Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 24:22 - ಕನ್ನಡ ಸತ್ಯವೇದವು C.L. Bible (BSI)

22 ಕ್ರಿಸ್ತಮಾರ್ಗದ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದ ಫೆಲಿಕ್ಸನು, “ಸಹಾಸ್ರಾಧಿಪತಿ ಲೂಸಿಯನು ಬಂದ ಮೇಲೆ ನಾನು ಈ ವ್ಯಾಜ್ಯವನ್ನು ತೀರ್ಮಾನಿಸುತ್ತೇನೆ,” ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಫೇಲಿಕ್ಸನು ಈ ಮಾರ್ಗವನ್ನು, ತಕ್ಕ ಮಟ್ಟಿಗೆ ತಿಳಿದವನಾಗಿದ್ದರೂ ಅವರಿಗೆ; “ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿನ್ನ ಪ್ರಕರಣವನ್ನು ತೀರ್ಮಾನಿಸುತ್ತೇನೆಂದು” ಹೇಳಿ, ವಿಚಾರಣೆಯನ್ನು ತಡೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಫೇಲಿಕ್ಸನು ಕ್ರಿಸ್ತ ಮಾರ್ಗವನ್ನು ತಕ್ಕ ಮಟ್ಟಿಗೆ ತಿಳಿದವನಾದರೂ ಅವರಿಗೆ - ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿಮ್ಮ ಕಾರ್ಯವನ್ನು ತೀರ್ಮಾನಿಸುತ್ತೇನೆಂದು ಹೇಳಿ ವಿಚಾರಣೆಯನ್ನು ತಡೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಈ ಮಾರ್ಗದ ವಿಷಯದ ಬಗ್ಗೆ ಬಹು ಸೂಕ್ಷ್ಮವಾಗಿ ತಿಳಿದುಕೊಂಡಿದ್ದ ಫೇಲಿಕ್ಸನು ವಿಚಾರಣೆಯನ್ನು ಮುಂದಕ್ಕೆ ಹಾಕಿದನು. ಅನಂತರ ಅವನು, “ಸಹಸ್ರಾಧಿಪತಿ ಲೂಸ್ಯನು ಬಂದ ಮೇಲೆ ನಿನ್ನ ಈ ವ್ಯಾಜ್ಯ ತೀರ್ಮಾನಿಸುತ್ತೇನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

22 ಫೆಲಿಕ್ಸಾನ್ ಜೆಜುಚ್ಯಾ ವಾಟೆಚ್ಯಾ ವಿಶಯಾಚ್ಯಾ ಅದ್ದಿಚ್ ಪಾಜೆ ತವ್ಡೆ ಅರ್ಥ್ ಕರುನ್ ಘೆಟಲ್ಯಾನ್ ಅನಿ ತೆನಿ ಇಚಾರ್ನೆ ಹೊತಲೆ ಅರ್ದ್ಯಾಕುಚ್ ಇಬೆಕರುನ್ “ಸೈನಿಕಾಂಚೊ ಮುಖಂಡ್ ಲುಸಿಯಾ ಹಿತ್ತೆ ಯೆಲ್ಲ್ಯಾ ತನ್ನಾ ಮಿಯಾ ನಿರ್ದಾರ್ ಕರ್‍ತಾ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 24:22
11 ತಿಳಿವುಗಳ ಹೋಲಿಕೆ  

ಏಕೆಂದರೆ, ತಾವು ಯೆಹೂದ್ಯರ ಆಚಾರವಿಚಾರಗಳನ್ನೂ ವಾದವಿವಾದಗಳನ್ನೂ ಚೆನ್ನಾಗಿ ಬಲ್ಲಿರಿ. ಆದುದರಿಂದ ನನ್ನ ಮಾತನ್ನು ತಾಳ್ಮೆಯಿಂದ ಆಲಿಸಬೇಕೆಂದು ವಿನಂತಿಸುತ್ತೇನೆ:


ಆದರೆ ಇವನ ಬಗ್ಗೆ ಮಹಾಸನ್ನಿಧಿಗೆ ಬರೆಯಲು ನಿರ್ದಿಷ್ಟವಾದುದೇನೂ ನನಗೆ ತೋಚುವುದಿಲ್ಲ. ಒಂದು ವಿಚಾರಣೆ ನಡೆಸಿದರೆ, ಅವರಿಗೆ ಬರೆಯಲು ಏನಾದರೂ ದೊರಕಬಹುದೆಂದು ತಿಳಿದು ಇವನನ್ನು ನಿಮ್ಮ ಮುಂದೆ, ಮುಖ್ಯವಾಗಿ ಅಗ್ರಿಪ್ಪ ರಾಜರೇ, ತಮ್ಮ ಮುಂದೆ, ಹಾಜರುಪಡಿಸಿರುತ್ತೇನೆ.


ಕೆಲವು ದಿನಗಳ ನಂತರ ಫೆಲಿಕ್ಸನು ಯೆಹೂದ್ಯಳಾದ ತನ್ನ ಪತ್ನಿ ದ್ರುಸಿಲ್ಲಳೊಂದಿಗೆ ಬಂದು ಪೌಲನನ್ನು ತನ್ನ ಬಳಿಗೆ ಕರೆಯಿಸಿದನು. ಕ್ರಿಸ್ತಯೇಸುವನ್ನು ವಿಶ್ವಾಸಿಸುವ ಬಗ್ಗೆ ಪೌಲನಾಡಿದ ಮಾತುಗಳನ್ನು ಆಲೈಸಿದನು.


ಇಷ್ಟನ್ನು ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ: ಇವರು ಕುಪ್ರಸಿದ್ಧವೆಂದು ನಿಂದಿಸುವ ಮಾರ್ಗವನ್ನು ಅನುಸರಿಸುವವನು ನಾನು. ಆ ಮಾರ್ಗದ ಪ್ರಕಾರ ನಮ್ಮ ಪೂರ್ವಜರ ದೇವರನ್ನು ಆರಾಧಿಸುತ್ತೇನೆ. ಧರ್ಮಶಾಸ್ತ್ರದಲ್ಲೂ ಪ್ರವಾದಿಗಳ ಗ್ರಂಥದಲ್ಲೂ ಬರೆದಿರುವುದನ್ನೆಲ್ಲ ನಂಬುತ್ತೇನೆ.


ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ ಮಾತನಾಡುವಂತೆ ಅಪ್ಪಣೆ ಮಾಡಿದನು. ಆಗ ಪೌಲನು ಹೀಗೆಂದನು: “ತಾವು ಅನೇಕ ವರ್ಷಗಳಿಂದ ಈ ನಾಡಿನ ನ್ಯಾಯಾಧೀಶರಾಗಿದ್ದೀರಿ. ಅದನ್ನು ಅರಿತು ನಿರ್ಭಯನಾಗಿ ಪ್ರತಿವಾದವನ್ನು ತಮ್ಮ ಮುಂದಿಡುತ್ತೇನೆ.


ಇವನು ಮಹಾದೇವಾಲಯವನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದ. ಅಷ್ಟರಲ್ಲಿ ನಾವು ಇವನನ್ನು ಬಂಧಿಸಿದೆವು. ನಮ್ಮ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ಇವನನ್ನು ವಿಚಾರಣೆಗೆ ಒಳಪಡಿಸಬೇಕೆಂದಿದ್ದೆವು.


ಆ ಯೆಹೂದ್ಯರು ತಮ್ಮೊಡನೆ ಇನ್ನೂ ಸ್ವಲ್ಪಕಾಲವಿರಬೇಕೆಂದು ಅವನನ್ನು ವಿನಂತಿಸಿದರು. ಆದರೆ ಪೌಲನು ಒಪ್ಪಿಕೊಳ್ಳಲಿಲ್ಲ.


ನ್ಯಾಯಾಧಿಪತಿಗಳು ಚೆನ್ನಾಗಿ ವಿಚಾರಣೆಮಾಡಿದ ಮೇಲೆ ಆ ವ್ಯಕ್ತಿಯ ಸಾಕ್ಷಿ ಸುಳ್ಳೆಂದು ತೋರಿಬಂದರೆ,


ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು.


ಈ ಹೊಸ ಮಾರ್ಗವನ್ನು ಅವಲಂಬಿಸುವವರು ಹೆಂಗಸರೇ ಆಗಿರಲಿ, ಗಂಡಸರೇ ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾಮಂದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು.


ಈ ದಿನ ನಡೆದ ಘಟನೆಯನ್ನು ದಂಗೆಯೆಂದು ನಮ್ಮ ಮೇಲೆ ಆಪಾದನೆ ಹೊರಿಸುವ ಆಸ್ಪದವಿದೆ. ಏಕೆಂದರೆ, ಈ ಗಲಭೆಗೆ ಸರಿಯಾದ ಕಾರಣವನ್ನು ಕೊಟ್ಟು ಸಮರ್ಥಿಸಿಕೊಳ್ಳಲು ನಿಮ್ಮಿಂದಾಗದು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು