2 ಸಮುಯೇಲ 9:2 - ಕನ್ನಡ ಸತ್ಯವೇದವು C.L. Bible (BSI)2 ಸೌಲನ ಮನೆಯಲ್ಲಿ ಊಳಿಗನಾಗಿದ್ದ ಚೀಬ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬಂದರು. ಅರಸನು ಅವನನ್ನು, “ನೀನು ಚೀಬನೋ?’ ಎಂದು ಕೇಳಲು ಅವನು, “ನಿಮ್ಮ ಊಳಿಗನಾದ ನಾನು ಚೀಬನೇ,” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅದಕ್ಕೆ ಅವರು ಸೌಲನ ಮನೆಯಲ್ಲಿ ದಾಸನಾಗಿದ್ದ ಚೀಬನೆಂಬ ಒಬ್ಬ ಮನುಷ್ಯನನ್ನು ಕರೆದುಕೊಂಡು ಬಂದರು. ಅರಸನು ಅವನನ್ನು, “ನೀನು ಚೀಬನೋ?” ಎಂದು ಕೇಳಲು ಅವನು, “ನಿನ್ನ ಸೇವಕನಾದ ನಾನು ಚೀಬನೆ” ಎಂದು ಉತ್ತರ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಸೌಲನ ಮನೆಯಲ್ಲಿ ದಾಸನಾಗಿದ್ದ ಚೀಬನೆಂಬ ಒಬ್ಬ ಮನುಷ್ಯನನ್ನು ಕರಕೊಂಡುಬಂದರು. ಅರಸನು ಅವನನ್ನು - ನೀನು ಚೀಬನೋ ಎಂದು ಕೇಳಲು ಅವನು - ನಿನ್ನ ಸೇವಕನಾದ ನಾನು ಚೀಬನೇ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಸೌಲನ ಮನೆಯಲ್ಲಿ ಸೇವಕನಾಗಿದ್ದ ಚೀಬ ಎಂಬವನೊಬ್ಬನಿದ್ದನು. ದಾವೀದನ ಸೇವಕರು ಚೀಬನನ್ನು ದಾವೀದನ ಬಳಿಗೆ ಕರೆತಂದರು. ರಾಜನಾದ ದಾವೀದನು ಅವನಿಗೆ, “ನೀನು ಚೀಬನೇ?” ಎಂದು ಕೇಳಿದನು. ಚೀಬನು, “ಹೌದು, ನಿನ್ನ ಸೇವಕನಾದ ಚೀಬನು ನಾನೇ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ, “ನೀನು ಚೀಬನೋ?” ಎಂದನು. ಅದಕ್ಕವನು, “ನಿನ್ನ ದಾಸನು ನಾನೇ,” ಎಂದನು. ಅಧ್ಯಾಯವನ್ನು ನೋಡಿ |