Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 7:9 - ಕನ್ನಡ ಸತ್ಯವೇದವು C.L. Bible (BSI)

9 ನೀನು ಹೋದಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನೀನು ಹೋದಲ್ಲೆಲ್ಲಾ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾ ಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ಉನ್ನತಿಗೆ ತರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನೀನು ಹೋದಲ್ಲೆಲ್ಲಾ ನಿನ್ನ ಸಂಗಡ ಇದ್ದೆನು; ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ದೊಡ್ಡದುಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನೀನು ಹೋದ ಸ್ಥಳಗಳಲ್ಲೆಲ್ಲಾ ನಿನ್ನೊಂದಿಗಿದ್ದೆನು. ನಿನ್ನ ಶತ್ರುಗಳನ್ನು ಸೋಲಿಸಿದೆನು. ನಾನು ನಿನ್ನನ್ನು ಲೋಕದ ಇತರ ಮಹಾಪುರುಷರಂತೆಯೇ ಪ್ರಸಿದ್ಧಿಗೊಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನೀನು ಎಲ್ಲಿ ಹೋದರೂ, ಅಲ್ಲಿ ನಿನ್ನ ಸಂಗಡ ಇದ್ದು, ನಿನ್ನ ಶತ್ರುಗಳನ್ನೆಲ್ಲಾ ನಿನ್ನ ಮುಂದೆಯೇ ಸಂಹರಿಸಿದೆನು. ಭೂಮಿಯಲ್ಲಿರುವ ಮಹಾಪುರುಷರ ಹೆಸರಿನ ಹಾಗೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 7:9
23 ತಿಳಿವುಗಳ ಹೋಲಿಕೆ  

ಸೇನಾಧೀಶ್ವರ ಹಾಗು ಸರ್ವೇಶ್ವರರಾದ ದೇವರು ಅವನೊಂದಿಗೆ ಇದ್ದರು. ಆದ್ದರಿಂದ ಅವನು ಅಭಿವೃದ್ಧಿಹೊಂದುತ್ತಾ ಬಂದನು.


ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು.


ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಸಿರಿಯಾದವರು ಅವನಿಗೆ ಅಧೀನರಾಗಿ ಕಪ್ಪ ಕೊಡತೊಡಗಿದರು. ಸರ್ವೆಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯ ದೊರಕಿತು.


ಸರ್ವೇಶ್ವರ ಅವನೊಂದಿಗೆ ಇದ್ದುದರಿಂದ ಅವನು ಎಲ್ಲ ಕಾರ್ಯಗಳಲ್ಲಿ ವಿವೇಕದಿಂದ ವರ್ತಿಸಿ ಜಯಶಾಲಿಯಾಗುತ್ತಿದ್ದನು.


ಎದೋಮಿನಲ್ಲೆಲ್ಲಾ ಅವನು ಕಾವಲು ದಂಡುಗಳನ್ನಿರಿಸಿದನು. ಹೀಗೆ ಎದೋಮ್ಯರೆಲ್ಲರೂ ದಾವೀದನ ಅಡಿಯಾಳುಗಳಾದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿಹೋದರೂ ಜಯ ಉಂಟಾಯಿತು.


ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.


ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು I ಏರಿಸಿರುವನು ಉನ್ನತಿಗೆ ದೀನದಲಿತರನು II


ಅವನ ಶತ್ರುಗಳನು ಸದೆಬಡಿವೆನು ಅವನ ಮುಂದೆಯೆ I ಅವನ ವಿರೋಧಿಗಳನು ಹತಮಾಡುವೆನು ಅಲ್ಲಿಯೇ II


ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನ ಮೇಲೆ ಬೀಳಬಲ್ಲೆ ದೈವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ.


ಎತ್ತುವನಾತ ದೀನರನು ಧೂಳಿಂದ, ದರಿದ್ರರನು ತಿಪ್ಪೆಯಿಂದ. ಕುಳ್ಳರಿಸುವನವರನು ಅಧಿಪತಿಗಳ ಸಮೇತ ಅನುಗ್ರಹಿಸುವನು ಹಕ್ಕಾಗಿ ಆ ಮಹಿಮಾಸನ. ಕಾರಣ-ಭೂಮಿಯ ಆಧಾರಸ್ತಂಭಗಳು ಸರ್ವೇಶ್ವರನವೇ ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ.


ಸರ್ವೇಶ್ವರಸ್ವಾಮಿ ದಾವೀದನನ್ನು ಸೌಲನ ಕೈಗೂ ಇತರ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿದರು. ಈ ಕಾರಣ ಅವನು ಸರ್ವೇಶ್ವರಸ್ವಾಮಿಯನ್ನು ಕೀರ್ತಿಸುತ್ತಾ ಈ ಜಯಗೀತೆಯನ್ನು ಹಾಡಿದನು:


ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಅವನ ಆಯುಧವಾಹಕನೂ ಎಲ್ಲ ಆಳುಗಳೂ ಅದೇ ದಿವಸ ಸತ್ತರು.


ಆದುದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, “ನೋಡಿ, ನಮ್ಮನ್ನೂ ನಮಗೆ ಸೇರಿದವರನ್ನೂ ಕೊಲ್ಲುವುದಕ್ಕಾಗಿಯೇ ಇಸ್ರಯೇಲ್ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ,” ಎಂದು ಕೂಗಾಡಿದರು.


ಇದಲ್ಲದೆ ದಾವೀದನು ಹೋಗಿ ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರಮಂದಿ ಸೈನಿಕರನ್ನು ಸೋಲಿಸಿಬಂದು ಅಂದಿನಿಂದ ಬಹಳ ಪ್ರಖ್ಯಾತಿ ಹೊಂದಿದನು.


ದಾವೀದನ ಕಡೇ ಮಾತುಗಳಿವು: ಜೆಸ್ಸೆಯನ ಮಗ ದಾವೀದನ ನುಡಿಗಳಿವು: ಉನ್ನತಸ್ಥಾನವನ್ನು ಅಲಂಕರಿಸಿದವನು, ಯಕೋಬ ದೇವರಿಂದ ಅಭಿಷಿಕ್ತನಾದವನು, ಇಸ್ರಯೇಲರ ವರಕವಿ ಆಡಿದ ವಚನಗಳಿವು:


ಸರ್ವೇಶ್ವರಸ್ವಾಮಿ ಯೆಹೋಶುವನ ಸಂಗಡ ಇದ್ದುದರಿಂದ ಅವನ ಕೀರ್ತಿ ನಾಡಿನಲ್ಲೆಲ್ಲಾ ಹರಡಿತು.


ಫಿಲಿಷ್ಟಿಯ ರಾಜರು ಯುದ್ಧಕ್ಕೆ ಬಂದಾಗಲೆಲ್ಲ ಸೌಲನ ಸೇನಾಪತಿಗಳಲ್ಲಿ ದಾವೀದನೇ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಈ ಕಾರಣ ಅವನ ಹೆಸರು ಸುಪ್ರಸಿದ್ಧವಾಯಿತು.


ಪುಡಿಪುಡಿ ಮಾಡಿದೆ ನಾನವರನು ಮಣ್ಣಿನ ಹೆಂಟೆಯಂತೆ ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ.


ಅಮರ ಭಾಗ್ಯಗಳನು ನೀನನುಗ್ರಹಿಸಿದೆ I ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು