Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 16:2 - ಕನ್ನಡ ಸತ್ಯವೇದವು C.L. Bible (BSI)

2 ಇವರ ಸಮೇತ ಸಮುದಾಯದವರಲ್ಲಿ ಮುಖ್ಯಸ್ಥರೂ ಸಲಹೆಗಾರರೂ ಹೆಸರಾಂತ ವ್ಯಕ್ತಿಗಳೂ ಆಗಿದ್ದ 250 ಮಂದಿ ಇಸ್ರಯೇಲರು ಕೂಡ ದಂಗೆಯೆದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇಸ್ರಾಯೇಲರ ಸಮೂಹದವರಲ್ಲಿದ್ದ ಮುಖ್ಯಸ್ಥರೂ, ಪ್ರಸಿದ್ಧರಾಗಿ ಹೆಸರು ಹೊಂದಿದ ಇನ್ನೂರೈವತ್ತು ಜನರು ಮೋಶೆಗೆ ವಿರುದ್ಧವಾಗಿ ಪ್ರತಿಭಟಿಸಿ ತಿರುಗಿಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಮತ್ತು ಸಮೂಹದವರಲ್ಲಿ ಮುಖ್ಯಸ್ಥರಾಗಿಯೂ ಆಲೋಚನಾಕರ್ತರಾಗಿಯೂ ಹೆಸರುಗೊಂಡವರಾಗಿಯೂ ಇದ್ದ ಇನ್ನೂರೈವತ್ತುಮಂದಿ ಇಸ್ರಾಯೇಲ್ಯರೂ ಮೋಶೆಗೆ ವಿರೋಧವಾಗಿ ತಿರುಗಿಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಈ ನಾಲ್ಕು ಮಂದಿ ಇಸ್ರೇಲರು ಇನ್ನಿತರ ಇನ್ನೂರೈವತ್ತು ಗಂಡಸರೊಂದಿಗೆ ಮೋಶೆಗೆ ವಿರುದ್ಧವಾಗಿ ಎದ್ದರು. ಅವರು ಜನರಿಂದ ಆರಿಸಲ್ಪಟ್ಟ ನಾಯಕರಾಗಿದ್ದುದರಿಂದ ಜನರೆಲ್ಲರೂ ಅವರನ್ನು ಬಲ್ಲವರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಇಸ್ರಾಯೇಲರೊಳಗಿಂದ ಸಭೆಯ ಪ್ರಧಾನರಾಗಿಯೂ ಸಭೆಯ ಪ್ರಸಿದ್ಧರಾಗಿಯೂ ಹೆಸರು ಹೊಂದಿದವರಾಗಿಯೂ ಇರುವ ಇನ್ನೂರ ಐವತ್ತು ಮಂದಿಯೊಂದಿಗೆ ಮೋಶೆಗೆ ಎದುರಾಗಿ ತಿರುಗಿಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 16:2
10 ತಿಳಿವುಗಳ ಹೋಲಿಕೆ  

ಎಲೀಯಾಬನ ಮಕ್ಕಳು ಇವರು - ನೆಮೂವೇಲ್, ದಾತಾನ್ ಮತ್ತು ಅಬೀರಾಮ್, ಕೋರಹನ ಪಂಗಡದವರು ಸರ್ವೇಶ್ವರನಿಗೆ ವಿರುದ್ಧ ವಾದಿಸಿದ ಕಾಲದಲ್ಲಿ ಅವರೊಂದಿಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧ ಪ್ರತಿಭಟಿಸಿದ ಆಲೋಚನಾಕರ್ತರು ದಾತಾನ್ ಮತ್ತು ಅಬೀರಾಮ್.


ಇವರು ಅವಳನ್ನು ಅವಮಾನಪಡಿಸಿ, ಅವಳ ಗಂಡು ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ, ಅವಳನ್ನು ಖಡ್ಗದಿಂದ ಸಂಹರಿಸಿದರು. ನ್ಯಾಯನಿರ್ಣಯವಾಗುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.


ಅವರ ಗೋತ್ರಗಳ ಮುಖ್ಯಸ್ಥರು: ಏಫೆರ್, ಇಷೀ, ಎಲೀಯೆಲ್, ಅಜ್ರಿಯೇಲ್, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್ ಎಂಬವರು. ಇವರೆಲ್ಲರೂ ಪ್ರಖ್ಯಾತ ಸೈನಿಕರೂ ತಮ್ಮ ಗೋತ್ರಗಳ ನಾಯಕರೂ ಆಗಿದ್ದರು.


ದೇವಪುತ್ರರೂ ಮನುಷ್ಯಪುತ್ರಿಯರೂ ಕೂಡಿ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದನಂತರವೂ ಜಗದಲ್ಲಿ ‘ನೆಪೀಲಿಯರು’ ಇದ್ದರು. ಇವರೇ ಪ್ರಾಚೀನಕಾಲದ ಸುಪ್ರಸಿದ್ಧ ಪರಾಕ್ರಮಿಗಳು.


ನಾನು ನಿನಗೆ ಅನುಗ್ರಹಿಸಿದ ನಿನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ.


ಎಫ್ರಯಿಮ್ ಗೋತ್ರದಿಂದ: 20,800 ಮಹಾರಣವೀರರು;


ಇವರು ಸಮಾಜದಲ್ಲಿ ಹೆಸರು ಪಡೆದವರು. ತಮ್ಮ ತಮ್ಮ ಕುಲಗಳಲ್ಲಿ ಪ್ರಧಾನ ಪುರುಷರು, ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳು.


ಸರ್ವೇಶ್ವರನ ಬಳಿಯಿಂದ ಬೆಂಕಿ ಹೊರಟು ಧೂಪಾರತಿಯನ್ನು ಅರ್ಪಿಸುತ್ತಿದ್ದ ಆ 250 ಮಂದಿಯನ್ನು ಭಸ್ಮಮಾಡಿತು.


ಮೋಶೆ ಕೂಷ್ ನಾಡಿನ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು. ಈ ಕಾರಣ ಮಿರ್ಯಾಮಳು ಮತ್ತು ಆರೋನನು ಅವನಿಗೆ ವಿರುದ್ಧ ಮಾತಾಡತೊಡಗಿದರು.


“ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದರು. ಅವರು ಕೋರಹನ ಜತೆ ಸೇರಿ ಸರ್ವೇಶ್ವರನಿಗೆ ವಿರುದ್ಧ ಪ್ರತಿಭಟಿಸಿದವರಲ್ಲ. ಅವರು ಸತ್ತದ್ದು ತಮ್ಮ ಸ್ವಂತ ಪಾಪದ ನಿಮಿತ್ತ. ಅವರಿಗೆ ಗಂಡುಮಕ್ಕಳಿರಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು