Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 23:5 - ಕನ್ನಡ ಸತ್ಯವೇದವು C.L. Bible (BSI)

5 ಹೌದು, ಸರ್ವೇಶ್ವರನ ಸನ್ನಿಧಿಯಲಿ ನನ್ನ ಮನೆತನ ಸುಸ್ಥಿರ ಆತನೊಂದಿಗೆ ನಾ ಮಾಡಿಲ್ಲವೆ ಚಿರವಾದ ಒಪ್ಪಂದ? ಅದೆಲ್ಲದರಲು ಸುವ್ಯವಸ್ಥಿತ, ಅದೆಂದಿಗೂ ನಿರ್ಭೀತ. ಆತನೇ ನನ್ನುದ್ಧಾರಕ್ಕೆ ಮೂಲಾಧಾರ ನನ್ನ ಆಶೆ ಆಕಾಂಕ್ಷೆಗಳ ಪೂರೈಸುವಾತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನನ್ನ ಮನೆಯು ಯೆಹೋವನ ಸನ್ನಿಧಿಯಲ್ಲಿ ಹೀಗೆಯೇ ಸ್ಥಿರವಾಗಿರುತ್ತದಲ್ಲವೇ? ಆತನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿದ್ದಾನಲ್ಲವೋ? ಅದು ಎಂದಿಗೂ ಬಿದ್ದುಹೋಗದೆ ಎಲ್ಲಾ ವಿಷಯಗಳಲ್ಲಿಯೂ ಖಚಿತವಾಗಿರುತ್ತದೆ. ನನ್ನ ರಕ್ಷಣೆಯ ಮೂಲವೂ, ನನ್ನ ಅಭಿಲಾಷೆಯನ್ನು ಪೂರ್ತಿಗೊಳಿಸುವವನೂ ಆತನೇ ಅಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನನ್ನ ಮನೆಯು ಯೆಹೋವನ ಸನ್ನಿಧಿಯಲ್ಲಿ ಸ್ಥಿರವಾಗಿರುತ್ತದಲ್ಲವೋ? ಆತನು ನನ್ನೊಡನೆ ಒಡಂಬಡಿಕೆಮಾಡಿಕೊಂಡಿದ್ದಾನೆ; ಅದು ಎಂದಿಗೂ ಬಿದ್ದು ಹೋಗುವದಿಲ್ಲ, ಎಲ್ಲಾ ವಿಷಯಗಳಲ್ಲಿ ಖಂಡಿತವಾಗಿದೆ. ನನ್ನ ರಕ್ಷಣೆಯ ಮೂಲವೂ ನನ್ನ ಅಭಿಲಾಷೆಯನ್ನು ಪೂರ್ತಿಗೊಳಿಸುವವನೂ ಆತನೇ ಅಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ಯೆಹೋವನು ನನ್ನ ಕುಟುಂಬವನ್ನು ಸ್ಥಿರಗೊಳಿಸಿದನು. ಆತನು ನನ್ನೊಡನೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು. ಆತನು ಈ ಒಡಂಬಡಿಕೆಯನ್ನು ಸಂಪೂರ್ಣವಾಗಿ ಸುಭದ್ರಗೊಳಿಸಿದನು. ಆತನು ನನಗೆ ಎಲ್ಲೆಲ್ಲಿಯೂ ಜಯ ಕೊಡುವನು. ಆತನು ನನಗೆ ಬೇಕಾದದ್ದನ್ನೆಲ್ಲಾ ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ನನ್ನ ಮನೆ ದೇವರೊಂದಿಗೆ ಸರಿಯಾಗಿರದಿದ್ದರೆ, ನಿಶ್ಚಯವಾಗಿಯೂ ಅವರು ನನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಿರಲಿಲ್ಲ, ಪ್ರತಿಯೊಂದು ವಿಭಾಗದಲ್ಲಿಯೂ ವ್ಯವಸ್ಥೆಗೊಳಿಸಲಾಗಿದೆ ಮತ್ತು ಭದ್ರಪಡಿಸಲಾಗಿದೆ. ದೇವರು ನಿಶ್ಚಯವಾಗಿಯೂ ನನ್ನ ರಕ್ಷಣೆಯನ್ನು ಪೂರ್ತಿಗೊಳಿಸುವುದಿಲ್ಲ. ದೇವರು ನನ್ನ ಎಲ್ಲಾ ಅಪೇಕ್ಷೆಗಳನ್ನು ಪೂರೈಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 23:5
41 ತಿಳಿವುಗಳ ಹೋಲಿಕೆ  

ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ.


ನಾನು ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡುವೆನು. ಹೀಗೆ ನಾನು ಅವರಿಗೆ ಒಳಿತನ್ನು ಮಾಡುವುದನ್ನು ಬಿಡೆನು. ನನ್ನ ಬಗ್ಗೆ ಅವರ ಹೃದಯದಲ್ಲಿ ಭಯಭಕ್ತಿ ನೆಲಸುವಂತೆ ಮಾಡುವೆನು. ಆಗ ಅವರು ನನ್ನನ್ನು ಬಿಟ್ಟು ಅಗಲಿಹೋಗರು.


ಸಭೆಯೆಂಬ ಕುರಿಮಂದೆಗೆ ಮಹಾಪಾಲಕರಾದ ಯೇಸುಸ್ವಾಮಿ ಶಾಶ್ವತ ಒಡಂಬಡಿಕೆಯನ್ನು ನಿಶ್ಚಯಪಡಿಸುವುದಕ್ಕಾಗಿ ತಮ್ಮ ರಕ್ತವನ್ನು ಸುರಿಸಿದರು. ಶಾಂತಿದಾತರಾದ ದೇವರು ನಮ್ಮ ಪ್ರಭುವನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದರು.


ಈ ನಂಬಿಕೆ, ನಿರೀಕ್ಷೆ, ನಮ್ಮ ಬಾಳನೌಕೆಯ ಸ್ಥಿರವಾದ ಹಾಗೂ ಸುರಕ್ಷಿತವಾದ ಲಂಗರಿನಂತಿದೆ. ಇದು ತೆರೆಯ ಹಿಂದಿರುವ ಸ್ವರ್ಗೀಯ ಗರ್ಭಗುಡಿಯನ್ನು ಪ್ರವೇಶಿಸುವಂಥದ್ದು.


“ಯೇಸುವನ್ನು ಸಮಾಧಿಯಲ್ಲೇ ಕೊಳೆತುಹೋಗಲು ಬಿಡದೆ ಮರಣದಿಂದ ಪುನರುತ್ಥಾನಗೊಳಿಸಿದ ದೇವರು ಹೀಗೆಂದಿದ್ದಾರೆ: ‘ನಾನು ದಾವೀದನಿಗೆ ವಾಗ್ದಾನಮಾಡಿದ ಪವಿತ್ರ ಹಾಗೂ ನಿಶ್ಚಿತ ವರಗಳನ್ನು ನಿಮಗೆ ಕೊಡುತ್ತೇನೆ.’


ಸರ್ವೇಶ್ವರ ಇಂತೆನ್ನುತ್ತಾರೆ: “ದಿನ ಬರಲಿದೆ. ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು.


ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು.


“ಸರ್ವೇಶ್ವರ ಆದ ನಾನು ನ್ಯಾಯಪ್ರಿಯ. ಸುಲಿಗೆ ಅನ್ಯಾಯ, ನನಗೆ ಅಸಹ್ಯ. ಪ್ರಾಮಾಣಿಕವಾಗಿ ನೀಡುವೆನು ಇವರಿಗೆ ಪ್ರತಿಫಲ ಮಾಡಿಕೊಳ್ಳುವೆನು ಇವರೊಡನೆ ಅಳಿಯದ ಒಪ್ಪಂದ.


ಮುಂಬರುವ ಕಾಲದಲಿ ಬೇರೂರುವುದು ಯಕೋಬ ಸಂತಾನ. ಚಿಗುರಿ ಹೂ ಬಿಡುವುದು ಇಸ್ರಯೇಲ್ ಮನೆತನ, ಆ ವೃಕ್ಷಫಲದಿಂದ ತುಂಬಿರುವುದು ಜಗದೆಲ್ಲ ಜನ.


ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.


ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು.


ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆದಿರುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು.


ಮನಗುಂದಿರುವೆ ನಾ ಮುಕ್ತಿಯ ಬಯಕೆಯಲೆ I ನಂಬಿಕೆಯನು ಇಟ್ಟಿರುವೆ ನಿನ್ನ ವಾಕ್ಯದಲೆ II


ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ I ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ : II


ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II


ನಾನೊಂದನು ಕೋರಿದೆ ಪ್ರಭುವಿನಿಂದ I ನಾನದನ್ನೇ ನಿರೀಕ್ಷಿಸಿದೆ ಆತನಿಂದ : I ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II


“ನನ್ನ ತಂದೆ ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು; ಅವರು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ಮುಳ್ಳುಕೊರಡೆಗಳಿಂದ ದಂಡಿಸುವೆನು,” ಎಂದು ನುಡಿದನು.


ನನ್ನ ದಾಸ ದಾವೀದನು ನನ್ನ ಆಜ್ಞಾವಿಧಿಗಳನ್ನು ಕೈಕೊಂಡಂತೆ, ನೀನೂ ನನ್ನ ಆಜ್ಞೆಗಳನ್ನು ಕೈಗೊಂಡು, ನನ್ನ ಮಾರ್ಗದಲ್ಲಿ ನಡೆದು ನನ್ನನ್ನು ಮೆಚ್ಚಿಸಿದರೆ, ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸುವೆನು; ಇಸ್ರಯೇಲ್ ರಾಜ್ಯ ನಿನ್ನ ಪಾಲಾಗುವುದು.


ಈಗಾಗಲೇ ಅಬ್ಷಾಲೋಮನು ಸತ್ತುಹೋಗಿದ್ದನು. ದಾವೀದನಿಗೆ ಹಗ್ಗೀತಳಲ್ಲಿ ಹುಟ್ಟಿದ ಅದೋನಿಯನೇ ಜೀವದಿಂದ ಉಳಿದವರಲ್ಲಿ ಹಿರಿಯ ಮಗ. ಅವನು ಬಹಳ ಸುಂದರನು. ದಾವೀದನು ಯಾವುದೇ ವಿಷಯದಲ್ಲಿ ಅವನನ್ನು ಎಂದೂ ಗದರಿಸಿರಲಿಲ್ಲ. ತಾನೇ ರಾಜನಾಗಬೇಕೆಂಬ ಆಕಾಂಕ್ಷೆ ಅವನದು. ಎಂದೇ ತನಗೋಸ್ಕರ ರಥ, ರಥಾಶ್ವಗಳನ್ನು ಹಾಗು ಐವತ್ತು ಮಂದಿ ಬೆಂಗಾವಲಿಗರನ್ನು ನೇಮಿಸಿಕೊಂಡಿದ್ದನು.


ಆಗ ಯೋವಾಬನು, “ಇಲ್ಲಿ ನಿಂತು ನಿನ್ನೊಡನೆ ಸಮಯ ಕಳೆಯಲಾರೆ,” ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು.


ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದಕೂಡಲೆ ಅವನನ್ನು ಹೊಡೆದು ಕೊಂದುಹಾಕಿ; ಹೆದರಬೇಡಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೆ? ಧೈರ್ಯದಿಂದಿರಿ, ಶೂರರಾಗಿರಿ,” ಎಂದು ಹೇಳಿದ್ದನು.


ಆದರೆ ಅವನು ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.


ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದೆ; ಹಾಗು ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡೆ. ಆದ್ದರಿಂದ ಕತ್ತಿ ನಿನ್ನ ಮನೆಯನ್ನು ಬಿಟ್ಟು ತೊಲಗುವುದಿಲ್ಲ.


ಬಳಿಕ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ಹೇ ಸರ್ವೇಶ್ವರಾ, ಸರ್ವೇಶ್ವರಾ, ತಾವು ನನ್ನನ್ನು ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು! ನನ್ನ ಕುಟುಂಬ ಎಷ್ಟರದು!


ನಿಮ್ಮ ದಾಸಿಯ ಅಪರಾಧಕ್ಕೆ ಕ್ಷಮಾಪಣೆಯಾಗಲಿ; ಒಡೆಯಾ, ತಾವು ಸರ್ವೇಶ್ವರನ ಶತ್ರುಗಳೊಡನೆ ಯುದ್ಧಮಾಡುವುದರಿಂದ ಅವರು ನಿಮ್ಮ ಮನೆಯನ್ನು ಶಾಶ್ವತವಾಗಿ ಸ್ಥಿರಪಡಿಸುವರು. ಆದುದರಿಂದ ನಿಮ್ಮ ಜೀವಮಾನದಲ್ಲೆಲ್ಲಾ ನಮ್ಮಲ್ಲಿ ಕೆಟ್ಟತನ ಕಾಣದಿರಲಿ;


ನನ್ನ ಹೃನ್ಮನಗಳಿಗೆ ಸರಿಯಾದುದನ್ನೇ ಮಾಡುವ ಒಬ್ಬ ಶ್ರದ್ಧೆಯುಳ್ಳ ಯಾಜಕನನ್ನು ಎಬ್ಬಿಸುವೆನು. ಅವನು ನನ್ನ ಅಭಿಷಿಕ್ತನ ಬಳಿಯಲ್ಲಿ ಸದಾಕಾಲ ಸೇವೆಮಾಡುವನು.


ಆ ಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲ ಜೀವಜಂತುಗಳಿಗೂ ಆದ ಶಾಶ್ವತ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುತ್ತೇನೆ,”


ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.


ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.”


ಆಗುವುದಾದರೆ ಮಾತ್ರ ನನ್ನ ದಾಸ ದಾವೀದನೊಂದಿಗೂ ನನ್ನ ಪರಿಚಾರಕರಾದ ಲೇವಿಕುಲದ ಯಾಜಕರೊಂದಿಗೂ ನಾನು ಮಾಡಿದ ಒಡಂಬಡಿಕೆ ನಿಂತುಹೋಗುವುದು ಮತ್ತು ದಾವೀದನ ಸಿಂಹಾಸನವನ್ನು ಏರಿ ಆಳತಕ್ಕ ಅವನ ಸಂತಾನದವನು ಒಬ್ಬನೂ ಇಲ್ಲವಾಗುವನು.


ವಿಮೋಚನೆಯನಿತ್ತಿಹನು ಪ್ರಭು ತನ್ನ ಪ್ರಜೆಗೆ I ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ I ಪರಿಶುದ್ಧ, ಪರಮಪೂಜ್ಯ ಆತನ ನಾಮಾಂಕೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು