Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:6 - ಕನ್ನಡ ಸತ್ಯವೇದವು C.L. Bible (BSI)

6 ಆ ಜನರು, “ಈಗ ಅವನ ಮೈ ಊದಿಕೊಳ್ಳುತ್ತದೆ; ಈಗಲೇ ಅವನು ಫಕ್ಕನೆ ಸತ್ತುಬೀಳುತ್ತಾನೆ,” ಎಂದು ಕಾದಿದ್ದರು. ಎಷ್ಟುಹೊತ್ತು ಕಾದರೂ ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿದರು. “ಇವನೊಬ್ಬ ದೇವರು,” ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವರು; “ಇವನ ಮೈ ಈಗ ಊದಿಕೊಳ್ಳುತ್ತದೆ, ಇಲ್ಲವೆ ಇವನು ಫಕ್ಕನೆ ಸತ್ತುಬೀಳುತ್ತಾನೆ” ಎಂದು ಕಾದಿದ್ದರು. ಎಷ್ಟು ಹೊತ್ತು ಕಾದರು ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು “ಇವನೊಬ್ಬ ದೇವನೇ” ಇರಬೇಕು ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಇವನು ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು. ಬಹಳ ಹೊತ್ತು ನೋಡಿಕೊಂಡಿದ್ದ ಮೇಲೆ ಅವನಿಗೆ ವಿಕಾರವೇನೂ ಆಗಿಲ್ಲವೆಂದು ಕಂಡು ಬೇರೆ ಯೋಚನೆಯುಳ್ಳವರಾಗಿ - ಇವನು ಒಬ್ಬ ದೇವರು ಎಂದು ಹೇಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಪೌಲನ ಮೈ ಊದಿಕೊಂಡು ಇದ್ದಕ್ಕಿದ್ದಂತೆ ಸತ್ತುಬೀಳುತ್ತಾನೆ ಎಂದು ಅವರು ತಿಳಿದುಕೊಂಡಿದ್ದರು. ಅವರು ಪೌಲನನ್ನೇ ಬಹು ಹೊತ್ತಿನವರೆಗೆ ದಿಟ್ಟಿಸಿ ನೋಡುತ್ತಿದ್ದರೂ ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. ಆದ್ದರಿಂದ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿ, “ಇವನೊಬ್ಬ ದೇವರು!” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವನು ಬಾತುಹೋಗುತ್ತಾನೆ ಅಥವಾ ಇದ್ದಕ್ಕಿದ್ದಂತೆ ಸತ್ತು ಹೋಗುತ್ತಾನೆ ಎಂದು ಜನರು ಕಾದಿದ್ದರು. ಆದರೆ ಬಹಳ ಹೊತ್ತು ಕಾದು ನೋಡಿದ ಮೇಲೆ, ಅವನಿಗೆ ಕೆಟ್ಟದ್ದೇನೂ ಆಗದಿರುವುದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು, “ಇವನೊಬ್ಬ ದೇವರು” ಎಂದು ಹೇಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

6 ಪಾವ್ಲುಚೆ ಆಂಗ್ ಸುಜುನ್ ಬಗಿತ್ ರ್‍ಹಾತಾನಾಚ್ ತೊ ಮರುನ್ ಪಡ್ತಾ ಮನುನ್ ತೆನಿ ಯೆವ್ಜುನ್ ಘೆಟಲ್ಯಾನಿ, ಖರೆ ತೆನಿ ಲೈ ಯೆಳಾ ಪತರ್ ಪಾವ್ಲುಕುಚ್ ಬಗ್ಲ್ಯಾರ್ಬಿ ತೆಕಾ ಕಾಯ್ಬಿ ಹೊವ್ಕ್ ನಾ, ತಸೆ ಹೊವ್ನ್ ತೆನಿ ಅಪ್ಲೆ ಯೆವ್ಜನ್ ಬದ್ಲುನ್ “ಹ್ಯೊ ಎಕ್ ದೆವ್!” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:6
6 ತಿಳಿವುಗಳ ಹೋಲಿಕೆ  

“ಮಾತನಾಡುತ್ತಿರುವವನು ಮಾನವನಲ್ಲ, ದೇವರೇ!” ಎಂದು ಜನರು ಘೋಷಣೆ ಮಾಡಿದರು.


ಯೇಸುವಿನ ಹಿಂದೆಯೂ ಮುಂದೆಯೂ ಗುಂಪುಗುಂಪಾಗಿ ಹೋಗುತ್ತಿದ್ದ ಜನರು : “ದಾವೀದ ಕುಲಪುತ್ರನಿಗೆ ಜಯವಾಗಲಿ! ಸರ್ವೇಶ್ವರನ ನಾಮದಲಿ ಬರುವವನಿಗೆ ಮಂಗಳವಾಗಲಿ! ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ!” ಎಂದು ಹರ್ಷೋದ್ಗಾರ ಮಾಡುತ್ತಿದ್ದರು.


“ಹಾಗಾದರೆ, ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನು ಏನುಮಾಡಲಿ?” ಎಂದು ಪಿಲಾತನು ಮರುಪ್ರಶ್ನೆ ಹಾಕಿದನು. ಅವರೆಲ್ಲರು, “ಅವನನ್ನು ಶಿಲುಬೆಗೇರಿಸಿ,” ಎಂದು ಉತ್ತರಿಸಿದರು.


ಆ ಪಟ್ಟಣದವರೆಲ್ಲರೂ ಹಿರಿಯರು ಕಿರಿಯರು ಎನ್ನದೆ, ಅವನ ಮಾತಿಗೆ ಕಾತರದಿಂದ ಕಿವಿಗೊಡುತ್ತಿದ್ದರು. ‘ದೇವರ ಮಹಾಶಕ್ತಿ’ ಇವನೇ ಎಂದುಕೊಳ್ಳುತ್ತಿದ್ದರು.


ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಪಕ್ಕದಲ್ಲೇ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು