Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 23:4 - ಕನ್ನಡ ಸತ್ಯವೇದವು C.L. Bible (BSI)

4 ದೇವರಲ್ಲಿ ಭಯಭಕ್ತಿಯುಳ್ಳ ರಾಜನು ನೀತಿಯಿಂದ ಪ್ರಜೆಗಳನಾಳುವಾತನು ಉದಯಕಾಲದ ಸೂರ್ಯನಿಗೆ ಸಮಾನನು ಏರುವನಾತ ಮೇಘರಹಿತ ಪ್ರಾತಃಕಾಲದೊಳು ತೇಜೋಮಯನಾಗಿ ಮೊಳೆಯಿಸುವನು ಪಚ್ಚೆಪಸಿರನು ಮಳೆ ತೋಯ್ದ ನೆಲದೊಳು ಹುಲುಸಾಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ, ಮೋಡಗಳನ್ನು ಚದುರಿಸಿಬಿಟ್ಟು, ಮಳೆಬಿದ್ದ ಭೂಮಿಯಿಂದ ಹುಲ್ಲನ್ನು ಮೊಳೆಯಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ ಮೋಡಗಳನ್ನು ಚದರಿಸಿಬಿಟ್ಟು ಮಳೆಬಿದ್ದ ಭೂವಿುಯಿಂದ ಹುಲ್ಲನ್ನು ಮೊಳಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಹೊತ್ತಾರೆಯ ಬೆಳಕಿನ ಕಿರಣಗಳಂತೆಯೂ ಮೋಡಗಳೇ ಇಲ್ಲದ ಮುಂಜಾನೆಯಂತೆಯೂ ಮಳೆ ಬಿದ್ದನಂತರ ಬರುವ ಸೂರ್ಯನ ಬೆಳಕಿನಂತೆಯೂ ಗರಿಕೆಯನ್ನು ನೆಲದಿಂದ ಮೂಡಿಸುವ ಮಳೆಯಂತೆಯೂ ಇದ್ದಾನೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಮೋಡವಿಲ್ಲದ ಮುಂಜಾನೆ ಸೂರ್ಯೋದಯದ ಸಮಯದಲ್ಲಿಯ ಉದಯದ ಬೆಳಕಿನಂತಿರುವನು. ಭೂಮಿಯಿಂದ ಹುಲ್ಲು ಮೊಳೆಯಿಸುವ ಮಳೆಯ ನಂತರದ ಪ್ರಕಾಶದಂತಿರುವನು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 23:4
17 ತಿಳಿವುಗಳ ಹೋಲಿಕೆ  

ಸರ್ವೇಶ್ವರನ ಶತ್ರುಗಳೆಲ್ಲರು ನಾಶವಾಗಲಿ ಇವರಂತೆ ಆತನ ಭಕ್ತರು ಬೆಳಗಲಿ ಉದಯಕಾಲದ ಸೂರ್ಯನಂತೆ! ನಾಡಿನಲಿ ನಾಲ್ವತ್ತು ವರ್ಷಕಾಲ ಶಾಂತಿ ನೆಲಸಿತ್ತು!


ಹುಲ್ಲುಕೊಯ್ದ ಹೊಲದ ಮೇಲೆ ಸುರಿವ ವೃಷ್ಟಿಯಂತೆ I ಬರಲಿ ಆತ ಒಣನೆಲವ ತೋಯ್ವ ಹದಮಳೆಯಂತೆ II


ಖಂಡತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯದಂಡನೆ ಮಿಂಚಿನಂತೆ ಹೊರಡುವುದು.


ರವಿಯಂತಿರುವುದು ಎನ್ನ ಮುಂದೆ ಅವನ ಗಾದಿ I ಚಿರ ಶಾಶ್ವತವಾಗಿರುವುದು ಅವನ ಸಂತತಿ II


ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿನೀಡಿದನು.


“ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ ಸೂರ್ಯನು ಉದಯಿಸಿ, ಸುಕ್ಷೇಮವನ್ನೀಯುವ ಕಿರಣಗಳನ್ನು ಬೀರುವನು. ಕೊಟ್ಟಿಗೆಯಿಂದ ಹೊರಬಂದ ಕರುಗಳಂತೆ ನೀವು ಕುಣಿದು ಕುಪ್ಪಳಿಸುವಿರಿ.


ಸರ್ವೇಶ್ವರಸ್ವಾಮಿಯ ಕೃಪೆಯಿಂದ ಇಬ್ಬನಿಯೂ ತುಂತುರುಮಳೆಯೂ ಮಾನವನ ನೆರವನ್ನು ನಿರೀಕ್ಷಿಸದೆ, ಹುಲ್ಲನ್ನು ಸಮೃದ್ಧಿಗೊಳಿಸುತ್ತವೆ. ಅಂತೆಯೇ ಯಕೋಬನ ಅಳಿದುಳಿದ ವಂಶದವರು ಹಲವಾರು ಜನಾಂಗಗಳ ಮಧ್ಯೆ ನೆಲಸಿ, ಅವರ ಅಭ್ಯುದಯಕ್ಕೆ ಕಾರಣರಾಗುವರು.


ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು.


ರಾಷ್ಟ್ರಗಳು ಬರುವುವು ನಿನ್ನ ಬೆಳಕಿಗೆ ಅರಸರು ನಿನ್ನ ಉದಯದ ಶೋಭೆಗೆ.


ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು.


ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆದಿರುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು.


ಸಜ್ಜನರ ಮಾರ್ಗ ಪ್ರಾತಃಕಾಲದ ಬೆಳಕಿನಂತೆ; ಅದರ ಬೆಳಕು ಹೆಚ್ಚುತ್ತಿರುತ್ತದೆ ಬಟ್ಟ ಹಗಲವರೆಗೆ.


ಸೇನೆಯನು ನೀ ಅಣಿಗೊಳಿಸುವ ದಿನದೊಳು I ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು I ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು I ಉದಯಕಾಲದಿಬ್ಬನಿಯಂತೆ ಇಳಿದು ಬರುವರು II


ನನ್ನ ಉಪದೇಶ ಹಸಿಹುಲ್ಲಿನ ಮೇಲೆ ಮೆಲ್ಲನೆ ಸುರಿವ ತುಂತುರುಗಳಂತೆ ನನ್ನ ಬೋಧೆ ಕಾಯಿಪಲ್ಯಗಳ ಮೇಲೆ ಮಂಜಿನಂತೆ ಬೀಳುವ ಹದಮಳೆಯಂತೆ.


ಸರ್ವೇಶ್ವರ ನನಗೆ ಹೀಗೆಂದು ಹೇಳಿದ್ದಾರೆ : “ಬಿಸಿಹಗಲಿನ ಸೂರ್ಯನಂತೆ, ಕೊಯಿಲುಗಾಲದಲ್ಲಿರುವ ಮಂಜಿನಂತೆ, ನಾನು ನನ್ನ ನಿವಾಸಸ್ಥಾನದಿಂದ ಸುಮ್ಮನೆ ನೋಡುತ್ತಿರುವೆನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು