ಅಪೊಸ್ತಲರ ಕೃತ್ಯಗಳು 21:5 - ಕನ್ನಡ ಸತ್ಯವೇದವು C.L. Bible (BSI)5 ಆದರೂ, ಆ ದಿನಗಳು ಕಳೆದ ಮೇಲೆ, ಅವರನ್ನು ಬಿಟ್ಟು ನಮ್ಮ ಪ್ರಯಾಣವನ್ನು ಮುಂದುವರಿಸಲು ಅನುವಾದೆವು. ಅವರಾದರೋ, ಮಡದಿ ಮಕ್ಕಳೊಡನೆ ಪಟ್ಟಣ ಬಿಟ್ಟು ಸಮುದ್ರತೀರದವರೆಗೂ ನಮ್ಮೊಡನೆ ಬಂದರು. ಅಲ್ಲಿ ನಾವೆಲ್ಲರೂ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆ ದಿನಗಳನ್ನು ಮುಗಿಸಿಕೊಂಡು ನಾವು ಹೊರಡುವಾಗ ಅವರೆಲ್ಲರೂ ತಮ್ಮ ಮಡದಿ ಮಕ್ಕಳು ಸಹಿತವಾಗಿ ಬಂದು ನಮ್ಮನ್ನು ಊರ ಹೊರಕ್ಕೆ ಬೀಳ್ಕೊಟ್ಟರು. ನಾವು ಸಮುದ್ರತೀರದಲ್ಲಿ ಮೊಣಕಾಲೂರಿಕೊಂಡು ಪ್ರಾರ್ಥನೆ ಮಾಡಿ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆ ದಿವಸಗಳನ್ನು ತೀರಿಸಿಕೊಂಡು ನಾವು ಹೊರಡುವಾಗ ಅವರೆಲ್ಲರೂ ಹೆಂಡರು ಮಕ್ಕಳು ಸಹಿತವಾಗಿ ಬಂದು ನಮ್ಮನ್ನು ಊರ ಹೊರಕ್ಕೆ ಸಾಗಕಳುಹಿಸಿದರು. ನಾವು ಸಮುದ್ರತೀರದಲ್ಲಿ ಮೊಣಕಾಲೂರಿಕೊಂಡು ಪ್ರಾರ್ಥನೆಮಾಡಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಆದರೆ ನಮ್ಮ ಸಂದರ್ಶನವು ಮುಗಿದ ಮೇಲೆ ನಾವು ಅಲ್ಲಿಂದ ಹೊರಟು ಪ್ರಯಾಣವನ್ನು ಮುಂದುವರಿಸಿದೆವು. ಯೇಸುವಿನ ಎಲ್ಲಾ ಶಿಷ್ಯರು, ಸ್ತ್ರೀಯರು ಮತ್ತು ಮಕ್ಕಳು ಸಹ ನಮ್ಮನ್ನು ಬೀಳ್ಕೊಡುವುದಕ್ಕಾಗಿ ನಮ್ಮೊಂದಿಗೆ ಪಟ್ಟಣದಿಂದ ಹೊರಗೆ ಬಂದರು. ನಾವೆಲ್ಲರೂ ಸಮುದ್ರ ತೀರದಲ್ಲಿ ಮೊಣಕಾಲೂರಿ ಪ್ರಾರ್ಥಿಸಿದೆವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಆದರೆ ನಮ್ಮ ಸಮಯ ಮುಗಿದಾಗ, ನಮ್ಮ ಪ್ರಯಾಣವನ್ನು ಮುಂದುವರಿಸಬೇಕೆಂದಿದ್ದೆವು. ಶಿಷ್ಯರೆಲ್ಲರೂ ಅವರ ಮಡದಿ ಮಕ್ಕಳೂ ಪಟ್ಟಣದ ಹೊರಗಿನವರೆಗೆ ನಮ್ಮೊಂದಿಗೆ ಬಂದರು. ಸಮುದ್ರ ತೀರದಲ್ಲಿ ನಾವು ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್5 ತಿ ದಿಸಾ ಕಳದ್ಲ್ಯಾ ಮಾನಾ ಅಮಿ ಜಾತಾನಾ ಥೈತ್ಲಿ ಲೊಕಾ ಸಗ್ಳ್ಯಿ ಅಪ್ಲ್ಯಾ ಬಾಯ್ಕೊ ಪೊರಾಕ್ನಿಬಿ ವಾಂಗ್ಡಾ ಘೆವ್ನ್ ಅಮ್ಕಾ ಪಾವ್ಸುಕ್ ಶಾರಾಚ್ಯಾ ಭಾಯ್ರ್ ಯೆಲ್ಯಾನಿ ಅನಿ ಅಮಿ ಸಮುಂದರಾಚ್ಯಾ ದಂಡೆಕ್ ಡೊಗ್ಲಾ ಘಾಲುನ್ ಮಾಗ್ನೆ ಕರುನ್. ಅಧ್ಯಾಯವನ್ನು ನೋಡಿ |