Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 22:26 - ಕನ್ನಡ ಸತ್ಯವೇದವು C.L. Bible (BSI)

26 ಇದನ್ನು ಕೇಳಿದ್ದೇ, ಶತಾಧಿಪತಿಯು ಸೈನ್ಯಾಧಿಪತಿಯ ಬಳಿಗೆ ಬಂದು, “ನೀವು ಮಾಡಿಸುತ್ತಿರುವುದಾದರೂ ಏನು? ಆ ಮನುಷ್ಯ ರೋಮಿನ ಪೌರನು,” ಎಂದು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಶತಾಧಿಪತಿಯು ಆ ಮಾತನ್ನು ಕೇಳಿ ಸಹಸ್ರಾಧಿಪತಿಯ ಬಳಿಗೆ ಹೋಗಿ; “ನೀನು ಏನು ಮಾಡಬೇಕೆಂದಿದ್ದೀ? ಈ ಮನುಷ್ಯನು ರೋಮಾಪುರದ ಹಕ್ಕುದಾರನು” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಶತಾಧಿಪತಿಯು ಆ ಮಾತನ್ನು ಕೇಳಿ ಸಹಸ್ರಾಧಿಪತಿಯ ಬಳಿಗೆ ಹೋಗಿ - ನೀನು ಏನು ಮಾಡಬೇಕೆಂದಿದ್ದೀ? ಈ ಮನುಷ್ಯನು ರೋಮಾಪುರದ ಹಕ್ಕುದಾರನು ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆ ಅಧಿಕಾರಿಯು ಇದನ್ನು ಕೇಳಿದ ಕೂಡಲೇ ಸೇನಾಧಿಪತಿಯ ಬಳಿಗೆ ಬಂದು, “ನೀನು ಏನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿದೆಯೋ? ಈ ಮನುಷ್ಯನು ರೋಮಿನ ಪ್ರಜೆ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಶತಾಧಿಪತಿ ಈ ಮಾತುಗಳನ್ನು ಕೇಳಿದಾಗ, ಸಹಸ್ರಾಧಿಪತಿಯ ಬಳಿಗೆ ಹೋಗಿ ಇದನ್ನು ವರದಿ ಮಾಡಿ, “ಇವನು ರೋಮ್ ಪೌರನು. ಈಗ ನೀನೇನು ಮಾಡಬೇಕೆಂದಿದ್ದೀ?” ಎಂದು ಅವನನ್ನು ಪ್ರಶ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

26 ತ್ಯಾ ಅಧಿಕಾರಿನ್ ತೆ ಆಯ್ಕಲ್ಲ್ಯಾ ತಾಬೊಡ್ತೊಬ್ ಸೈನಿಕಾಚೊ ಮುಂಖಡಾಚ್ಯಾ ಜಗ್ಗೊಳ್ ಯೆವ್ನ್, ತಿಯಾ ಕಾಯ್ ಕರುಲ್ಲೆ ಮನುನ್ ತುಕಾ ಗೊತ್ತ್ ಹಾಯ್ ಕಾಯ್? ಹ್ಯೊ ಮಾನುಸ್ ರೊಮ್ ಮನ್ತಲ್ಯಾ ಶಾರಾಚೊ! ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 22:26
5 ತಿಳಿವುಗಳ ಹೋಲಿಕೆ  

ಈ ವ್ಯಕ್ತಿಯನ್ನು ಯೆಹೂದ್ಯರು ಹಿಡಿದು ಕೊಲ್ಲುವುದರಲ್ಲಿದ್ದರು. ಇವನು ರೋಮಿನ ಪೌರನೆಂದು ತಿಳಿದು, ನಾನು ಸೈನಿಕರೊಡನೆ ಹೋಗಿ ಇವನನ್ನು ಬಿಡಿಸಿದೆ.


ಪೌಲನನ್ನು ಪ್ರಶ್ನಿಸಲು ಬಂದಿದ್ದವರು ಆ ಕ್ಷಣವೇ ಅವನನ್ನು ಬಿಟ್ಟು ಅಗಲಿದರು. ರೋಮಿನ ಪೌರನೊಬ್ಬನನ್ನು ಬಂಧಿಸಿದುದು ಮನವರಿಕೆಯಾದಾಗ ಸಹಸ್ರಾಧಿಪತಿಗೂ ಭಯವಾಯಿತು.


ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು.


ಹೊಡೆಯುವುದಕ್ಕಾಗಿ ಅವನನ್ನು ಬಾರುಗಳಿಂದ ಕಟ್ಟುತ್ತಿದ್ದಾಗ ಪೌಲನು, ಹತ್ತಿರವೇ ನಿಂತಿದ್ದ ಶತಾಧಿಪತಿಯನ್ನು ನೋಡಿ, “ರೋಮಿನ ಪೌರನನ್ನು ಚಾವಟಿಯಿಂದ ಹೊಡೆಯುವುದು, ಅದೂ ವಿಚಾರಣೆಮಾಡದೆ ಹೊಡೆಯಿಸುವುದು, ನ್ಯಾಯಸಮ್ಮತವೋ?” ಎಂದು ಕೇಳಿದನು.


ಆಗ ಸಹಸ್ರಾಧಿಪತಿ ಪೌಲನ ಬಳಿಗೆ ಬಂದು, “ನೀನು ರೋಮಿನ ಪೌರನೋ?’ ಎಂದು ಕೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು