Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 23:1 - ಕನ್ನಡ ಸತ್ಯವೇದವು C.L. Bible (BSI)

1 ದಾವೀದನ ಕಡೇ ಮಾತುಗಳಿವು: ಜೆಸ್ಸೆಯನ ಮಗ ದಾವೀದನ ನುಡಿಗಳಿವು: ಉನ್ನತಸ್ಥಾನವನ್ನು ಅಲಂಕರಿಸಿದವನು, ಯಕೋಬ ದೇವರಿಂದ ಅಭಿಷಿಕ್ತನಾದವನು, ಇಸ್ರಯೇಲರ ವರಕವಿ ಆಡಿದ ವಚನಗಳಿವು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ದಾವೀದನ ಕೊನೆಯ ಮಾತುಗಳು - ಇಷಯನ ಮಗನಾದ ದಾವೀದನು, ಉನ್ನತ ಸ್ಥಾನದಲ್ಲಿ ಸ್ಥಾಪಿಸಲ್ಪಟ್ಟವನು, ಯಾಕೋಬನ ದೇವರಿಂದ ಅಭಿಷೇಕಿಸಲ್ಪಟ್ಟವನೂ, ಇಸ್ರಾಯೇಲ್ಯರ ವರಕವಿಯೂ ಆಗಿರುವವನ ನುಡಿಗಳು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ದಾವೀದನ ಕಡೇ ಮಾತುಗಳು. ಇಷಯನ ಮಗನಾದ ದಾವೀದನ ನುಡಿಗಳು - ಉನ್ನತಸ್ಥಾನಕ್ಕೆ ಏರಿಸಲ್ಪಟ್ಟವನೂ ಯಾಕೋಬನ ದೇವರಿಂದ ಅಭೀಷೇಕಿಸಲ್ಪಟ್ಟವನೂ ಇಸ್ರಾಯೇಲ್ಯರ ವರಕವಿಯೂ ಆಗಿರುವವನು ಹೇಳಿದ್ದು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇವು ಇಷಯನ ಮಗನಾದ ದಾವೀದನ ಕೊನೆಯ ಮಾತುಗಳು: “ದಾವೀದನು ಈ ಹಾಡನ್ನು ಹಾಡಿದನು. ದೇವರಿಂದ ಉನ್ನತಿಗೇರಿಸಲ್ಪಟ್ಟವನ ಸಂದೇಶವಿದು. ಯಾಕೋಬನ ದೇವರಿಂದ ಆರಿಸಲ್ಪಟ್ಟ ರಾಜನೇ ಅವನು. ಅವನು ಇಸ್ರೇಲಿನ ಒಳ್ಳೆಯ ಹಾಡುಗಾರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ದಾವೀದನ ಕಡೆಯ ಮಾತುಗಳು: “ಇಷಯನ ಮಗ ದಾವೀದನ ನುಡಿಗಳಿವು: ಉನ್ನತವಾಗಿ ಸಾಗಿದ ಪುರುಷನು ಯಾಕೋಬನ ದೇವರಿಂದ ಅಭಿಷಿಕ್ತನಾದವನು, ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನು ನುಡಿದದ್ದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 23:1
25 ತಿಳಿವುಗಳ ಹೋಲಿಕೆ  

“ನನ್ನ ದಾಸ ದಾವೀದನನು ಗುರುತಿಸಿರುವೆ I ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ II


ಕ್ರಿಸ್ತಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿ ಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ.


ತರುವಾಯ ಯೇಸುಸ್ವಾಮಿ, “ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರಂಥಗಳಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲಾ ನೆರವೇರಲೇಬೇಕಾಗಿತ್ತು,” ಎಂದರು.


ವೀಣೆಯನ್ನು ನುಡಿಸುತ್ತಾ ಮನಸ್ಸು ಬಂದಂತೆ ಹಾಡುವವರೇ, ದಾವೀದನಂತೆ ಹೊಸ ವಾದ್ಯಸಂಗೀತಗಳನ್ನು ರಚಿಸುವವರೇ, ನಿಮಗೆ ಧಿಕ್ಕಾರ!


ಹಾಡಿ ಪಾಡಿ ಹೊಗಳಿರಿ ಆತನನು I ಧ್ಯಾನಿಸಿ ಆತನ ಪವಾಡಗಳನು II


ಆಸಾಫನಿಗೂ ಅವನ ಜೊತೆ ಲೇವಿಯರಿಗೂ ಸರ್ವೇಶ್ವರನ ಸ್ತೋತ್ರ ಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:


ಚದರಿಹೋಗುವರು ಸರ್ವೇಶ್ವರನ ವಿರೋಧಿಗಳು ಆಗಸದಿಂದಾತ ಅವರ ವಿರುದ್ಧ ಗರ್ಜಿಸಲು! ನ್ಯಾಯ ತೀರಿಸುವನಾತ ಜಗದ ಕಟ್ಟಕಡೆಯವರೆಗೆ ಶಕ್ತಿಸಾಮರ್ಥ್ಯವನೀವನು ತಾ ನೇಮಿಸಿದರಸನಿಗೆ ಏರಿಸುವನು ತನ್ನಭಿಷಿಕ್ತನ ಒಲುಮೆಯನು ಉನ್ನತಿಗೆ.


ನಿಮ್ಮಲ್ಲಿ ಯಾರಾದರೂ ಸಂಕಟದಲ್ಲಿದ್ದರೆ ಅಂಥವನು ದೇವರಲ್ಲಿ ಪ್ರಾರ್ಥಿಸಲಿ. ಸಂತೋಷದಲ್ಲಿದ್ದರೆ ದೇವರಿಗೆ ಸ್ತುತಿಗಾನ ಹಾಡಲಿ.


“ನಿನ್ನ ಶತ್ರುಗಳನ್ನು ನಾನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ‘ನನ್ನ ಪ್ರಭುವಿಗೆ’ ಸರ್ವೇಶ್ವರ ಹೇಳಿದ್ದಾರೆ.”


ದೇವಪುರುಷನದ ಮೋಶೆ ದೇಹವನ್ನು ಬಿಡುವುದಕ್ಕಿಂತ ಮುಂಚೆ ಇಸ್ರಯೇಲರನ್ನು ಕುರಿತು ಹೇಳಿದ ಆಶೀರ್ವಚನಗಳಿವು:


ಯಕೋಬನು ತನ್ನ ಮಕ್ಕಳನ್ನು ಕರೆಯಿಸಿ ಇಂತೆಂದನು: ಕೂಡಿಬನ್ನಿ ನೀವೆಲ್ಲರು, ನುಡಿವೆನು ನಿಮಗೆ ಮುಂದೆ ಸಂಭವಿಸುವುದನ್ನು;


ದಾವೀದನು ಜೆಸ್ಸೆಯ ಎಂಬವನ ಮಗ. ಜೆಸ್ಸೆಯ ಯೆಹೂದದ ಬೆತ್ಲೆಹೇಮ್ ಊರಿನ ಎಫ್ರಾತ್ಯನು. ಸೌಲನ ಕಾಲದಲ್ಲಿ ಹಣ್ಣುಹಣ್ಣು ಮುದುಕ. ಇವನ ಎಂಟುಮಂದಿ ಮಕ್ಕಳಲ್ಲಿ ದಾವೀದನು ಒಬ್ಬ.


ಅವರು: ಸೌಲನು ಕೊಂದನು ಸಾವಿರಗಟ್ಟಳೆ ದಾವೀದನೋ ಕೊಂದನು ಹತ್ತುಸಾವಿರಗಟ್ಟಳೆ,” ಎಂದು ಪರಸ್ಪರ ಹಾಡಿದರು.


ನನಗಿತ್ತನಾತ ಹುಲ್ಲೆಯಂಥ ಮೊನೆಗಾಲು ಎನ್ನ ಬಿಗಿನಿಲ್ಲಿಸಿದ ಮಲೆಗಳ ಮೇಲೂ.


ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ.


ನನ್ನ ಕೈಯ ಆಸರೆ ಅವನಿಗಿದೆ ಸತತ I ನನ್ನ ಭುಜಬಲವು ಅವನಿಗೆ ಶಕ್ತಿಯುತ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು