Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:4 - ಕನ್ನಡ ಸತ್ಯವೇದವು C.L. Bible (BSI)

4 ಅಲ್ಲಿಯ ಭಕ್ತಾದಿಗಳನ್ನು ಗುರುತುಹಚ್ಚಿ ಒಂದು ವಾರ ಅವರೊಂದಿಗೆ ಇದ್ದೆವು. ಇವರು ಪವಿತ್ರಾತ್ಮಪ್ರೇರಣೆಯಿಂದ ಜೆರುಸಲೇಮಿಗೆ ಹೋಗಬಾರದೆಂದು ಪೌಲನಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಏಳು ದಿನ ಉಳಿದುಕೊಂಡೆವು. ಅವರು ದೇವರಾತ್ಮನ ಪ್ರೇರಣೆಯಿಂದ ಪೌಲನಿಗೆ; ನೀನು ಯೆರೂಸಲೇಮಿಗೆ ಕಾಲಿಡಬೇಡವೆಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅಲ್ಲಿ ಶಿಷ್ಯರನ್ನು ಹುಡುಕಿ ಕಂಡು ಏಳು ದಿವಸ ನಿಂತೆವು. ಅವರು ಆತ್ಮನ ಪ್ರೇರಣೆಯಿಂದ ಪೌಲನಿಗೆ - ನೀನು ಯೆರೂಸಲೇವಿುಗೆ ಕಾಲಿಡಬೇಡವೆಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಅವರೊಂದಿಗೆ ಏಳು ದಿನ ಇದ್ದೆವು. ಪೌಲನು ಯೆರೂಸಲೇಮಿಗೆ ಹೋಗಬಾರದೆಂದು ಅವರು ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಅಮಿ ಥೈ ಉಲ್ಲಿ ಶಿಸಾಕ್ನಿ ಬಗುನ್, ತೆಂಚ್ಯಾ ವಾಂಗ್ಡಾ ಸಾತ್ ದಿಸಾ ಹೊತ್ತಾಂವ್, ಅನಿ ತೆಂಚ್ಯಾ ವಾಂಗ್ಡಾ ಪವಿತ್ರ್ ಆತ್ಮೊ ಹೊತ್ತೊ ಬಗಟ್ಲ್ಯಾವ್, ತೆನಿ ಪಾವ್ಲುಕ್ ತಿಯಾ ಜೆರುಜಲೆಮಾಕ್ ಜಾವ್ ನಕ್ಕೊ ಮನುನ್ ಹುಶ್ಯಾರ್ಕಿ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:4
11 ತಿಳಿವುಗಳ ಹೋಲಿಕೆ  

ಅಲ್ಲಿ ಕೆಲವು ಕ್ರೈಸ್ತಭಕ್ತಾದಿಗಳನ್ನು ಕಂಡೆವು. ತಮ್ಮೊಡನೆ ಒಂದು ವಾರ ತಂಗಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ತರುವಾಯ ನಾವು ರೋಮಿಗೆ ಬಂದೆವು.


ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು,


ಅವನನ್ನು ಅಲ್ಲಿ ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅವರಿಬ್ಬರೂ ಬಂದು ವರ್ಷವಿಡೀ ಧರ್ಮಸಭೆಯೊಂದಿಗೆ ಇದ್ದು ಬಹುಜನರಿಗೆ ಉಪದೇಶ ಮಾಡಿದರು. ಭಕ್ತಾದಿಗಳನ್ನು ಮೊದಲಬಾರಿಗೆ ‘ಕ್ರೈಸ್ತರು’ ಎಂದು ಕರೆದದ್ದು - ಅಂತಿಯೋಕ್ಯದಲ್ಲೇ.


“ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ.


ಪ್ರಭುವಿನ ದಿನದಂದು ನಾನು ದೇವರಾತ್ಮ ವಶನಾದೆ. ಆಗ ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತೂರಿಯ ನಾದದಂತಿತ್ತು.


ನಾನು ಸೆರೆಯಾಳಾಗಿದ್ದರೂ ನಾಚಿಕೆಪಡದೆ ತಾನು ರೋಮ್ ನಗರಕ್ಕೆ ಬಂದ ಕೂಡಲೇ ನನ್ನನ್ನು ಎಲ್ಲೆಡೆಗಳಲ್ಲೂ ಹುಡುಕಿ ಕಂಡುಹಿಡಿದನು.


ಅವನು ನನ್ನ ನಾಮದ ನಿಮಿತ್ತ ಎಷ್ಟು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುತ್ತೇನೆ,” ಎಂದರು.


ಸೆಜರೇಯ ಪಟ್ಟಣದಿಂದ ಕೆಲವು ಶಿಷ್ಯರು ನಮ್ಮೊಡನೆ ಬಂದರು. ನಾವು ತಂಗಲಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ಅವರು ನಮ್ಮನ್ನು ಕರೆದುಕೊಂಡು ಹೋದರು. ಈ ಮ್ನಾಸೋನನು ಆದಿಶಿಷ್ಯರಲ್ಲಿ ಒಬ್ಬನಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು