Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 1:16 - ಕನ್ನಡ ಸತ್ಯವೇದವು C.L. Bible (BSI)

16 ಇವರು ಸಮಾಜದಲ್ಲಿ ಹೆಸರು ಪಡೆದವರು. ತಮ್ಮ ತಮ್ಮ ಕುಲಗಳಲ್ಲಿ ಪ್ರಧಾನ ಪುರುಷರು, ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಕುಲಗಳಲ್ಲಿ ಪ್ರಧಾನಪುರುಷರು ಹಾಗೂ ಇಸ್ರಾಯೇಲಿನ ಕುಲಗಳ ಪ್ರಮುಖರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಇವರು ಸರ್ವಸಮೂಹದವರೊಳಗಿಂದ ಕರಸಿಕೊಂಡವರು, ತಮ್ಮ ತಮ್ಮ ಕುಲಗಳಲ್ಲಿ ಪ್ರಧಾನಪುರುಷರು, ಇಸ್ರಾಯೇಲ್ಯರಲ್ಲಿ ಸಹಸ್ರಾಧಿಪತಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಸರ್ವಸಮೂಹದವರೊಳಗಿಂದ ಆರಿಸಲ್ಪಟ್ಟಿದ್ದ ಇವರು ತಮ್ಮ ಪೂರ್ವಿಕರ ಕುಲಗಳಿಗೆ ನಾಯಕರು ಮತ್ತು ಇಸ್ರೇಲರಿಗೆ ಸಹಸ್ರಾಧಿಪತಿಗಳಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಪುರಾತನ ಗೋತ್ರಗಳ ನಾಯಕರು. ಇವರು ಇಸ್ರಾಯೇಲಿನ ಗೋತ್ರಗಳ ಪ್ರಮುಖರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 1:16
20 ತಿಳಿವುಗಳ ಹೋಲಿಕೆ  

ಆಗ ಇಸ್ರಯೇಲರ ಮುಖ್ಯಸ್ಥರು, ಅಂದರೆ ಗೋತ್ರನಾಯಕರು ಹಾಗೂ ಕುಲಾಧಿಪತಿಗಳಾಗಿದ್ದು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು, ಕಾಣಿಕೆಗಳನ್ನು ತಂದೊಪ್ಪಿಸಿದರು.


ಇಸ್ರಯೇಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಮೇಲೆ ಅಧಿಪತಿಗಳನ್ನು ನೇಮಿಸಿದನು.


ಆದರೆ ನೀನು ಈ ಜನರಲ್ಲೆಲ್ಲಾ ಸಮರ್ಥರು, ದೇವಭಕ್ತರು, ನಂಬಿಗಸ್ಥರು ಹಾಗು ಲಂಚ ಮುಟ್ಟದವರು ಆಗಿರುವ ವ್ಯಕ್ತಿಗಳನ್ನು ಆರಿಸಿಕೊ. ಅಂಥವರನ್ನು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಅಧಿಪತಿಗಳನ್ನಾಗಿ ನೇಮಿಸು.


ಎಲೀಯಾಬನ ಮಕ್ಕಳು ಇವರು - ನೆಮೂವೇಲ್, ದಾತಾನ್ ಮತ್ತು ಅಬೀರಾಮ್, ಕೋರಹನ ಪಂಗಡದವರು ಸರ್ವೇಶ್ವರನಿಗೆ ವಿರುದ್ಧ ವಾದಿಸಿದ ಕಾಲದಲ್ಲಿ ಅವರೊಂದಿಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧ ಪ್ರತಿಭಟಿಸಿದ ಆಲೋಚನಾಕರ್ತರು ದಾತಾನ್ ಮತ್ತು ಅಬೀರಾಮ್.


ಇವರ ಸಮೇತ ಸಮುದಾಯದವರಲ್ಲಿ ಮುಖ್ಯಸ್ಥರೂ ಸಲಹೆಗಾರರೂ ಹೆಸರಾಂತ ವ್ಯಕ್ತಿಗಳೂ ಆಗಿದ್ದ 250 ಮಂದಿ ಇಸ್ರಯೇಲರು ಕೂಡ ದಂಗೆಯೆದ್ದರು.


ಈ ಕೆಲಸಕ್ಕಾಗಿ ಒಂದೊಂದು ಕುಲದಿಂದ ಆಯಾ ಕುಲದ ಮುಖ್ಯಸ್ಥನನ್ನು ಸಹಾಯಕನನ್ನಾಗಿ ತೆಗೆದುಕೊಳ್ಳಿ;


ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು.


ಆದ್ದರಿಂದ ಅವನು ಅಡಗಿಕೊಳ್ಳತಕ್ಕ ಎಲ್ಲಾ ಗುಟ್ಟಾದ ಸ್ಥಳಗಳನ್ನು ಗೊತ್ತುಮಾಡಿಕೊಂಡು ಖಚಿತವಾದ ವರ್ತಮಾನವನ್ನು ನನಗೆ ಮುಟ್ಟಿಸಿರಿ. ನಾನು ನಿಮ್ಮ ಸಂಗಡ ಬರುವೆನು. ಅವನು ನಾಡಿನಲ್ಲಿ ಇರುವುದಾದರೆ ಯೆಹೂದ ಪ್ರಜೆಗಳ ಮಧ್ಯದಲ್ಲೆಲ್ಲಾ ಹುಡುಕಿ ಅವನನ್ನು ಹಿಡಿಯುವೆನು,” ಎಂದನು.


ಆಗ ಅವನು ತನ್ನ ಸುತ್ತಲೂ ನಿಂತಿದ್ದ ಪರಿವಾರದವರಿಗೆ, “ಬೆನ್ಯಾಮೀನನ ಕುಲಪುತ್ರರೇ ಕೇಳಿ; ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ಮಾಡುವುದೇಕೆ? ಜೆಸ್ಸೆಯನ ಮಗನು ನಿಮ್ಮೆಲ್ಲರಿಗೂ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಕೊಡುತ್ತಾನೆಯೇ? ಎಲ್ಲರನ್ನು ಸಹಸ್ರಾಧಿಪತಿಗಳನ್ನಾಗಲಿ, ಶತಾಧಿಪತಿಗಳನ್ನಾಗಲಿ ಮಾಡುತ್ತಾನೆಯೆ?


ಆಗ ಗಿದ್ಯೋನನು, “ಸ್ವಾಮೀ, ನಾನು ಇಸ್ರಯೇಲರನ್ನು ರಕ್ಷಿಸುವುದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆ ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು,” ಎಂದನು.


ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಬುದ್ಧಿವಂತರನ್ನು ಕರೆಯಿಸಿ ಒಂದೊಂದು ಕುಲದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ ಹಾಗು ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ಹಾಗು ಉಪಾಧಿಕಾರಿಗಳನ್ನಾಗಿ ನೇಮಿಸಿದೆ.


ನಾನು ಅಲ್ಲಿಗೆ ಇಳಿದುಬಂದು ನಿನ್ನೊಡನೆ ಮಾತಾಡುವೆನು. ನಿನಗೆ ನಾನು ಅನುಗ್ರಹಿಸಿರುವ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ಅವರಿಗೂ ಹಂಚಿಕೊಡುವೆನು. ಆಗ ನೀನೊಬ್ಬನೇ ಈ ಜನರ ಜವಾಬ್ದಾರಿಯನ್ನು ವಹಿಸಬೇಕಾಗುವುದಿಲ್ಲ; ನಿನ್ನ ಸಂಗಡ ಇವರೂ ವಹಿಸಿಕೊಳ್ಳುವರು.


ನಫ್ತಾಲಿ ಕುಲದಿಂದ ಏನಾನನ ಮಗ ಅಹೀರ.


ಹೀಗೆ ಹೆಸರಿನಿಂದ ಸೂಚಿತರಾದ ವ್ಯಕ್ತಿಗಳನ್ನು ಮೋಶೆ ಮತ್ತು ಆರೋನರು ಕರೆದರು.


ಒಂದನ್ನು ಮಾತ್ರ ಊದಿಸಿದಾಗ ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳಾದ ಮುಖ್ಯಸ್ಥರು ನಿನ್ನ ಬಳಿಗೆ ಕೂಡಿಬರಬೇಕು.


ಮೋಶೆ ಇಸ್ರಯೇಲರ ಕುಲನಾಯಕರಿಗೆ ಹೀಗೆಂದು ಹೇಳಿದನು: ಸರ್ವೇಶ್ವರ ಸ್ವಾಮಿಯ ಆಜ್ಞೆ ಇದು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು