Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 5:8 - ಕನ್ನಡ ಸತ್ಯವೇದವು C.L. Bible (BSI)

8 ಆ ದಿವಸ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು ಜಲದ್ವಾರದಲ್ಲೆ ಹತ್ತಿ ಹೋಗಿ ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ಕಂದಕದಲ್ಲಿ ನಾಶಮಾಡಿಬಿಡಲಿ,” ಎಂದು ಹೇಳಿದನು. ಆದುದರಿಂದಲೇ “ಕುರುಡರೂ ಕುಂಟರೂ ದೇವಾಲಯದೊಳಗೆ ಹೋಗಲಾಗದು,” ಎಂಬ ಹೇಳಿಕೆಯುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆ ದಿವಸ ದಾವೀದನು - ಯೆಬೂಸಿಯರನ್ನು ಜಯಿಸಬೇಕೆಂದಿರುವವನು ಜಲದ್ವಾರದಲ್ಲಿ ಹತ್ತಿಹೋಗಿ ದಾವೀದನಿಗೆ ಅಸಹ್ಯರಾಗಿರುವ ಕುರುಡರನ್ನೂ ಕುಂಟರನ್ನೂ ಕಂದಕದಲ್ಲಿ ನಾಶಮಾಡಿಬಿಡಲಿ ಎಂದು ಹೇಳಿದನು. ಆದದರಿಂದ ಕುರುಡರೂ ಕುಂಟರೂ ಇದ್ದಾರೆ, ಒಳಗೆ ಹೋಗಲಾಗದು ಎಂದು ಗಾದೆಯುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ ಹೋಗಿ ಶತ್ರುಗಳಾದ ಕುಂಟರು ಮತ್ತು ಕುರುಡರನ್ನು ಎದುರಿಸಿ” ಎಂದು ಹೇಳಿದನು. ಆದ್ದರಿಂದಲೇ “ಕುರುಡರು ಮತ್ತು ಕುಂಟರು ಮನೆಯೊಳಕ್ಕೆ ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆ ದಿವಸದಲ್ಲಿ ದಾವೀದನು, “ಜಲದ್ವಾರವನ್ನು ದಾಟಿ, ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ನಾಶಮಾಡಲಿ,” ಎಂದು ಹೇಳಿದ್ದನು. ಆದುದರಿಂದಲೇ, “ಕುರುಡರೂ ಕುಂಟರೂ ಅರಮನೆಯೊಳಗೆ ಪ್ರವೇಶಿಸಲಾರರು,” ಎಂಬ ಗಾದೆಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 5:8
5 ತಿಳಿವುಗಳ ಹೋಲಿಕೆ  

“ನೋಡಿದಿರೋ, ಇಸ್ರಯೇಲರಾದ ನಮ್ಮನ್ನು ತೃಣೀಕರಿಸಲು ಬಂದಿರುವ ಈ ವ್ಯಕ್ತಿಯನ್ನು? ಇವನನ್ನು ಕೊಲ್ಲುವವನಿಗೆ ಅರಸ ಅಪಾರ ದ್ರವ್ಯಕೊಡುವರು; ತಮ್ಮ ಮಗಳನ್ನೇ ಕೊಟ್ಟು ಮದುವೆಮಾಡುವರು; ಅಲ್ಲದೆ ಅಂಥವನ ಕುಟುಂಬಕ್ಕೆ ಎಲ್ಲಾ ತೆರಿಗೆ ಕಂದಾಯದಿಂದ ವಿನಾಯಿತಿ ದೊರಕುವುದು,” ಎಂದು ಮಾತಾಡಿಕೊಳ್ಳುತ್ತಿದ್ದರು.


ಆದರೂ ಅವನು, ಈಗ ‘ದಾವೀದನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.


ದಾವೀದನು ಆ ಕೋಟೆಗೆ ‘ದಾವೀದನಗರ’ ಎಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಿದ್ದನು. ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ ಒಳಗಿನ ಪೌಳಿಗೋಡೆಯನ್ನು ಕಟ್ಟಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು