ಅಪೊಸ್ತಲರ ಕೃತ್ಯಗಳು 16:1 - ಕನ್ನಡ ಸತ್ಯವೇದವು C.L. Bible (BSI)1 ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಅನಂತರ ಅವನು ದೆರ್ಬೆಗೂ, ಲುಸ್ತ್ರಕ್ಕೂ ಬಂದನು. ಲುಸ್ತ್ರದಲ್ಲಿ ತಿಮೊಥೆಯನೆಂಬ ಒಬ್ಬ ಶಿಷ್ಯನಿದ್ದನು. ಅವನು ಕ್ರಿಸ್ತನನ್ನು ನಂಬಿದ್ದ ಒಬ್ಬ ಯೆಹೂದ್ಯ ಸ್ತ್ರೀಯ ಮಗನು. ಅವನ ತಂದೆ ಗ್ರೀಕನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಆಮೇಲೆ ಅವನು ದೆರ್ಬೆಗೂ ಲುಸ್ತ್ರಕ್ಕೂ ಬಂದನು. ಲುಸ್ತ್ರದಲ್ಲಿ ತಿಮೊಥೆಯನೆಂಬ ಒಬ್ಬ ಶಿಷ್ಯನಿದ್ದನು. ಅವನು ಕ್ರಿಸ್ತನನ್ನು ನಂಬಿದ್ದ ಒಬ್ಬ ಯೆಹೂದ್ಯ ಸ್ತ್ರೀಯ ಮಗನು. ಅವನ ತಂದೆ ಗ್ರೀಕನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಪೌಲನು ದರ್ಬೆ ಮತ್ತು ಲುಸ್ತ್ರ ಪಟ್ಟಣಗಳಿಗೆ ಹೋದನು. ತಿಮೊಥೆ ಎಂಬ ಕ್ರಿಸ್ತನ ಶಿಷ್ಯನೊಬ್ಬನು ಅಲ್ಲಿದ್ದನು. ತಿಮೊಥೆಯನ ತಾಯಿ ಯೆಹೂದ್ಯ ವಿಶ್ವಾಸಿಯಾಗಿದ್ದಳು. ಅವನ ತಂದೆಯು ಗ್ರೀಕನಾಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಪೌಲನು ದೆರ್ಬೆಗೂ ಲುಸ್ತ್ರಕ್ಕೂ ಬಂದನು. ಅಲ್ಲಿ, ತಿಮೊಥೆಯನೆಂಬ ಹೆಸರಿನ ಒಬ್ಬ ಶಿಷ್ಯನಿದ್ದನು. ಅವನ ತಾಯಿ ವಿಶ್ವಾಸಿಯಾಗಿದ್ದ ಯೆಹೂದ್ಯ ಸ್ತ್ರೀ. ಆದರೆ ಅವನ ತಂದೆ ಒಬ್ಬ ಗ್ರೀಕನಾಗಿದ್ದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್1 ಪಾವ್ಲು ದರ್ಬೆ ಅನಿ ಲಿಸ್ರ್ತಿ ಮನ್ತಲ್ಯಾ ಶಾರಾಕ್ನಿ ಗೆಲೊ ಥೈ ತಿಮೊಥಿ ಮನ್ತಲೊ ಎಕ್ ಕ್ರಿಸ್ತಾಂವ್ ಹೊತ್ತೊ, ತೆಚೊ ಬಾಬಾ ಗ್ರಿಕ್ ಭಾಶೆಚೊ ಮಾನುಸ್ ಹೊಲ್ಲೊ, ಅನಿ ಬಾಯ್ ಜುದೆವಾಂಚಿ ವಿಶ್ವಾಸಿ ಹೊಲ್ಲಿ. ಅಧ್ಯಾಯವನ್ನು ನೋಡಿ |
ನಮ್ಮ ಅತಿಪ್ರಿಯನೂ ಸಹೋದ್ಯೋಗಿಯೂ ಆದ ಫಿಲೆಮೋನನಿಗೂ ನಿನ್ನ ಮನೆಯಲ್ಲಿ ಸಭೆಸೇರುವ ಸಹೋದರರಿಗೂ ಹಾಗು ನಮ್ಮ ಸಹೋದರಿ ಅಪ್ಪಿಯ ಮತ್ತು ಸಹಸೈನಿಕ ಅರ್ಖಿಪ್ಪನಿಗೂ - ಕ್ರಿಸ್ತಯೇಸುವಿಗೋಸ್ಕರ ಸೆರೆಯಾಳಾಗಿರುವ ಪೌಲನೂ ಮತ್ತು ನಮ್ಮ ಸಹೋದರ ತಿಮೊಥೇಯನೂ ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಮತ್ತು ಒಡೆಯರಾದ ಯೇಸುಕ್ರಿಸ್ತರು ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ!