Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:23 - ಕನ್ನಡ ಸತ್ಯವೇದವು C.L. Bible (BSI)

23 ಅನಂತರ ಸಹಸ್ರಾಧಿಪತಿ ಇಬ್ಬರು ಶತಾಧಿಪತಿಗಳನ್ನು ಕರೆದು ಹೀಗೆಂದನು: “ಈ ರಾತ್ರಿ ಒಂಬತ್ತು ಗಂಟೆಗೆ ಸೆಜರೇಯ ಪಟ್ಟಣಕ್ಕೆ ಹೊರಡಲು ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನ್ನೂ ಇನ್ನೂರು ಮಂದಿ ಭರ್ಜಿ ಆಳುಗಳನ್ನೂ ಸಿದ್ಧಗೊಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆ ಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಯಿಸಿ; “ರಾತ್ರಿ ಒಂಭತ್ತು ಘಂಟೆಗೆ ಕೈಸರೈಯದ ತನಕ ಹೋಗುವಂತೆ ಇನ್ನೂರು ಮಂದಿ ಸಿಪಾಯಿಗಳನ್ನೂ, ಎಪ್ಪತ್ತುಮಂದಿ ಕುದುರೆ ಸವಾರರನ್ನೂ, ಇನ್ನೂರು ಮಂದಿ ಈಟಿ ಹಿಡಿದ ಸೈನಿಕರನ್ನು ಸಿದ್ಧಮಾಡಿರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಯಿಸಿ - ರಾತ್ರಿ ಒಂಭತ್ತು ಘಂಟೆಗೆ ಕೈಸರೈಯದ ತನಕ ಹೋಗುವಂತೆ ಇನ್ನೂರು ಮಂದಿ ಸಿಪಾಯಿಗಳನ್ನೂ ಎಪ್ಪತ್ತು ಮಂದಿ ಸವಾರರನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಬಳಿಕ ಸೇನಾಧಿಪತಿಯು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಸೆಜರೇಯಕ್ಕೆ ಕಳುಹಿಸಿಕೊಡಲು ಇನ್ನೂರು ಮಂದಿ ಸೈನಿಕರನ್ನು ಸಿದ್ಧಪಡಿಸು. ಅಲ್ಲದೆ ಎಪ್ಪತ್ತು ಮಂದಿಯ ಅಶ್ವದಳವನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಪಡಿಸು. ಈ ರಾತ್ರಿ ಒಂಭತ್ತು ಗಂಟೆಗೆ ಇಲ್ಲಿಂದ ಹೊರಡಲು ನೀವು ಸಿದ್ಧರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆಮೇಲೆ ಸಹಸ್ರಾಧಿಪತಿಯು ತನ್ನ ಇಬ್ಬರು ಶತಾಧಿಪತಿಗಳನ್ನು ಕರೆದು, “ಈ ರಾತ್ರಿ ಒಂಬತ್ತು ಗಂಟೆಗೆ ಕೈಸರೈಯಕ್ಕೆ ಹೋಗಲು ಇನ್ನೂರು ಜನ ಸೈನಿಕರನ್ನೂ ಎಪ್ಪತ್ತು ಕುದುರೆ ಸವಾರರನ್ನೂ ಇನ್ನೂರು ಜನ ಭರ್ಜಿಧರಿಸಿದವರನ್ನೂ ಸಿದ್ಧಗೊಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ಮಾನಾ ಸೈನಿಕಾಚ್ಯಾ ಮುಂಖಡಾನ್ ದೊನ್ ಸೈನಿಕಾಂಚ್ಯಾ ಅಧಿಕಾರಿಕ್ನಿ ಬಲ್ವುನ್ ತೆಂಕಾ, ಸೆಜರೆಯಾಕ್ ಧಾಡುನ್ ದಿವ್ಕ್ ದೊನ್ಸೆ ಸೈನಿಕಾಕ್ನಿ ತಯಾರ್ ಕರ್, ಅನಿ ಸತ್ತರ್ ಲೊಕಾಂಚಿ ಘೊಡ್ಯಾಂಚಿ ಸೈನ್,ಮಾನಾ ದೊನ್ಸೆ ಲೊಕಾ ಭರ್ಜಿಯಾ ಘೆಟಲಿ ಲೊಕಾ ತಯಾರ್ ಕರ್, ಆಜ್ ರಾತ್ತಿನ್ ನ್ಹೌವ್ ಗಂಟ್ಯಾಕ್ ಹಿತ್ತೆತ್ನಾ ಜಾವ್ಕ್ ತಯಾರ್ ಹೊವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:23
8 ತಿಳಿವುಗಳ ಹೋಲಿಕೆ  

ಸವಾರರು ಸೆಜರೇಯವನ್ನು ತಲುಪಿ ರಾಜ್ಯಪಾಲನಿಗೆ ಪತ್ರವನ್ನು ಕೊಟ್ಟು ಪೌಲನನ್ನು ಅವನ ವಶಕ್ಕೊಪ್ಪಿಸಿದರು.


ಫಿಲಿಪ್ಪನಾದರೋ ಆಜೋತ್ ಎಂಬಲ್ಲಿ ಕಾಣಿಸಿಕೊಂಡನು. ಅಲ್ಲಿಂದ ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರುಗಳಲ್ಲೂ ಶುಭಸಂದೇಶವನ್ನು ಸಾರುತ್ತಾ ಹೋದನು.


“ಯಜಮಾನನು ಬರುವಾಗ ನಡುರಾತ್ರಿ ಆಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು.


ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು.


“ಈ ವಿಷಯವನ್ನು ನೀನು ನನಗೆ ವರದಿಮಾಡಿರುವುದಾಗಿ ತಿಳಿಸಬೇಡ,” ಎಂದು ಸಹಸ್ರಾಧಿಪತಿ ಆ ಯುವಕನಿಗೆ ಆಜ್ಞೆಮಾಡಿ ಅವನನ್ನು ಕಳುಹಿಸಿಬಿಟ್ಟನು.


ಮರುದಿನ ಪೌಲನೊಂದಿಗೆ ಮುಂದೆಹೋಗಲು ಕುದುರೆ ಸವಾರರನ್ನು ಬಿಟ್ಟು, ಸೈನಿಕರು ಕೋಟೆಗೆ ಹಿಂದಿರುಗಿದರು.


ಸೈನಿಕರು ಈ ಆಜ್ಞೆಯನ್ನು ಶಿರಸಾವಹಿಸಿ ಪೌಲನನ್ನು ಆ ರಾತ್ರಿ ಅಂತಿಪತ್ರಿಯ ಎಂಬ ಊರಿನವರೆಗೆ ಕರೆದುಕೊಂಡು ಹೋದರು.


ಆದರೆ, ಸಹಸ್ರಾಧಿಪತಿ ಲೂಸಿಯನು ಮಧ್ಯೆಬಂದು ಬಲಾತ್ಕಾರದಿಂದ ಇವನನ್ನು ನಮ್ಮಿಂದ ಬಿಡಿಸಿಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು