Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:7 - ಕನ್ನಡ ಸತ್ಯವೇದವು C.L. Bible (BSI)

7 ಕೂಡಲೇ ಕೊರ್ನೇಲಿಯನು ತನ್ನ ಇಬ್ಬರು ಪರಿಚಾರಕರನ್ನೂ ತನ್ನ ಪಹರೆಯವರಲ್ಲಿ ಧರ್ಮನಿಷ್ಠನಾಗಿದ್ದ ಒಬ್ಬ ಸೈನಿಕನನ್ನೂ ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕೊರ್ನೇಲ್ಯನು ತನ್ನ ಸಂಗಡ ಮಾತನಾಡಿದ ದೇವದೂತನು ಹೊರಟುಹೋದ ಮೇಲೆ, ತನ್ನ ಮನೆಯಲ್ಲಿದ್ದ ಸೇವಕರಲ್ಲಿ ಇಬ್ಬರನ್ನೂ ಮತ್ತು ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸಿಪಾಯಿಗಳಲ್ಲಿ ಒಬ್ಬ ದೈವಭಕ್ತನನ್ನೂ ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕೊರ್ನೇಲ್ಯನು ತನ್ನ ಸಂಗಡ ಮಾತಾಡಿದ ದೇವದೂತನು ಹೊರಟುಹೋದ ಮೇಲೆ ತನ್ನ ಪರಿಚಾರಕರಲ್ಲಿ ಇಬ್ಬರನ್ನೂ ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸಿಪಾಯಿಗಳಲ್ಲಿ ಒಬ್ಬ ದೇವಭಕ್ತನನ್ನೂ ಕರೆದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಕೊರ್ನೇಲಿಯನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದನು. ಬಳಿಕ ಕೊರ್ನೇಲಿಯನು ತನ್ನ ಸೇವಕರಲ್ಲಿ ಇಬ್ಬರನ್ನೂ ಒಬ್ಬ ಸೈನಿಕನನ್ನೂ ಕರೆದನು. ಈ ಸೈನಿಕನು ದೈವಭಕ್ತನಾಗಿದ್ದನು. ಕೊರ್ನೇಲಿಯನ ಆಪ್ತಸಹಾಯಕರಲ್ಲಿ ಇವನೂ ಒಬ್ಬನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ತನ್ನೊಂದಿಗೆ ಮಾತನಾಡಿದ ದೇವದೂತನು ಅದೃಶ್ಯವಾದ ಮೇಲೆ ಕೊರ್ನೇಲ್ಯನು ತನ್ನ ಇಬ್ಬರು ಸೇವಕರನ್ನು ಮತ್ತು ತನ್ನ ಪರಿಚಾರಕರಲ್ಲಿ ಭಕ್ತಿವಂತನಾದ ಒಬ್ಬ ಸಿಪಾಯಿಯನ್ನು ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ಕೊರ್ನೆಲಾಚ್ಯಾ, ವಾಂಗ್ಡಾ ಬೊಲಲೊ ದೆವಾಚೊ ದುತ್ ಗೆಲೊ, ಮಾನಾ ತೆನಿ ಅಪ್ಲ್ಯಾ ಸೆವಕಾಂತ್ಲ್ಯಾ ದೊಗಾಕ್ನಿ, ಅನಿ ಎಕ್ ಸೈನಿಕಾ ಬಲ್ವುಲ್ಯಾನ್, ಹ್ಯೊ ಸೈನಿಕ್ ದೆವಸ್ಪಾನಾಚೊ ಮಾನುಸ್ ಹೊಲ್ಲೊ. ಕೊರ್ನೆಲಾಚ್ಯಾ ಮನಾಕ್ ಜಗೊಳ್ಲ್ಯಾ ಮಜ್ಜತ್ ಕಾರಾತ್ನಿ ಹ್ಯೊಬಿ ಎಕ್ಲೊ ಹೊವ್ನ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:7
13 ತಿಳಿವುಗಳ ಹೋಲಿಕೆ  

ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ. ಅದಕ್ಕಿಂತಲೂ ಬಹಳ ಮೇಲಾದವನಂತೆ, ಕ್ರಿಸ್ತಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ?


“ನಾವು ಮಾಡಬೇಕಾದುದೇನು?” ಎಂದು ಸಿಪಾಯಿಗಳು ಮುಂದೆ ಬಂದು ಪ್ರಶ್ನಿಸಿದಾಗ, “ಬಲಾತ್ಕಾರದಿಂದಾಗಲಿ, ಸುಳ್ಳು ಬೆದರಿಕೆಯಿಂದಾಗಲಿ ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ,” ಎಂದು ಆತ ಉತ್ತರವಿತ್ತನು.


ಅವರ ಮೇಲೆ ಬೀಳುವುದಕ್ಕೆ ಹೆದರಿಕೆಯಾದರೆ ಮೊದಲು ನಿನ್ನ ಸೇವಕನಾದ ಪುರನ ಸಂಗಡ ಅಲ್ಲಿಗೆ ಹೋಗಿ ಅವರು ಮಾತಾಡಿಕೊಳ್ಳುವುದನ್ನು ಆಲಿಸು;


ಒಂದು ವೇಳೆ ಯಜಮಾನರು ಕ್ರೈಸ್ತವಿಶ್ವಾಸಿಗಳಾಗಿದ್ದರೆ ತಮ್ಮ ಯಜಮಾನರು ಸಹೋದರ ವರ್ಗದವರು ಎಂದು ಉದಾಸೀನ ಮಾಡಬಾರದು. ಬದಲಿಗೆ ಹೆಚ್ಚಿನ ಉತ್ಸಾಹದಿಂದ ಸೇವೆಸಲ್ಲಿಸಬೇಕು. ಏಕೆಂದರೆ, ಅವರ ಸೇವೆಯ ಪ್ರಯೋಜನವನ್ನು ಪಡೆಯುತ್ತಿರುವ ಯಜಮಾನರು, ಕ್ರೈಸ್ತವಿಶ್ವಾಸಿಗಳೂ ಪ್ರೀತಿಗೆ ಪಾತ್ರರಾದವರು. ಈ ವಿಷಯಗಳ ಬಗ್ಗೆ ಆಜ್ಞಾಪೂರ್ವಕವಾಗಿ ಬೋಧಿಸು.


ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿ ಸಾಷ್ಟಾಂಗವೆರಗಿ ಸರ್ವೇಶ್ವರ ಸ್ವಾಮಿಯನ್ನು ವಂದಿಸಿದನು.


ಜ್ಯೋತಿಷಿಗಳು ಹೊರಟುಹೋದ ಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವ ತನಕ ಅಲ್ಲೇ ಇರು,” ಎಂದನು.


ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು.


ಅವನು, ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದು ಹೇಳಿ ದೂತನು ಅದೃಶ್ಯನಾದನು.


ನಡೆದುದೆಲ್ಲವನ್ನೂ ತಿಳಿಸಿ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು