Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 14:23 - ಕನ್ನಡ ಸತ್ಯವೇದವು C.L. Bible (BSI)

23 ಆದ್ದರಿಂದ ಇವರ ಪೂರ್ವಜರಿಗೆ ಪ್ರಮಾಣಪೂರ್ವಕವಾಗಿ ನಾನು ವಾಗ್ದಾನ ಮಾಡಿದ ಆ ನಾಡನ್ನು ಇವರಾರು ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ. ನನ್ನನ್ನು ತಿರಸ್ಕರಿಸಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವುದಿಲ್ಲ, ನನ್ನನ್ನು ಅಲಕ್ಷ್ಯ ಮಾಡಿದವರೆಲ್ಲರೂ ಅದನ್ನು ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 14:23
12 ತಿಳಿವುಗಳ ಹೋಲಿಕೆ  

‘ಈಜಿಪ್ಟ್ ದೇಶದಿಂದ ಹೊರಬಂದ ಈ ಜನರಲ್ಲಿ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಮತ್ತು ನೂನನ ಮಗ ಯೆಹೋಶುವನು ಇವರಿಬ್ಬರೇ ಹೊರತಾಗಿ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದರು.


ಮೋಶೆ ಮತ್ತು ಯಾಜಕ ಆರೋನನು ಸೀನಾಯಿ ಮರುಭೂಮಿಯಲ್ಲಿ ಇಸ್ರಯೇಲರ ಜನಗಣತಿ ಮಾಡಿದಾಗ ಎಣಿಕೆಯಾದವರಲ್ಲಿ ಒಬ್ಬರಾದರೂ ಇವರಲ್ಲಿರಲಿಲ್ಲ.


ಆಮೇಲೆ, ‘ನಾಡುಗಳಲ್ಲೆಲ್ಲಾ ಶ್ರೇಷ್ಠವಾದ ನಾಡಿಗೆ, ಹಾಲೂ ಜೇನೂ ಹರಿಯುವ ಆ ವಾಗ್ದತ್ತನಾಡಿಗೆ ನಿಮ್ಮನ್ನು ಸೇರಿಸೆನು’ ಎಂದು ಮರುಭೂಮಿಯಲ್ಲಿ ಅವರಿಗೆ ಪ್ರಮಾಣಮಾಡಿ ಹೇಳಿದೆ.


ಲೋಕಾದಿಯಲ್ಲೇ, ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿದ್ದರೂ ಅವರು, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು,” ಎಂದು ಹೇಳಿದ್ದಾರೆ. ವಿಶ್ವಾಸಿಸುವ ನಾವಾದರೋ ಆ ವಿಶ್ರಾಂತಿಯ ನೆಲೆಯನ್ನು ಸೇರುತ್ತೇವೆ.


ಈ ಕಾರಣ ಆಣೆಯಿಟ್ಟನು ಕೈಯೆತ್ತಿ : I “ಬೀಳಮಾಡುವೆನು ನಿಮ್ಮನು ಅಡವಿಯಲಿ, II


ಎಂತಲೆ ಸೇರರಿವರು ನನ್ನ ವಿಶ್ರಾಂತಿ ನೆಲೆ I ಎಂದು ಸಿಟ್ಟಿನಿಂದ ಕೆರಳಿ ನಾ ಶಪಥಮಾಡಿದೆ II


ಹೆಚ್ಚಿಸಿದಿರಿ ಅವರ ಮಕ್ಕಳನು ಆಗಸದ ನಕ್ಷತ್ರಗಳಷ್ಟೆ; ಬರಮಾಡಿದಿರಿ ಆ ಮಕ್ಕಳನು ವಾಗ್ದತ್ತ ನಾಡಿಗೆ ‘ಅದ ಸೇರಿ, ವಶಮಾಡಿಕೊಳ್ಳಿ’ ಎಂದು ಹೇಳಿದಿರಾ ಪಿತೃಗಳಿಗೆ.


ಏಕೆಂದರೆ ನಿಶ್ಚಯವಾಗಿ ಅವರು ಮರುಭೂಮಿಯಲ್ಲೇ ಸಾಯುವರೆಂದು ಸರ್ವೇಶ್ವರ ಸ್ವಾಮಿ ಹೇಳಿದ್ದರು. ಆದ್ದರಿಂದ ಯೆಫುನ್ನೆಯ ಮಗ ಕಾಲೇಬ್ ಮತ್ತು ನೂನನ ಮಗ ಯೆಹೋಶುವ ಇವರಿಬ್ಬರನ್ನು ಬಿಟ್ಟರೆ ಅವರಲ್ಲಿ ಯಾರೂ ಉಳಿಯಲಿಲ್ಲ.


ಆ ನಾಡನ್ನು ನಿಮಗೆ ಕೊಟ್ಟಿದ್ದೇನೆ. ಸರ್ವೇಶ್ವರನೆಂಬ ನಾನು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಕೋಬರಿಗೂ ಅವರ ಸಂತತಿಯವರಿಗೂ ಆ ನಾಡನ್ನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ್ದೆನು. ಅದನ್ನು ಸೇರಿ ಸ್ವಾಧೀನಮಾಡಿಕೊಳ್ಳಿ,’ ಎಂದು ಆಜ್ಞಾಪಿಸಿದರು.


ಅದು ನನ್ನ ಮಾತನ್ನು ಕೇಳದೆ ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ್ದೇ ಆದರೆ ನಾನು ಮನಸ್ಸನ್ನು ಬದಲಾಯಿಸುವೆನು. ಅದಕ್ಕೆ ಮಾಡಬೇಕೆಂದಿದ್ದ ಒಳಿತನ್ನು ಮಾಡದಿರುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು