Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 17:13 - ಕನ್ನಡ ಸತ್ಯವೇದವು C.L. Bible (BSI)

13 ಸರ್ವೇಶ್ವರನ ಗುಡಾರದ ಸಮೀಪಕ್ಕೆ ಬರುವವರೆಲ್ಲರು ಸಾಯಲೇ ಬೇಕಾದರೆ ಇನ್ನು ನಾವೆಲ್ಲರು ಸತ್ತಹಾಗೆ ತಾನೆ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೆಹೋವನ ಗುಡಾರದ ಹತ್ತಿರಕ್ಕೆ ಬರುವವರೆಲ್ಲರೂ ಸಾಯುತ್ತಾರಷ್ಟೆ; ನಾವೆಲ್ಲರೂ ಹಾಗೆಯೇ ಸಾಯಬೇಕೇನು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಯೆಹೋವನ ಗುಡಾರದ ಹತ್ತಿರಕ್ಕೆ ಬರುವವರೆಲ್ಲರೂ ಸಾಯುತ್ತಾರಷ್ಟೆ; ನಾವೆಲ್ಲರೂ ಹಾಗೆಯೇ ಸಾಯಬೇಕೇನು ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಯೆಹೋವನ ಗುಡಾರದ ಹತ್ತಿರಕ್ಕೆ ಬಂದವರೆಲ್ಲರೂ ಸಾಯುತ್ತಾರಲ್ಲಾ, ನಾವೆಲ್ಲರೂ ಹಾಗೆಯೇ ಸಾಯುತ್ತೇವೋ?” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಯೆಹೋವ ದೇವರ ಗುಡಾರದ ಸಮೀಪಕ್ಕೆ ಬರುವವರೆಲ್ಲರೂ ಸಾಯುವರು. ಹಾಗೆಯೇ ನಾವೆಲ್ಲರೂ ಸಾಯಬೇಕೋ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 17:13
21 ತಿಳಿವುಗಳ ಹೋಲಿಕೆ  

ಹೀಗೆ ಹಿಂದೊಮ್ಮೆ ದೇವರಿಂದ ದೂರವಾಗಿದ್ದ ನಿಮ್ಮನ್ನು ಕ್ರಿಸ್ತಯೇಸು ಸುರಿಸಿದ ರಕ್ತದ ಮೂಲಕ ದೇವರ ಹತ್ತಿರಕ್ಕೆ ತರಲಾಯಿತು.


ಈ ಮಾತುಗಳನ್ನು ಕೇಳಿದಾಕ್ಷಣವೇ ಅನನೀಯನು ಸತ್ತುಬಿದ್ದನು.


ಆದಕಾರಣ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಟ್ಟುಬಿಡಿ. ‘ಇಡೀ ನಾಡೇ ನಾಶವಾಗಲಿ’ ಎಂಬ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ತೀರ್ಪನ್ನು ನಾನು ಕೇಳಿದ್ದೇನೆ.


ಇಲ್ಲವಾಗುವೆವು ನಿನ್ನ ಕೋಪದಿಂದ I ತಲ್ಲಣಗೊಳ್ವೆವು ನಿನ್ನ ರೌದ್ರದಿಂದ II


ಮೊದಲೊಂದು ಸಾರಿ, ಅದನ್ನು ತರಲು ನೀವು ಇಲ್ಲದೇ ಹೋದುದರಿಂದ ಹಾಗು ನಾವು ತಕ್ಕ ರೀತಿಯಲ್ಲಿ ಅವರನ್ನು ಆರಾಧಿಸದೇ ಹೋದುದಕ್ಕಾಗಿ ನಮ್ಮ ದೇವರಾದ ಸರ್ವೇಶ್ವರ ನಮ್ಮನ್ನು ಶಿಕ್ಷಿಸಿದರು,” ಎಂದು ಅವರನ್ನು ಎಚ್ಚರಿಸಿದನು.


“ಆ ಸೈನಿಕರೆಲ್ಲರು ಸತ್ತುಹೋದ ನಂತರ ಸರ್ವೇಶ್ವರ ನನಗೆ,


ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ತಮ್ಮ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳವರಾಗಿದ್ದ ಆ ಪೀಳಿಗೆಯವರೆಲ್ಲರು ನಾಶವಾಗುವ ತನಕ, ಅಂದರೆ ನಾಲ್ವತ್ತುವರ್ಷ ಕಾಲ, ಇಸ್ರಯೇಲರನ್ನು ಮರುಭೂಮಿಯಲ್ಲೆ ಅಲೆಯುವಂತೆ ಮಾಡಿದರು.


ಇಸ್ರಯೇಲ್ ಸಮಾಜದವರಿಗೆ ಅವನು, “ಈ ದುಷ್ಟರ ಡೇರೆಗಳ ಬಳಿಯಿರದೆ ದೂರಹೋಗಿ. ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬೇಡಿ. ಇವರ ದೋಷಗಳಿಗೆ ಬರಲಿರುವ ಶಿಕ್ಷೆ ನಿಮ್ಮನ್ನು ಕೊಚ್ಚಿಕೊಂಡು ಹೋದೀತು,” ಎಂದು ಎಚ್ಚರಿಸಿದನು.


ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರಕೊಟ್ಟಳು.


ಸರ್ವೇಶ್ವರ ಸ್ವಾಮಿ ಆರೋನನಿಗೆ ಹೀಗೆಂದರು: “ದೇವದರ್ಶನದ ಗುಡಾರದ ವಿಷಯದಲ್ಲಿ ಏನಾದರು ಅಕ್ರಮ ನಡೆದರೆ ನೀನು, ನಿನ್ನ ಸಂತತಿಯವರು ಮತ್ತು ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕ ಸೇವೆಯ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನು ಮತ್ತು ನಿನ್ನ ಸಂತತಿಯವರು ಮಾತ್ರ ಆ ದೋಷದ ಫಲವನ್ನು ಅನುಭವಿಸಬೇಕು.


ಆ ಇಸ್ರಯೇಲ ವ್ಯಕ್ತಿಯ ಹಿಂದೆಯೇ ಹೋಗಿ, ಅವನ ಒಳಕೋಣೆಯನ್ನು ಹೊಕ್ಕು ಅವರಿಬ್ಬರನ್ನು, ಅಂದರೆ ಆ ಇಸ್ರಯೇಲನನ್ನು ಮತ್ತು ಆ ಮಹಿಳೆಯನ್ನು ಒಂದೇ ಬಾರಿಗೆ ಹೊಟ್ಟೆಯಲ್ಲಿ ತಿವಿದುಕೊಂದನು. ಹೀಗೆ ಇಸ್ರಯೇಲರಿಗೆ ಒದಗಿದ್ದ ಜಾಡ್ಯ ನಿಂತುಹೋಯಿತು.


ಅಲ್ಲಿ ಸರ್ವೇಶ್ವರನಿಗೆ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ಅವರಿಗೆ ದಹನಬಲಿಗಳನ್ನು ಹಾಗು ಶಾಂತಿಸಮಾಧಾನದ ಬಲಿಗಳನ್ನು ಅರ್ಪಿಸಿದನು. ಹೀಗೆ ನಾಡಿನ ಮೇಲಿದ್ದ ಸರ್ವೇಶ್ವರನ ಕೋಪ ಶಮನವಾಯಿತು. ಇಸ್ರಯೇಲರಲ್ಲಿದ್ದ ಆ ಸಂಹಾರಕವ್ಯಾಧಿ ನಿಂತುಹೋಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು