದರು.


ಬೆಳಿಗ್ಗೆಯೂ ಸ್ವಾಮಿಯ ತೇಜಸ್ಸು ನಿಮಗೆ ಕಾಣಬರುವುದು. ನೀವು ಸರ್ವೇಶ್ವರನ ವಿರುದ್ಧ ಗೊಣಗುಟ್ಟಿದ ಮಾತುಗಳು ಅವರಿಗೆ ಕೇಳಿಸಿವೆ. ನಾವು ಎಷ್ಟು ಮಾತ್ರದವರು ನೀವು ನಮ್ಮ ವಿರುದ್ಧ ಗೊಣಗುಟ್ಟಲು?” ಎಂದರು.


ಮರುಭೂಮಿಯಲ್ಲಿ ಇಸ್ರಯೇಲರ ಸಮಾಜವೆಲ್ಲ ಮೋಶೆ ಮತ್ತು ಆರೋನರ ವಿರುದ್ಧ ಗೊಣಗುಟ್ಟಿತು.


ಮೆರಿಬಾ ನದಿಯ ಬಳಿ ರೇಗಿಸಿದರಾತನನು I ಹೀಗೆ ಬರಮಾಡಿದರು ಮೋಶೆಗೂ ಹಾನಿಯನು II


ಇಸ್ರಯೇಲರೆಲ್ಲರು ಮೋಶೆ ಮತ್ತು ಆರೋನರ ವಿರುದ್ಧ ಗುಣಗುಟ್ಟಿದರು. “ಈಜಿಪ್ಟಿನಲ್ಲೇ ನಾವು ಸತ್ತಿದ್ದರೆ ಚೆನ್ನಾಗಿತ್ತು.


ಆದ್ದರಿಂದ ಸರ್ವೇಶ್ವರನಿಗೆ ವಿರುದ್ಧ ದಂಗೆ ಏಳಬೇಡಿ. ಆ ನಾಡಿನ ಜನರಿಗೆ ದಿಗಿಲುಪಡಬೇಡಿ. ಅವರು ನಮಗೆ ತುತ್ತಾಗುವರು. ನಾವು ಪುಷ್ಠಿಯಾಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ. ಸರ್ವೇಶ್ವರ ನಮ್ಮ ಕಡೆ ಇದ್ದಾರೆ. ಅವರಿಗೆ ಭಯಪಡಬೇಡಿ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು