Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 24:21 - ಕನ್ನಡ ಸತ್ಯವೇದವು C.L. Bible (BSI)

21 ‘ಸತ್ತವರು ಪುನರುತ್ಥಾನ ಹೊಂದುತ್ತಾರೆ, ಎಂಬ ವಿಷಯಕ್ಕಾಗಿ ನಾನು ಇಂದು ನಿಮ್ಮ ಮುಂದೆ ವಿಚಾರಣೆಗೆ ಗುರಿಯಾಗಿದ್ದೇನೆ’ ಎಂದು ನಾನು ಆ ಸಭೆಯ ಮುಂದೆ ಕೂಗಿ ಹೇಳಿದ್ದನ್ನು ಬಿಟ್ಟರೆ, ಬೇರೆ ಏನನ್ನು ನನ್ನಲ್ಲಿ ಕಂಡರೆಂದು ಇವರೇ ಹೇಳಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ನಾನು ಇವರ ನಡುವೆ ನಿಂತು; ‘ಪುನರುತ್ಥಾನದ ವಿಷಯದಲ್ಲಿ, ಈಹೊತ್ತು ನಿಮ್ಮಿಂದ ನನಗೆ ವಿಚಾರಣೆಯಾಗುತ್ತದೆ’ ಎಂದು ಕೂಗಿ ಹೇಳಿದರ ಬಗ್ಗೆ ಹೇಳಬಹುದೇ ಹೊರತು ಬೇರೆ ಏನನ್ನೂ ಹೇಳಲಾರರು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನಾನು ಇವರ ನಡುವೆ ನಿಂತು - ಪುನರುತ್ಥಾನದ ವಿಷಯದಲ್ಲಿ ಈಹೊತ್ತು ನಿಮ್ಮಿಂದ ನನಗೆ ವಿಚಾರಣೆಯಾಗುತ್ತದೆ ಎಂದು ಕೂಗಿದ್ದನ್ನೇ ಹೊರತು ಬೇರೆ ಏನೂ ಹೇಳಲಾರರು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ‘ಇಂದು ನಾನು ನಿಮ್ಮ ಮುಂದೆ ನ್ಯಾಯವಿಚಾರಣೆಗೆ ನಿಂತಿರುವುದು ಸತ್ತವರ ಪುನರುತ್ಥಾನಕ್ಕೆ ಸಂಬಂಧಿಸಿದ್ದು,’ ಎಂದು ಅವರ ಮಧ್ಯದಲ್ಲಿ ನಿಂತು ಕೂಗಿದ್ದನ್ನು ಬಿಟ್ಟರೆ ಬೇರೆ ಏನನ್ನೂ ಇವರು ಹೇಳಲಾರರು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

21 ಮಿಯಾ ತೆಂಚ್ಯಾ ಇದ್ರಾಕ್ ಇಬೆ ರಾತಾನಾ, “ಮರಲ್ಯಾಕ್ನಿ ಪರ್ತುನ್ ಜಿವ್ ಹೊತಲೆ ಹಾಯ್ ಮನುನ್ ಮಿಯಾ ವಿಶ್ವಾಸ್ ಕರಲ್ಲ್ಯಾ ಸಾಟ್ನಿ ಹಿತ್ತೆ ಝಡ್ತಿ ಕರುನ್ಗೆವ್ಕ್ ಗುರಿ ಹೊಲೊ! ಮನ್ತಲಿ ಎಕುಚ್ ಸಂಗತ್ ಮಿಯಾ ಮೊಟ್ಯಾನ್ ಸಾಂಗ್ಲೊ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 24:21
5 ತಿಳಿವುಗಳ ಹೋಲಿಕೆ  

ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯ ಪಂಥದವರು ಮತ್ತೆ ಕೆಲವರು ಫರಿಸಾಯ ಪಂಥದವರು. ಇದನ್ನು ಗಮನಿಸಿದ ಪೌಲನು, “ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ವಂಶಜ. ಸತ್ತವರು ಪುನರುತ್ಥಾನ ಹೊಂದುತ್ತಾರೆ ಎಂಬ ನಮ್ಮ ನಿರೀಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ,” ಎಂದು ಧ್ವನಿಯೆತ್ತಿ ಸಭೆಯಲ್ಲಿ ಹೇಳಿದನು.


ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ, ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.


ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊಂದುವರು ಎಂದು ಈ ಇಬ್ಬರು ಪ್ರೇಷಿತರು ಬೋಧಿಸುತ್ತಿದ್ದರು.


ಮಾನವರು ಸಜ್ಜನರಾಗಿರಲಿ, ದುರ್ಜನರಾಗಿರಲಿ, ಪುನರುತ್ಥಾನ ಹೊಂದುವರೆಂದು ಇವರಂತೆಯೇ ನಾನು ದೇವರಲ್ಲಿ ನಂಬಿಕೆಯುಳ್ಳವನಾಗಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು