ಅಪೊಸ್ತಲರ ಕೃತ್ಯಗಳು 22:24 - ಕನ್ನಡ ಸತ್ಯವೇದವು C.L. Bible (BSI)24 ಜನರು ಯಾವ ಕಾರಣದಿಂದ ಅವನ ವಿರುದ್ಧ ಹೀಗೆ ಮಾಡುತ್ತಿದ್ದಾರೆಂದು ಅರಿತುಕೊಳ್ಳಲು ಸಹಸ್ರಾಧಿಪತಿ ಪೌಲನನ್ನು ಕೋಟೆ ಒಳಕ್ಕೆಕೊಂಡೊಯ್ದು, ಚಾವಟಿಯಿಂದ ಹೊಡೆದು ವಿಚಾರಿಸುವಂತೆ ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಯಾವ ಕಾರಣದಿಂದ ಹೀಗೆ ಅವನಿಗೆ ವಿರುದ್ಧವಾಗಿ ಕೂಗಾಡುತ್ತಾರೆಂಬುದನ್ನು ಸಹಸ್ರಾಧಿಪತಿಯು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ಕೋಟೆಯೊಳಗೆ ತಂದು, ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)24 ಯಾವ ಕಾರಣದಿಂದ ಹೀಗೆ ಅವನಿಗೆ ವಿರುದ್ಧವಾಗಿ ಕೂಗಾಡುತ್ತಾರೆಂಬದನ್ನು ಸಹಸ್ರಾಧಿಪತಿಯು ತಿಳುಕೊಳ್ಳುವದಕ್ಕಾಗಿ ಅವನನ್ನು ಕೋಟೆಯೊಳಗೆ ತಂದು ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಆಗ ಸೇನಾಧಿಪತಿಯು ಪೌಲನನ್ನು ದಂಡಿನ ಪಾಳೆಯದೊಳಗೆ ಕರೆದುಕೊಂಡು ಹೋಗಿ ಹೊಡೆಯಲು ಸೈನಿಕರಿಗೆ ಹೇಳಿದನು. ಜನರು ಪೌಲನ ವಿರೋಧವಾಗಿ ಈ ರೀತಿ ಕೂಗಲು ಕಾರಣವೇನೆಂದು ಪೌಲನಿಂದಲೇ ಹೇಳಿಸಬೇಕೆಂಬುದು ಸೇನಾಧಿಪತಿಯ ಅಪೇಕ್ಷೆಯಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಸಹಸ್ರಾಧಿಪತಿಯು ಪೌಲನನ್ನು ಸೈನಿಕರ ಪಾಳ್ಯದೊಳಗೆ ಒಯ್ಯಬೇಕೆಂದು, ಅವನನ್ನು ಕೊರಡೆಗಳಿಂದ ಹೊಡೆದು ಯಾವ ಅಪರಾಧಕ್ಕಾಗಿ ಜನರು ಅವನಿಗೆ ವಿರೋಧವಾಗಿ ಅರಚುತ್ತಿದ್ದರು ಎಂಬುದನ್ನು ಅವನಿಂದ ವಿಚಾರಿಸಬೇಕೆಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್24 ತನ್ನಾ ರೊಮಾಚ್ಯಾ ಸೈನಿಕಾಚ್ಯಾ ಮುಖಂಡಾನ್ ಪಾವ್ಲುಕ್ ಬುತ್ತುರ್ ಘೆವ್ನ್ ಜಾವ್ನ್ ಮಾರಾ ಮನುನ್ ಹುಕುಮ್ ದಿಲ್ಯಾನ್,ಲೊಕಾ ಅಶೆ ಬೊಬ್ ಮಾರುಕ್ ಕಾಯ್ ಕಾರನ್ ಮನ್ತಲೆ ತೆಜ್ಯಾಕ್ನಾಚ್ ಸಾಂಗ್ಸುಚೆ ಮನ್ತಲಿ ತ್ಯಾ ಮುಖಂಡಾಚಿ ಆಶ್ಯಾ ಹೊಲ್ಲಿ. ಅಧ್ಯಾಯವನ್ನು ನೋಡಿ |
ಆದರೆ ಪೌಲನು ಅವರಿಗೆ, “ನಮ್ಮನ್ನು ಶಿಕ್ಷೆಗೊಳಪಡಿಸುವಂಥ ಅಪರಾಧವನ್ನೇನೂ ನಾವು ಮಾಡಿಲ್ಲ. ಅಲ್ಲದೆ ನಾವು ರೋಮಿನ ಪೌರರು, ಆದರೂ ನಮ್ಮನ್ನು ಬಹಿರಂಗವಾಗಿ ಛಡಿಗಳಿಂದ ಹೊಡಿಸಿದ್ದಾರೆ. ಸೆರೆಮನೆಗೆ ತಳ್ಳಿದ್ದಾರೆ; ಈಗ ಗೋಪ್ಯವಾಗಿ ನಮ್ಮನ್ನು ಕಳುಹಿಸಿಬಿಡಬೇಕೆಂದಿದ್ದಾರೆಯೆ? ಇಲ್ಲ, ಇದು ಸಾಧ್ಯವಿಲ್ಲ. ನ್ಯಾಯಾಧಿಪತಿಗಳೇ ಖುದ್ದಾಗಿ ಇಲ್ಲಿಗೆ ಬಂದು ನಮ್ಮನ್ನು ಬಿಡುಗಡೆ ಮಾಡಲಿ,” ಎಂದನು.